ಶಿಕ್ಷಣ ಕ್ಷೇತ್ರದಲ್ಲಿ ಮತ್ತೊಂದು ಮಹತ್ತರ ಕ್ರಾಂತಿಗೆ ನಾಂದಿ ಹಾಡಿದ SRNE ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಎಸ್ ಆರ್ ನವಲಿಹಿರೇಮಠ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ: ಕೂಡಲಸಂಗಮದಲ್ಲಿ KAS, PSI, PC, FDA, SDA, PDO ಹಾಗೂ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿಗೆ ಆಯ್ಕೆಯ ಪ್ರವೇಶ ಪರೀಕ್ಷೆಯನ್ನು ನಡೆಸಲಾಯಿತು. ಈ ಪ್ರವೇಶ ಪರೀಕ್ಷೆಯಲ್ಲಿ ಹುನಗುಂದ-ಇಳಕಲ್ ಅವಳಿ ತಾಲ್ಲೂಕಿನ ಸುಮಾರು 1450 ವಿದ್ಯಾರ್ಥಿಗಳು ಭಾಗವಹಿಸಿ ಪ್ರವೇಶದ ಪರೀಕ್ಷೆಯನ್ನು ಎದುರಿಸಿದರು. ಈ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದ 100 ವಿದ್ಯಾರ್ಥಿಗಳಿಗೆ ಉಚಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ಕೂಡಲಸಂಗಮದಲ್ಲಿ ನೆರವೇರಿತು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರಾಮಾಣಿಕ ಮತ್ತು ದಕ್ಷ ಪೋಲಿಸ್ ಅಧಿಕಾರಿ ನಿವೃತ್ತ ರಾಜ್ಯ ಪೋಲಿಸ್ ಮಹಾ ನಿರ್ದೇಶಕರಾದ ಶ್ರೀಯುತ ಶಂಕರ ಬಿದರಿಯವರು ಮಾತನಾಡಿ,ನಿಜಕ್ಕೂ ನವಲಿಹಿರೇಮಠರವರ ಕಾರ್ಯ ಪ್ರಶಂಸನೀಯವಾದದ್ದು,ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಮ್ಮ ಗುರಿ ಮತ್ತು ನಮ್ಮ ಚಲ ನಮ್ಮ ವಿದ್ಯಾಭ್ಯಾಸದ ಕಡೆ ಇರಬೇಕು ವಿನಃ ಬೇರೆ ಕಡೆ ಅಲ್ಲ. ಇಲ್ಲಿ ಯಾರು ಅಸಮರ್ಥರಲ್ಲ. ಎಲ್ಲರೂ ಪ್ರಜ್ಞಾವಂತರೆ ಮತ್ತು ತಮ್ಮೆಲರಲ್ಲಿ ವಿಶೇಷ ಶಕ್ತಿಯಿದೆ. ಆ ಶಕ್ತಿಯ ಮಹಿಮೆ ಈ ಭೂಮಿಯ ಮೇಲಿದೆ. ಏಕೆಂದರೆ ವಿಶ್ವ ಗುರು ಜನಸಿದ ಈ ಪುಣ್ಯ ಭೂಮಿಯಲ್ಲಿ ನಾವು ಹುಟ್ಟಿದ್ದೇವೆ ಎಂದರೆ ನಾವೆಲ್ಲರೂ ಪುಣ್ಯವಂತರು ಎಂದು ಅರ್ಥಗರ್ಭಿತವಾಗಿ ಸಾಕಷ್ಟು ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವ ಹಾಗೆ ಹೇಳಿದರು.

ಅದೇ ರೀತಿ SRNE ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಎಸ್, ಆರ್, ನವಲಿಹಿರೇಮಠರವರು ಮಾತನಾಡಿ,ಬಂಧುಗಳೆ ತಮ್ಮ ಪ್ರಜ್ಞಾವಂತಿಕೆಯನ್ನು ನಾನು ಮನಗೊಂಡಿದ್ದೇನೆ. ಆದರೆ ಆರ್ಥಿಕ ಪರಿಸ್ಥಿತಿ ಸರಿ ಇರದ ಕಾರಣ ಅದೇಷ್ಟೋ ವಿದ್ಯಾರ್ಥಿಗಳು ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ.ಈ ದೃಷ್ಟಿಕೋನದಿಂದ ನಮ್ಮ ಕ್ಷೇತ್ರದ ಯಾವುದೇ ವಿದ್ಯಾರ್ಥಿ ಶಿಕ್ಷಣದಿಂದ ವಂಚಿತರಾಗಬಾರದೆಂದು ಇಂದು ನನ್ನ SRNE ಫೌಂಡೇಶನ್ ಮುಖಾಂತರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಸ್ಪರ್ಧಾತ್ಮಕ ಪರೀಕ್ಷೆ ಶಿಬಿರಕ್ಕೆ ಚಾಲನೆಯನ್ನು ನೀಡಿದ್ದೇನೆ.
ದಯವಿಟ್ಟು ಎಲ್ಲ ವಿದ್ಯಾರ್ಥಿಗಳು ಯಾವುದೆ ಭಯಭೀತರಾಗದೆ ಪರೀಕ್ಷೆಯನ್ನು ನಿರ್ವಹಿಸಿ ಮತ್ತು ನಾವು ಆಯ್ಕೆಯಾಗಲಿಲ್ಲ ಎಂಬ ಕೊರಗನ್ನು ತಮ್ಮಲ್ಲಿ ಆವರಿಸಿಕೊಳ್ಳಬೇಡಿ. ಯಾರು ಅಸಂತೋಷದಿಂದ ಇರಬಾರದು. ಇದೇ ರೀತಿ ಪ್ರತಿ ವರ್ಷ ಉಚಿತ ತರಬೇತಿ ಶಿಬಿರಗಳು ನಡೆಯುತ್ತಲೆ ಇರುತ್ತವೆ ಎಂದು ವಿದ್ಯಾರ್ಥಿಗಳಿಗೆ ಆತ್ಮ ಸ್ಥೈರ್ಯ ತುಂಬಿದರು.

ಇದೇ ಸಂದರ್ಭದಲ್ಲಿ SRNE ಫೌಂಡೇಷನ್ ನ ಹಿರಿಯರಾದ ಜನಾಬ ಅಬ್ದುಲ್ ರಜಾಕ್ ತಟಗಾರ, ಶ್ರೀ ಬಸವರಾಜ ಹೆಸರೂರ, ಮಲ್ಲಿಕಾರ್ಜುನ್ ಗಾಣಿಗೇರ್, ಸಂಕಲ್ಪ IAS&KAS ಕೋಚಿಂಗ್ ಸೆಂಟರ್ ನ ಮುಖ್ಯಸ್ಥರಾದ ವಿಠ್ಠಲಗೌಡ ಪಾಟೀಲ ಮತ್ತಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*