ಮಕ್ಕಳ ಹಕ್ಕುಗಳ ಕುರಿತು ತರಬೇತಿ:ಮಕ್ಕಳಿಗೆ ತೊಂದರೆ ಉಂಟಾದರೆ 1098 ಗೆ ಕರೆ ಮಾಡಿ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ: ರೀಚ ಸಂಸ್ಥೆ ಮಕ್ಕಳ ಸಹಾಯವಾಣಿ – 1098 ಬಾಗಲಕೋಟೆ ಮತ್ತು ಡಾನ್ ಬಾಸ್ಕೋ ದೇವದುರ್ಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಇಲಕಲ್ ತಾಲೂಕಿನ ವಡಗೆರಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳಿಗೆ ಮಕ್ಕಳ ಹಕ್ಕುಗಳ ಕುರಿತು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಪ್ರಾಸ್ತಾವಿಕವಾಗಿ ಮಾತಾನಡಿದ ಯಲ್ಲಪ್ಪ ಬಾರಕೇರ ಸಂಯೋಜಕರು ಕ್ರೀಮ್ ಯೋಜನೆ ಹುನಗುಂದ ಇವರು ಮಕ್ಕಳಿಗೆ ಮೂರು ಹಂತಗಳಲ್ಲಿ ತರಬೇತಿ ಹಮ್ಮಿಕೊಳ್ಳಲಾಗಿದ್ದು, ಮೊದಲನೇ ಹಂತದಲ್ಲಿ ಮಕ್ಕಳ ಹಕ್ಕುಗಳು ಮತ್ತು ಅದರ ಇತಿಹಾಸದ ಕುರಿತು ತಿಳಿಸುವುದು, ಎರಡನೇ ಹಂತ ಮಕ್ಕಳಿಗೆ ಸಂಬಂಧಿಸಿದ ಕಾನೂನು ಕಾಯ್ದೆಗಳು ಕುರಿತು ಸಂಪೂರ್ಣ ಮಾಹಿತಿ ನೀಡುವುದು ಹಾಗೂ ಮೂರನೆ ಹಂತದಲ್ಲಿ ಮಕ್ಕಳಿಗೆ ಇರುವ ಸರಕಾರಿ ಸೌಲಭ್ಯದ ಕುರಿತು ಮಾಹಿತಿಯನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು.

ಬಸಲಿಂಗಪ್ಪ ನೀರಲಕೇರಿ ಸಂಯೋಜಕರು ಮಕ್ಕಳ ಸಹಾಯವಾಣಿ -1098,ರೀಚ್ ಸಂಸ್ಥೆ ಬಾಗಲಕೋಟೆ ಇವರು ಮಾತನಾಡುತ್ತಾ ಮಕ್ಕಳ ಹಕ್ಕುಗಳು ಹಾಗೂ ಮಕ್ಕಳ ಹಕ್ಕುಗಳ ಇತಿಹಾಸದ ಕುರಿತು ಮಕ್ಕಳಿಗೆ ಸಂಪೂರ್ಣ ಮಾಹಿತಿಯನ್ನು ನೀಡುವುದರ ಜೊತೆಗೆ ಮಕ್ಕಳಿಗೆ ಇರುವ ಮೂಲಭೂತ ಹಕ್ಕುಗಳಾದ ಬದುಕುವ ಹಕ್ಕು, ರಕ್ಷಣೆ ಹಕ್ಕು, ಭಾಗವಹಿಸುವ ಹಕ್ಕು ಮತ್ತು ಅಭಿವೃದ್ಧಿ ಮತ್ತುವಿಕಾಸ ಹೊಂದುವ ಹಕ್ಕು, ಶಿಕ್ಷಣ ಹಕ್ಕುಗಳ ಕುರಿತು ಮಾಹಿತಿಯನ್ನು ನೀಡಿ ಪ್ರತಿಯೊಬ್ಬ ಮಗು ಹಕ್ಕುಗಳಿಂದ ವಂಚಿತರಾಗಬಾರದು ಇವುಗಳನ್ನು ಮಕ್ಕಳು ಸಂಪೂರ್ಣವಾಗಿ ಅನುಭವಿಸಬೇಕು. ಅದೇ ರೀತಿ ಎಲ್ಲಿಯಾದರೂ ಮಕ್ಕಳಿಗೆ ತೊಂದರೆ ಹಾಗೂ ಸಮಸ್ಯೆಗಳು ಉಂಟಾದರೆ ಮಕ್ಕಳ ಸಹಾಯವಾಣಿ -1098 ಗೆ ಮಾಹಿತಿ ನೀಡಿ ಮಕ್ಕಳು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಂತೆ ಮಾಹಿತಿ ನೀಡಿದರು.ಜೊತೆಗೆ ಬಾಲ್ಯ ವಿವಾಹ ಎನ್ನುವುದು ಒಂದು ಸಾಮಾಜಿಕ ಪಿಡುಗಾಗಿದೆ ಅದನ್ನು ತಡೆಗಟ್ಟುವ ಜವಾಬ್ದಾರಿ ಪ್ರತಿಯೊಬ್ಬ ಮಕ್ಕಳು ಮತ್ತು ನಾಗರಿಕರ ಕರ್ತವ್ಯವಾಗಿದೆ. ಅದಕ್ಕಾಗಿ ಮಕ್ಕಳ ಸಹಾಯವಾಣಿ – 1098 ಗೆ ಮಾಹಿತಿ ನೀಡುವುದರ ಮೂಲಕ ಬಾಲ್ಯವಿವಾಹ ಮತ್ತು ಮಕ್ಕಳ ಮೇಲಾಗುವ ದೌರ್ಜನ್ಯ ವನ್ನು ತಡೆಗಟ್ಟುವಂತೆ ತಿಳಿಸಿದರು.

ಕಾರ್ಯಕ್ರಮವನ್ನು ಶಾಲಾ ಮಕ್ಕಳಾದ ಕು. ಗೀತಾ ನರೆನ್ನವರ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಗುರುಗಳಾದ ಎಸ್ ಜಿ ಹೊಸಮನಿ ವಹಿಸಿದ್ದರು,ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ಟಿ.ವಾಯ್.ಗೊಲ್ಲರ,ಟಿ.ಸಿ. ನಾಗನೂರು,ಎಚ್.ಎಸ್.ಶಂಕರ,ಬಿ.ಎಂ.ಪಣಿಬಂದ ಪಿ. ಬಿ .ನಾಡಗೌಡ್ರ, ಎ .ಎಸ್. ಹಿರೇನಿಂಗಣ್ಣವರ್ ಹಾಗೂ ಮಕ್ಕಳು ಭಾಗವಹಿಸಿದ್ದರು.

Be the first to comment

Leave a Reply

Your email address will not be published.


*