ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಬಾಗಲಕೋಟೆ ನಗರದಲ್ಲಿ ಸ್ಥಾಪನೆ ಮಾಡಲು ಸ್ಥಳಾವಕಾಶ ನೀಡುವಂತೆ ಶಾಸಕರ ನೇತೃತ್ವದಲ್ಲಿ ಹಾಗೂ ಸದಸ್ಯರ ಉಪಸ್ಥಿತಿಯಲ್ಲಿ ನಡೆದ ನಗರಸಭಾ ಸಭೆಯಲ್ಲಿ ಒಮ್ಮತದಿಂದ ತಿರ್ಮಾನಿಸಿದಂತೆ ಸ್ಥಳ ಪರಿಶೀಲನೆ ಮಾಡಲಾಯಿತು.
ಈ ಸಂಬಂಧ ನಗರ ಪಾಲಿಕೆ ಸಭೆಯಲ್ಲಿ ನಗರ ಸಭಾ ಸದಸ್ಯರಾದ ಅಂಬಾಜಿ ಜೋಷಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆಗೆ ಸ್ಥಳಾವಕಾಶ ಮಾಡಿಕೊಡುವ ಸಂಬಂಧ ಧ್ವನಿ ಎತ್ತುವುದರ ಮೂಲಕ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಯಿತು.
”ಶಿವಾಜಿ ಅವರು ಹೊಂದಿದ್ದ ಅಷ್ಟಪ್ರಧಾನರು ಎನ್ನುವ ಮಂತ್ರಿಗಳ ಸಂಪುಟ ದಕ್ಷತೆಗೆ ಹೆಸರಾಗಿತ್ತು. ಕನ್ನಡಕ್ಕೂ ಶಿವಾಜಿ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಶಿವಾಜಿಯ ಆಳ್ವಿಕೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಯಿತು. ಹಿಂದೂಧರ್ಮದ ರಕ್ಷ ಣೆಗಾಗಿ ಶಿವಾಜಿ ನಿರಂತರ ಹೋರಾಟಗಳನ್ನು ಮಾಡಿದ್ದಾರೆ ಇಂಥವರ ಮೂರ್ತಿ ಸ್ಥಾಪನೆಗಾಗಿ ಸರ್ವರು ಸಹಕಾರ ನೀಡುವಂತೆ ಸ್ಥಳ ಪರಿಶೀಲನೆ ವೇಳೆಗೆ ಅಂಬಾಜಿ ಜೋಷಿಯವರು ಮನವಿ ಮಾಡಿಕೊಂಡರು.ಈ ಸಂದರ್ಭದಲ್ಲಿ ಜನಪ್ರಿಯ ಶಾಸಕರಾದ ವೀರಣ್ಣ ಚರಂತಿಮಠ, ಶರಣಪ್ಪ ಗುಳೆದ,ಗುಂಡುರಾವ್ ಶಿಂಧೆ, ಎಮ್.ಆರ್.ಶಿಂಧೆ,ರಾಜು ವಾಘ,ಮೋಹನ ಜಾದವ್, ಹಾಗೂ ಇತರರು ಉಪಸ್ಥಿತರಿದ್ದರು.
Be the first to comment