ಕೋವಿಡ್ ಲಸಿಕಾ ಮೇಳ : 47,677 ಜನರಿಗೆ ಲಸಿಕೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ : ಜಿಲ್ಲೆಯಲ್ಲಿ ಲಸಿಕಾಕರಣ ಪ್ರಗತಿಯನ್ನು ವೃದ್ದಿಸುವ ನಿಟ್ಟಿನಲ್ಲಿ ಆಗಸ್ಟ 27 ರಂದು ಹಮ್ಮಿಕೊಂಡ ಕೋವಿಡ್-19 ಲಸಿಕಾ ಮೇಳದಲ್ಲಿ ಒಟ್ಟು 47677 ಜನರಿಗೆ ಲಸಿಕೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ಕೋವಿಶೀಲ್ಡ 44474 ಜನರಿಗೆ ನೀಡಿದರೆ, ಕೋವಾಕ್ಸಿನ್ 3203 ಜನರಿಗೆ ನೀಡಲಾಗಿದೆ. ಬಾದಾಮಿ ತಾಲೂಕಿನಲ್ಲಿ 10504 ಜನರಿಗೆ ನೀಡಿದರೆ, ಬಾಗಲಕೋಟೆ 5436 ಜನರಿಗೆ, ಬೀಳಗಿ 3728, ಹುನಗುಂದ 7152, ಜಮಖಂಡಿ 11659, ಮುಧೋಳ 9104 ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ 94 ಜನರಿಗೆ ಲಸಿಕೆ ನೀಡಲಾಗಿದೆ.

ಕೋವಿಶಿಲ್ಡ ಲಸಿಕೆಯನ್ನು ಫ್ರಂಟಲೈನ್ ವರ್ಕರ್ಸ್ 59 ಜನರಿಗೆ, 18 ರಿಂದ 44 ವರ್ಷದೊಳಗಿನ 29741 ಜನರಿಗೆ, 45 ರಿಂದ 60 ವರ್ಷದೊಳಗಿನ 10882, 60 ವರ್ಷ ಮೇಲ್ಪಟ್ಟ 3792 ಸೇರಿ ಒಟ್ಟು 44474 ಜನ ಪಡೆದರೆ, ಕೋವಾಕ್ಸಿನ್ ಲಸಿಕೆಯನ್ನು ಫ್ರಂಟಲೈನ್ ವರ್ಕರ್ಸ್ 4 ಜನರಿಗೆ, 18 ರಿಂದ 44 ವರ್ಷದೊಳಗಿನ 2334 ಜನರಿಗೆ, 45 ರಿಂದ 60 ವರ್ಷದೊಳಗಿನ 515, 60 ವರ್ಷ ಮೇಲ್ಪಟ್ಟ 350 ಸೇರಿ 3203 ಜನರಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*