ಮಕ್ಕಳಲ್ಲಿ ಕಾಡುತ್ತಿದೆ ವೈರಲ್ ಫ್ಲೂ…! ಪೋಷಕರು ಆಸ್ಪತ್ರೆಗಳತ್ತ ದೌಡು | ಕೆಮ್ಮು, ನೆಗಡಿ, ಜ್ವರ ಹೆಚ್ಚಳ

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ಹವಮಾನ ವೈಪರಿತ್ಯದಿಂದಾಗಿ ಜಿಲ್ಲೆಯ 18ವರ್ಷದೊಳಗಿನ ಮಕ್ಕಳಲ್ಲಿ ವೈರಲ್ ಫ್ಲೂ ಹೆಚ್ಚಾಗುತ್ತಿದ್ದು, ಕೆಮ್ಮು, ಜ್ವರ, ನೆಗಡಿಯಂತಹ ಲಕ್ಷಣಗಳು ಮಕ್ಕಳಲ್ಲಿ ಅತಿಯಾಗಿ ಕಾಣಿಸುತ್ತಿದ್ದು, ಸ್ಥಳೀಯ ಆಸ್ಪತ್ರೆಗಳತ್ತ ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಚಿಕಿತ್ಸೆ ಪಡೆಯುವ ದೃಶ್ಯ ಕಂಡುಬಂದಿರುತ್ತದೆ. ಸೆಪ್ಟಂಬರ್ ತಿಂಗಳಿನಲ್ಲಿ ವಾತಾವರಣ ಬದಲಾವಣೆಯು ಮಕ್ಕಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಿದ್ದು, ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಜಿಲ್ಲೆಯ ಕೆಲ ಖಾಸಗಿ ಮಕ್ಕಳ ಕ್ಲಿನಿಕ್‌ಗಳಲ್ಲಿ ದಿನಕ್ಕೆ 100ಕ್ಕೂ ಹೆಚ್ಚು ಮಕ್ಕಳು ಕೆಮ್ಮು, ನೆಗಡಿ, ಜ್ವರ, ಹೀಗೆ ಹಲವು ರೀತಿಯ ಕಾಯಿಲೆಗಳಿಗೆ ಚಿಕಿತ್ಸೆ ಪಡೆದುಕೊಳ್ಳಲು ಬರುತ್ತಿದ್ದು, ಮಕ್ಕಳು ತೀರ ಸಮಸ್ಯೆಯನ್ನು ಎದುರಿಸುವಂತೆ ಆಗಿದೆ. 

CHETAN KENDULI

*ವೈರಲ್ ಫೀವರ್*: ಜ್ವರವು ಮಕ್ಕಳಲ್ಲಿ ಕಾಣಿಸುತ್ತಿದ್ದು, ಮಕ್ಕಳು ಆಟವಾಡುವಾಗ ಜ್ವರದ ಲಕ್ಷಣವಿರುವ ಮಕ್ಕಳೊಂದಿಗೆ ಸೇರಿದಾಗ ಜ್ವರ ಸಾಂಕ್ರಾಮಿಕವಾಗಿ ಹರಡುತ್ತಿದೆ. ರಾತ್ರಿಯಾದರೆ ಕೆಲ ಮಕ್ಕಳಲ್ಲಿ ಜ್ವರ ಕಾಣಿಸುತ್ತಿದ್ದು, ಮಕ್ಕಳ ತೂಕದಲ್ಲಿಯೂ ಸಹ ವ್ಯತ್ಯಾಸ ಕಂಡುಬರುತ್ತಿದೆ. ಈಗಾಗಲೇ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳಿಗೂ ಸಹ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಹೆಚ್ಚಾಗಿ ಜ್ವರ, ಕೆಮ್ಮು, ನೆಗಡಿ ಲಕ್ಷಣಗಳನ್ನು ಹೊಂದಿರುವ ಮಕ್ಕಳು ಆಸ್ಪತ್ರೆಗಳಿಗೆ ಬರುತ್ತಿದ್ದಾರೆ. ನಿಮೋನಿಯದಂತಹ ಲಕ್ಷಣ ಕಂಡುಬಂದಿರುವುದಿಲ್ಲ. ಪೋಷಕರು ಮಕ್ಕಳನ್ನು ಒಂದು ಕಡೆ ಗುಂಪಾಗಿರದಂತೆ ಎಚ್ಚರವಹಿಸಬೇಕು. ಜತೆಗೆ ಆದಷ್ಟು ಬಿಸಿ ನೀರು ಮತ್ತು ವಿಶ್ರಾಂತಿ ಮಾಡಲು ಬಿಡಬೇಕೆಂಬುವುದು ವೈದ್ಯರ ಸಲಹೆಯಾಗಿದೆ. 

**************

ಮದುವೆ ಸಮಾರಂಭಗಳು, ಕಾರ್ಯಕ್ರಮಗಳು ಇತರೆ ಜನಬೀಡು ಸೇರುವ ಜಾಗಗಳಲ್ಲಿ ಮಕ್ಕಳನ್ನು ಕಳುಹಿಸಬಾರದು. ಒಂದು ಮಗುವಿಗೆ ರೋಗ ಲಕ್ಷಣಗಳು ಇದ್ದರೆ, ಆ ಮಗುವೊಂದಿಗೆ ಮತ್ತೊಂದು ಮಗು ಸೇರದಂತೆ ನಿಗಾವಹಿಸಬೇಕು. ಹೆಚ್ಚಾಗಿ ತೇವಾಂಶಯುಕ್ತ ಆಹಾರ ನೀಡಬೇಕು. ವೈದ್ಯರ ಸಲಹೆ ಪಡೆದು ಚಿಕಿತ್ಸೆ ನೀಡಬೇಕು. ಪೋಷಕರು ಆತಂಕ ಪಡುವ ಅವಶ್ಯತೆ ಇಲ್ಲ. ವಾತಾವರಣ ವ್ಯತ್ಯಾಸದಿಂದ ಈ ರೀತಿಯ ಜ್ವರ, ನೆಗಡಿ ಮತ್ತು ಕೆಮ್ಮು ಲಕ್ಷಣಗಳು ಕಾಣಿಸುತ್ತದೆ ಅದಕ್ಕೆ ಸೂಕ್ತ ಆಂಟಿಬಯೋಟಿಕ್ಸ್ ಪಡೆದುಕೊಳ್ಳಬೇಕು. 

– ಎ.ತಿಪ್ಪೇಸ್ವಾಮಿ | ಉಪನಿರ್ದೇಶಕರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಸುಮಾರು ಮೂರ್‍ನಾಲ್ಕು ದಿನದಿಂದ ಮಗುವಿಗೆ ಕೆಮ್ಮು ಮತ್ತು ನೆಗಡಿ ಲಕ್ಷಣವಿತ್ತು. ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ, ಎರಡು ದಿನದ ನಂತರ ಜ್ವರ ಕಾಣಿಸಿಕೊಂಡು ೧೦೧.೪ಡಿಗ್ರಿ ದೇಹ ಉಷ್ಣಾಂಶ ಇತ್ತು. ಕಳೆದ ಬಾರಿಗಿಂತ ಒಂದು ಕೆಜಿ ತೂಕ ಕಡಿಮೆಯಾಗಿದೆ. ವೈದ್ಯರ ಸಲಹೆ ಪಡೆದಿದ್ದೇನೆ. – ಶಾಜೀನ್ | ಮಗುವಿನ ತಾಯಿ, ದೇವನಹಳ್ಳಿಚಿತ್ರ: ಮಕ್ಕಳಲ್ಲಿ ವೈರಲ್ ಫ್ಲೂ (ಸಾಂದರ್ಭಿಕ ಚಿತ್ರ)

Be the first to comment

Leave a Reply

Your email address will not be published.


*