ಅಬಕಾರಿ ದಾಳಿ : 2 ಸಾವಿರ ಕಳ್ಳಬಟ್ಟಿ ನಾಶ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ :ಅಬಕಾರಿ ಉಪ ಆಯುಕ್ತ ಎಚ್.ರಮೇಶಕುಮಾರ, ಅಬಕಾರಿ ಉಪ ಅಧೀಕ್ಷಕ ಎಸ್.ಎನ್.ಹಿರೇಮಠ ಅವರ ನೇತೃತ್ವ ಹಾಗೂ ಅಬಕಾರಿ ಉಪ ಅಧೀಕ್ಷಕ ಆರ್.ಎಂ.ಮುದಿಗೌಡರ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ದಾಳಿ ತಂಡ ಬಾಗಲಕೋಟೆ ವಲಯ ಕಚೇರಿಯಲ್ಲಿನ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 2 ಸಾವಿರ ಕಳ್ಳಬಟ್ಟಿ ನಾಶಪಡಿಸಿದೆ.

ಕಳ್ಳಬಟ್ಟಿಯ ಜೊತೆ 610 ಲೀಟರದಷ್ಟು ಬೆಲ್ಲದ ರಸಾಯನ, 198 ಲೀಟರ್ ಭಾರತೀಯ ತಯಾರಿಕೆ ಮದ್ಯ, 244 ಲೀಟರ್ ಸ್ಟಿರಿಚ್, 20 ಲೀಟರ್ ಬಿಯರ್, 1 ಲೀಟರ್ ದಷ್ಟು ಕೆದ್ಯಾಮಲ್ ನಾಶಪಡಿಸಲಾಯಿತು. ದಾಳಿ ಸಮಯದಲ್ಲಿ ಅಬಕಾರಿ ನಿರೀಕ್ಷಕ ಶಿವಾನಂದ ಹೂಗಾರ, ನಿರೀಕ್ಷಕ ವಿಠಲ ಪರಗಣ್ಣವರ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.

Be the first to comment

Leave a Reply

Your email address will not be published.


*