ಪುರಸಭೆಯಲ್ಲಿ ನಗರದ ಗಣೇಶೊತ್ಸವ ಸಮಿತಿ ಪಧಾಧಿಕಾರಿಗಳ ಉತ್ಸವದ ಪೂರ್ವಭಾವಿ ಸಭೆ.

ವರದಿ -ಜೀವೋತ್ತಮ ಪೈ

ಜಿಲ್ಲಾ ಸುದ್ದಿಗಳು 

ಭಟ್ಕಳದ ಪುರಸಭೆಯ ಅಧ್ಯಕ್ಷರಾದ ಪರ್ವೇಜ ಖಾಶಿಂಜಿ ಅವರ ಅಧ್ಯಕ್ಷತೆಯಲ್ಲಿ ಇಂದು ಸಂಜೆ 4-00 ಘಂಟೆಗೆ ಪುರಸಭೆ ಹಾಲ್‌ನಲ್ಲಿ ಸಭೆ ಜರುಗಿತು. ಪುರಸಭೆಯ ವ್ಯವಸ್ಥಾಪಕರಾದ ಶ್ರೀ ವೇಣುಗೋಪಾಲರವರು ಗಣೇಶ ಮೂರ್ತಿ ತಯಾರಿಕೆಯ ಬಗ್ಗೆ ಹಾಗೂ ನೈಸರ್ಗಿಕ ಬಣ್ಣಗಳನ್ನು ಬಳಸಿ ಮೂರ್ತಿ ತಯಾರಿಸುವ ಬಗ್ಗೆ ಸರ್ಕಾರದ ಸುತ್ತೊಲೆ ಬಗ್ಗೆ ಸಭೆಯಲ್ಲಿ ವಿವರಿಸಿದರು. ಆ ಬಗ್ಗೆ ಶ್ರೀಧರ ನಾಯ್ಕ ಆಸರಕೇರಿ ಮಾತನಾಡಿ ಪಿ ಒ ಪಿ ಗಳನ್ನು ಯಾ ರಾಸಾಯನಿಕಗಳನ್ನು ಬಳಸಿ ಭಟ್ಕಳದಲ್ಲಿ ಮೂರ್ತಿ ತಯಾರಿಸುದಿಲ್ಲ .

CHETAN KENDULI

ಅದರ ಬದಲಾಗಿ ಹಿಟ್ಟುಗಳಿಂದ ಯಾ ಪರಸರ ಸ್ನೇಹಿನ ಗಣಪತಿಗಳನ್ನು ಮೊದಲಿನಿಂದಲೂ ಈ ಭಾಗಗಳಲ್ಲಿ ಹೆಚ್ಚಾಗಿ ಪೂಜಿಸುತ್ತಾರೆ ಎಂದರು. ಶಂಕರ ಶಟ್ಟಿ ಇವರು ಮಾತನಾಡಿ ಕೊರೋನಾ ಕಾಲವಾಗಿರುವುದರಿಂದ ಸಾಮಾಜಿಕ ಅಂತರ ಮಾಸ್ಕ ಧರಿಸುವುದು ಸೇರಿದಂತೆ ಸರ್ಕಾರದ ನಿಯಮಗಳು ಮೀರದಂತೆ ಉತ್ಸವ ಆಚರಿಸುವುದಕ್ಕೆ ಸಿದ್ದತೆ ಮಾಡಿಕೊಂಡಿರುವುದಾಗಿ ತಿಳಿಸಿದರು.

ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ರಾಧಿಕಾ.ಎಸ್‌.ಎನ್ ಪುರಸಭೆ ವ್ಯವಸ್ಥಾಪಕ ಶ್ರೀ ವೇಣುಗೋಪಾಲ ಶಾಸ್ತ್ರೀ, ಆರೋಗ್ಯಾಧಿಕಾರಿ ಸುಜೆಯಾ ಸೋಮನ್‌, ಗಣೇಶ ಭಟ್‌, ಸುರೇಂದ್ರ ಭಟ್ಕಳಕರ, ಶ್ರೀವಾಮನ ಶಿರಸಾಟ, ಶ್ರೀ ಸುರೇಶ ಆಚಾರ್ಯ, ಕೃಷ್ಣಾ ನಾಯ್ಕ ಆಸರಕೇರಿ ಮತ್ತು ರಿಕ್ಷಾಮಾಲಕರ ಚಾಲಕರ ಗಣೇಶೊತ್ಸವದ ಪದಾಧಿಕಾರಿಗಳು, ರಥಬೀದಿ ಗಣೇಶೋತ್ಸವದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*