ಸ್ವಚ್ಛ ಭಾರತ ಮಿಷನ್: ದ್ರವತ್ಯಾಜ್ಯ ನಿರ್ವಹಣೆ ತರಬೇತಿ ಸದುಪಯೋಗಕ್ಕೆ ಕರೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ :ಜಿಲ್ಲಾ ನೋಡಲ್ ಅಧಿಕಾರಿಗಳು ಹಾಗೂ ಅಭಿಯಂತರರಿಗೆ ಹಮ್ಮಿಕೊಂಡ ದ್ರವತ್ಯಾಜ್ಯ ನಿರ್ವಹಣೆ ತರಬೇತಿ ಕಾರ್ಯಾಗಾರದ ಸದುಪಯೋಗ ಪಡಿಸಿಕೊಳ್ಳುವಂತೆ ಜಿ.ಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ ಕರೆ ನೀಡಿದರು.

ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಸೋಮವಾರ ಸ್ವಚ್ಛ ಭಾರತ ಮಿಷನ್ ಹಾಗೂ ಸಿ.ಡಿ.ಸಿ ಸಂಸ್ಥೆ ಬೆಂಗಳೂರು ಇವರ ಸಹಯೋಗದಲ್ಲಿ ದ್ವವ್ಯ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿ ಅನುಷ್ಠಾನಗೊಳಿಸುವ ದೃಷ್ಠಿಯಿಂದ ಜಿಲ್ಲಾ ನೋಡಲ್ ಅಧಿಕಾರಿಗಳು ಮತ್ತು ಅಭಿಯಂತರರಿಗೆ ಹಮ್ಮಿಕೊಂಡ ಜಿಲ್ಲಾ ಮಟ್ಟದ ಅಡ್ವಾನ್ಸ್ ಮಾನ್ಯೂವಲ್ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದ್ರವತ್ಯಾಜ್ಯ ನಿರ್ವಹಣೆಯಲ್ಲಿ ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ನೋಡಲ್ ಅಧಿಕಾರಿಗಳಿಗೆ ಮತ್ತು ಪಿ.ಆರ್.ಇ.ಡಿ, ಆರ್.ಡಬ್ಲೂ.ಎಸ್, ನರೇಗಾ, ಎಸ್.ಎಲ್.ಡಬ್ಲೂಎಂ ಅಭಿಯಂತರರಿಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು. ತರಬೇತಿಯಿಂದ ದ್ರವತ್ಯಾಜ್ಯ ನಿರ್ವಹಣೆಗೆ ಕ್ರೀಯಾಯೋಜನೆ ರೂಪಿಸಲು ಅನುಕೂಲವಾಗಲಿದೆ. ಈ ಬಗ್ಗೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ. ತರಬೇತಿಯನ್ನು ಪೂರ್ಣಪ್ರಮಾಣದಲ್ಲಿ ಪಡೆದುಕೊಂಡು ಕ್ಷೇತ್ರದಲ್ಲಿ ಅನುಷ್ಠಾನಗೊಳಿಸುವ ಕಾರ್ಯವಾಗಬೇಕು ಎಂದರು.

ಬೆಂಗಳೂರಿನ ಸಿಡಿಡಿ ಸಂಸ್ಥೆಯ ಸಿನೀಯರ್ ಪ್ರೋಜೆಕ್ಟ ಮ್ಯಾನೇಜರಗಳಾದ ಆಂಡ್ರೀಸ್ ಜಾಕೋಬ, ದೈವರ್ಶಿ, ಮಧು ಅವರು ದ್ರವತ್ಯಾಜ್ಯ ನಿರ್ವಹಣೆ ಕುರಿತು ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿಯ (ಡಿಆರ್‍ಡಿಎ) ಯೋಜನಾ ನಿರ್ದೇಶಕ ಎಂ.ವಿ.ಚಳಗೇರಿ, ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ, ಸಮಾಲೋಚಕರಾದ ಶ್ರೀಶೈಲ ಬೆಳವಲಿ, ವಾಯ್.ಕೆ.ಪಾರ್ಸಿ, ಸಾಗರ ವಾಲಿಕಾರ ಉಪಸ್ಥಿತರಿದ್ದರು.

ತರಬೇತಿಯಲ್ಲಿ ಬಾಗಲಕೋಟೆ, ಬಾದಾಮಿ, ಗುಳೇದಗುಡ್ಡ, ಹುನಗುಂದ ತಾಲೂಕಿನ ಅಭಿಯಂತರರು ತರಬೇತಿ ಪಡೆದುಕೊಂಡರು. ನಂತರ ಬೇವೂರ ಮತ್ತು ಹಳ್ಳೂರ ಗ್ರಾಮಗಳ ಕ್ಷೇತ್ರ ಭೇಟಿ ಮಾಡಲಾಯಿತು.

Be the first to comment

Leave a Reply

Your email address will not be published.


*