ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ,ತಾಲ್ಲೂಕು ಶಾಖೆ ಇಳಕಲ್ ವತಿಯಿಂದ “2020 ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಾಗೂ “2021 ನೇ ಸಾಲಿನ ಸಾಮಾನ್ಯ ಸಭೆ”ಯು ಇಳಕಲ್ ನಗರದ ಬಸವಾ ಪ್ಯಾಲೇಸ್ ನಲ್ಲಿ ಅಧ್ಯಕ್ಷರಾದ ಪರಶುರಾಮ ಪಮ್ಮಾರ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಇಳಕಲ್ ತಾಲೂಕಾ ಘಟಕದ ಸರ್ಕಾರಿ ನೌಕರರ ಸಂಘವು ನೂತನ ತಾಲ್ಲೂಕು ಶಾಖೆ ಆಗಿದ್ದು, ಅತ್ಯಂತ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸದ್ಯದಲ್ಲಿಯೇ ನೌಕರರ ಸಂಘಕ್ಕೆ ಜಿಲ್ಲಾಧಿಕಾರಿಗಳಿಂದ ನಿವೇಶನ ಮಂಜೂರು ಮಾಡಿಸಲಾಗುವುದು ಎಂದು ಜಿಲ್ಲಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಬಳ್ಳಾರಿ ರವರು ಮಾತನಾಡಿದರು.
2020 ನೆ ಸಾಲಿನ ಪ್ರತಿಭಾನ್ವಿತ ಸರ್ಕಾರಿ ನೌಕರರ ಮಕ್ಕಳಾದ ಲಕ್ಷ್ಮಿ ಪಾಟೀಲ,ವಿಶ್ವೇಶ್ವರಯ್ಯ ರಾಮಗಿರಿಮಠ,ಪ್ರಜ್ವಲ ಬಂಡಿ,ಭೂಮಿಕಾ ಜೋಗಿನ,ಮಾಂತಯ್ಯ ಚೌಕಿಮಠ ಹಾಗೂ ಸಹನಾ ಹಿರೇಮಠ ಇವರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾಸ ಸಿ ಬಿ ಮ್ಯಾಗೇರಿ ಇಂದು ಸರಕಾರಿ ನೌಕರ ಸಂಘದ ಈ ಕಾರ್ಯಕ್ರಮವು ಮಾದರಿ ಕಾರ್ಯಕ್ರಮವಾಗಿದ್ದು ಇಲಾಖೆಯು ಯಾವಾಗಲೂ ಸಂಘದ ಜೊತೆಗೆ ಇರುತ್ತದೆ ಎಂದರು.ಇದೆ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಗರಸಭೆ ಪೌರಾಯುಕ್ತರಾದ ರಾಮಕೃಷ್ಣ ಸಿದ್ದನಕೊಳ್ಳರವರು ಮಾತನಾಡಿ ನೌಕರರ ಸಂಘವು ಇಷ್ಟು ಕ್ರೀಯಾಶೀಲತೆಯಿಂದ ಕಾರ್ಯನಿರ್ವಹಿಸಲು ನಿಮ್ಮೆಲ್ಲರ ಸಹಕಾರ ಕಾರಣವಾಗಿದ್ದು ನಿವೇಶನ ಮಂಜೂರಿಯ ಮುಂದಿನ ಕಾರ್ಯವನ್ನು ಮಾಡಿಕೊಡಲಾಗುವುದು ಎಂದರು.
ಉದ್ಘಾಟನಾ ಪರ ಮಾತನಾಡಿದ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಬಳ್ಳಾರಿ, ಶತಮಾನದ ಇತಿಹಾಸವನ್ನು ಹೊಂದಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಸರ್ಕಾರಿ ನೌಕರರ ಆಶೋತ್ತರಗಳಿಗೆ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಪ್ರಮುಖ ಬೇಡಿಕೆಯಾದ ಎನ್ ಪಿ ಎಸ್ ರದ್ದತಿ ಹಾಗೂ ಕೇಂದ್ರ ಮಾದರಿ ವೇತನ ಜಾರಿಗೊಳಿಸಲು ತೀವ್ರ ಹೋರಾಟ ಮಾಡಲಾಗುವುದು ಎಂದರು.ಖಜಾಂಚಿಗಳಾದ ಎಂ ಎಚ್ ಗೌಡರ 2021 ನೇ ಸಾಲಿನ ವಾರ್ಷಿಕ ವರದಿ ಮಂಡನೆ ಮಾಡಿ ಸಭೆಯ ಅನುಮೋದನೆಯನ್ನು ಪಡೆದರು.
ಅಧ್ಯಕ್ಷೀಯ ಸಮಾರೋಪ ಭಾಷಣ ಮಾಡಿದ ತಾಲ್ಲೂಕು ಅಧ್ಯಕ್ಷರಾದ ಪರಶುರಾಮ ಪಮ್ಮಾರ ಎರಡು ವರ್ಷದ ಹಿಂದೆ ರಚನೆಯಾದ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಸಭೆಗೆ ಮಾಹಿತಿ ನೀಡುವುದರೊಂದಿಗೆ ಸಂಘವು ಎಂದೆಂದಿಗೂ ನೌಕರರ ಬೇಕು ಬೇಡಿಕೆಗಳ ಧ್ವನಿಯಾಗಿರುತ್ತದೆ ಎಂದರು.ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಸರ್ವರನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಖಜಾಂಚಿಗಳಾದ ಎಸ್ ಕೆ ಹಿರೇಮಠ,ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಿಠ್ಠಲ ಎಲ್ ವಾಲಿಕಾರ,ಗೌರವಾಧ್ಯಕ್ಷರಾದ ಎಸ್ ಎನ್ ಗಡೇದ,ಶಿಕ್ಷಕರ ಸಂಘದ ಅಧ್ಯಕ್ಷರಾದ ಆರ್ ಎಂ ಮಾಸರೆಡ್ಡಿ,ಆರೋಗ್ಯ ಇಲಾಖೆಯ ಅಧ್ಯಕ್ಷರಾದ ಭದ್ರಣ್ಣವರ ಹಾಗೂ ತಾಲ್ಲೂಕು ಶಾಖೆಯ ಎಲ್ಲಾ ಪದಾಧಿಕಾರಿಗಳು, ಸರ್ಕಾರಿ ನೌಕರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಾರ್ಥನೆಯನ್ನು ಶ್ರೀ ಪ್ರಭು ಬನ್ನಿಗೋಳಮಠ, ಸ್ವಾಗತವನ್ನು ಗುಂಡಪ್ಪ ಎ ಕುರಿ,ಪ್ರಾಸ್ತಾವಿಕವಾಗಿ ಈಶ್ವರ ಗಡ್ಡಿ ರವರು ಮಾತನಾಡಿದರು. ವಂದನಾರ್ಪಣೆಯನ್ನು ಶ್ರೀ ಎಸ್ ಡಿ ಮಲಗಿಹಾಳ ಹಾಗೂ ನಿರೂಪಣೆಯನ್ನು ಶ್ರೀ ಸಂಗಣ್ಣ ಗದ್ದಿ & ಶ್ರೀ ಶ್ರೀಕಾಂತ ಆವಿನ ನಡೆಸಿಕೊಟ್ಟರು.
Be the first to comment