ಜಿಲ್ಲಾ ಸುದ್ದಿಗಳು
ಬಾಗಲಕೋಟೆ: ರಾಜ್ಯ ಭೋವಿ ಅಭಿವೃದ್ದಿ ನಿಗಮದಿಂದ ಪ್ರಸಕ್ತ ಸಾಲಿಗೆ ನೇರಸಾಲ, ಉದ್ಯಮಶೀಲತಾ ಅಭಿವೃದ್ದಿ ಯೋಜನೆ, ಮೈಕ್ರೋಕ್ರೆಡಿಟ್ ಯೋಜನೆ, ಗಂಗಾ ಕಲ್ಯಾಣ ಹಾಗೂ ಭೂ ಒಡೆತನ ಯೋಜನೆಯಡಿ ಸೌಲಭ್ಯಕ್ಕಾಗಿ ಪರಿಶಿಷ್ಟ ಜಾತಿಯ ಭೋವಿ ಜನಾಂಗದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸ್ವಯಂ ಉದ್ಯೋಗ ಕೈಗೊಳ್ಳಲು ನೇರ ಸಾಲ ಯೋಜನೆಯಡಿ ಗರಿಷ್ಠ ಘಟಕ ವೆಚ್ಚಕ್ಕೆ 50 ಸಾವಿರ ರೂ.ವರೆಗೆ ಅದರಲ್ಲಿ ಶೇ.50 ರಷ್ಟು ಸಾಲ ಮತ್ತು ಶೇ.50 ರಷ್ಟು ಸಹಾಯಧನ ನೀಡಲಾಗುತ್ತದೆ. ಉದ್ಯಮಶೀಲತಾ ಯೋಜನೆಯಡಿ ಘಟಕ ವೆಚ್ಚಕ್ಕೆ 2 ಲಕ್ಷ ಸಹಾಯಧನ, ಗರಿಷ್ಠ ಮಿತಿ 3.50 ಲಕ್ಷ ಸಹಾಯಧನ ಮತ್ತು ಉಳಿದ ಮೊತ್ತ ಬ್ಯಾಂಕ್ ಸಾಲದಿಂದ ಭರಿಸಲಾಗುತ್ತದೆ. ಮೈಕ್ರೋಕ್ರೆಡಿಟ್ ಯೋಜನೆಯಡಿ ಸ್ವ-ಸಹಾಯ ಮಹಿಳಾ ಸಂಘಗಳಿಗೆ 2.50 ಲಕ್ಷ ಸಾಲ ಮತ್ತು ಸಹಾಯಧನ ನೀಡಲಾಗುತ್ತದೆ.
ಭೂ ಪಡೆತನ ಯೋಜನೆಯಡಿ ಭೂ ರಹಿತ ಅತೀಸಣ್ಣ ಯೋಗ್ಯವಾದ ಜಮೀನು ಖರೀದಿಗೆ 15 ರಿಂದ 20 ಲಕ್ಷ ರೂ., ಘಟಕ ವೆಚ್ಚದಲ್ಲಿ ಸಾಲ ಸೌಲಭ್ಯ ಮಂಜೂರು ಮಾಡಲಾಗುತ್ತದೆ. ಆಸಕ್ತರು ವೆಬ್‍ಸೈಟ್ http://kbdc.karnataka.govt.in ಮೂಲಕ ಅಗತ್ಯ ದಾಖಲಾತಿಗಳೊಂದಿಗೆ ಅಪಲೋಡ್ ಮಾಡಬೇಕು. ಅರ್ಜಿ ನಮೂನೆಯಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಕೊನೆ ದಿನ ಅಕ್ಟೋಬರ 14 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ದೂಸಂ.08354-235214ಗೆ ಸಂಪರ್ಕಿಸುವಂತೆ ರಾಜ್ಯ ಭೋವಿ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Be the first to comment