ಜೀಲ್ಲಾ ಸುದ್ದಿಗಳು
ಸಿರವಾರ:(ಆ . 29 )- ನಾರಬಂಡ ಸಮೀಪದ ಹುಣಚೇಡ ಕ್ರಾಸ್ ನಲ್ಲಿ ಕುರುಕುಂದಾ ಗ್ರಾಮಕ್ಕೆ ಕ್ರೀಡಾ ಕೂಟಕ್ಕೆ ತೆರಳಿದ್ದ ಸಿರವಾರ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳ ಟಾಟಾಎಸಿ ( ಟಂಟಂ ) ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ .
ಒಟ್ಟು 40 ವಿದ್ಯಾರ್ಥಿಗಳು ಕುರುಕುಂದಾ ಗ್ರಾಮದಲ್ಲಿ ನಿನ್ನೆ ನಡೆದ ಕ್ರೀಡಾಕೂಟಕ್ಕೆ ತೆರಳಿದ್ದ ವಿದ್ಯಾರ್ಥಿಗಳಲ್ಲಿ 35 ವಿದ್ಯಾರ್ಥಿಗಳಿಗೆ ಗಾಯಗಳು , ಮತ್ತು 5 ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿವೆ . ಚಾಲಕನ ಆಚಾತುರ್ಯ ಹಾಗೂ ನಿಗದಿತಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿರುವುದೇ ಈ ಘಟನೆಗೆ ಮುಖ್ಯ ಕಾರಣವಾಗಿದೆ ಎಂದು ತಿಳಿದು ಬಂದಿದೆ .
ಗಾಯಾಳುಗಳನ್ನು ಸಿರವಾರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಎಲ್ಲಾ ಮಕ್ಕಳನ್ನು ರಾಯಚೂರಿನ ರಿಮ್ಗೆ ದಾಖಲಿಸಲಾಗಿದೆ .
ಗಾಯಾಳು ವಿದ್ಯಾರ್ಥಿಗಳನ್ನು ಬೇಟಿಯಾದ ಮಾನವಿ ಶಾಸಕ ರಾಜಾ ವೆಂಕಟಪ್ಪ ನಾಯಕ
ಶಾಸಕ ಭೇಟಿ : ಘಟನೆ ವಿಷಯ ತಿಳಿದ ಶಾಸಕ ರಾಜಾ ವೆಂಕಟಪ್ಪನಾಯಕ್ , ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಗಾಯಾಳು ವಿದ್ಯಾರ್ಥಿಗಳನ್ನು ವಿಚಾರಿಸಿದ್ದಾರೆ , ಮತ್ತು ಘಟನೆಯ ಕುರಿತು ಪಿ . ಎಸ್ . ಐ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ , ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು .
ರಾಯಚೂರು ಜಿಲ್ಲಾಧಿಕಾರಿ ಬಿ ಶರತ್ ರಿಮ್ಸಗೆ ಭೇಟಿ
Be the first to comment