ಮುದ್ದೇಬಿಹಾಳ:
ಮುದ್ದೇಬಿಹಾಳ ತಾಲೂಕಾ ದಲಿತ ಸಂಘರ್ಷ ಸಮಿತಿ ನೂತನ ಅಧ್ಯಕ್ಷರನ್ನಾಗಿ ಪಟ್ಟಣದ ಅರುಣ ಚಲವಾದಿ ಅವರನ್ನು ಆಯ್ಕೆ ಮಾಡಿ ಜಿಲ್ಲಾಧ್ಯಕ್ಷ ಅಶೋಕ ಚಲವಾದಿ ಆದೇಶ ಹೊರಡಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಪ್ರಮುಖರು, ಈಗಾಗಲೇ ಸಾಕಷ್ಟು ಸಂಘಗಳಿವೆ. ಆದರೆ ನೂತಬವಾಗಿ ಅಸ್ಥಿತ್ವಕ್ಕೆ ಬಂದಿರುವ ಬ.ದ.ಸ.ಸಮಿತಿಯು ಸಮಾಜದ ಏಳಿಗೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ಸಂತೋಷ ಅಜಮನಿ, ಮಂಜು ಚಲವಾದಿ, ಪ್ರಕಾಶ ಚಲವಾದಿ, ಬಸವರಾಜ ಚಲವಾದಿ, ನಾಗರಾಜ ಚಲವಾದಿ, ಸಚಿನ ಚಲವಾದಿ, ಹಣಮಂತ ಚಲವಾದಿ ಸೇರಿದಂತೆ ಇತರರಿದ್ದರು.
Be the first to comment