ರೈತರಿಂದ ಖಾಸಗಿ ಆಗ್ರೋ ಕೇಂದ್ರಗಳಿಗೆ ಮುತ್ತಿಗೆ; ಕೃಷಿ ನಿರ್ದೇಶಕ ಕುಲಕರ್ಣಿ ತರಾಟೆಗೆ

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು 

 

ಮುಂಡಗೋಡ

ಪಟ್ಟಣದಲ್ಲಿ ಖಾಸಗಿ ಆಗ್ರೋ ಕೇಂದ್ರಗಳಲ್ಲಿ ರೈತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ನಿಲ್ಲಿಸಿ ಕೂಡಲೆ ಎರಡು ಖಾಸಗಿ ಆಗ್ರೋ ಕೇಂದ್ರಗಳ ಪರವಾನಗಿ ರದ್ದುಪಡಿಸಬೇಕು, ಯೂರಿಯಾ ಗೊಬ್ಬರ ದಾಸ್ತಾನು ಇದ್ದರೂ ಇಲ್ಲವೆಂದು ಹೇಳಿ ಬೇರೆ ಬೇರೆ ರೈತರಿಗೆ ಹೆಚ್ಚಿನ ದರದಲ್ಲಿ ಗೊಬ್ಬರ ಮಾರಾಟ ಮಾಡುತ್ತಿರುವುದನ್ನು ಖಂಡಿಸಿ ತಾಲೂಕಿನ ರೈತರು ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್.ಕುಲಕರ್ಣಿ ಅವರನ್ನು ಬುಧವಾರ ತರಾಟೆಗೆ ತೆಗೆದುಕೊಂಡರು.
ಶಿರಸಿ ರಸ್ತೆಯಲ್ಲಿರುವ ಮಹಾಲಸಾ ಆಗ್ರೋ ಕೇಂದ್ರ ಹಾಗೂ ಯಲ್ಲಾಪುರ ರಸ್ತೆಯಲ್ಲಿರುವ ಪ್ರಸನ್ನ ಆಗ್ರೋ ಕೇಂದ್ರಗಳಲ್ಲಿ ಯೂರಿಯಾ ಗೊಬ್ಬರದ ದಾಸ್ತಾನು ಇದ್ದರೂ ಇಲ್ಲವೆಂದು ಹೇಳಿ ಕೆಲ ರೈತರಿಗೆ ಹೆಚ್ಚಿನ ದರದಲ್ಲಿ ಗೊಬ್ಬರ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ.
1ಚೀಲ ಯೂರಿಯಾ ಗೊಬ್ಬರದ ಬೆಲೆ 266ರೂ. ಇದ್ದು ಅದನ್ನು ಇವರು 300ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಇದಲ್ಲದೆ ರೈತರು ಯೂರಿಯಾ ಗೊಬ್ಬರದ ಜತೆ 200ರೂ. ಬೆಲೆಯ ಲಿಂಕೇಜ್ ಗೊಬ್ಬರವನ್ನು ಕಡ್ಡಾಯವಾಗಿ ಖರೀದಿಸಲೇಬೇಕು ಎಂದು ಹೇಳುತ್ತಾರೆ.
ಯೂರಿಯಾ ಗೊಬ್ಬರ ಖರೀದಿಸಲು ರೈತರಿಗೆ 266ರೂ. ಹೊಂದಿಸುವುದೇ ಕಷ್ಟವಾದ ಸಮಯದಲ್ಲಿ ಇನ್ನು ಎಲ್ಲಿಂದ 200ರೂ. ಕೊಟ್ಟು ಲಿಂಕೇಜ್ ಗೊಬ್ಬರವನ್ನು ಖರೀದಿಸಬೇಕು. ಯೂರಿಯಾ ಗೊಬ್ಬರದ ಜತೆ ಲಿಂಕೇಜ್ ಗೊಬ್ಬರ ಖರೀದಿಲೇಬೇಕು ಎಂಬ ಚಾರ್ಟ್ ಇದ್ದರೆ ತೋರಿಸಬೇಕು.
ಖಾಸಗಿ ಆಗ್ರೋ ಕೇಂದ್ರಗಳ ಮಾಲೀಕರು ಅಧಿಕಾರಿಗಳ ಭೇಟಿಯ ಸಮಯದಲ್ಲಿ ರೈತರ ಜತೆ ಅಗೌರವವಾಗಿ ನಡೆದುಕೊಂಡಿದ್ದಾರೆ. ಇಲ್ಲವಾದಲ್ಲಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ರೈತರ ದೂರಿನ ಅನ್ವಯ ಪ್ರಸನ್ನ ಆಗ್ರೋ ಕೇಂದ್ರ ಮತ್ತು ಮಹಾಲಸಾ ಆಗ್ರೋ ಕೇಂದ್ರಗಳ ಪರಿಶೀಲನೆಯನ್ನು ಎಂ.ಎಸ್.ಕುಲಕರ್ಣಿ ನಡೆಸಿದರು.


ಎಂ.ಎಸ್.ಕುಲಕರ್ಣಿ, ಸಹಾಯಕ ಕೃಷಿ ನಿರ್ದೇಶಕ ಮುಂಡಗೋಡ :ಎರಡೂ ಖಾಸಗಿ ಆಗ್ರೋ ಕೇಂದ್ರಗಳ ಪರಿಶೀಲನೆ ನಡೆಸಿದ್ದೇವೆ. ನ್ಯೂನ್ಯತೆಗಳ ಬಗ್ಗೆ ರೈತರು ನನ್ನ ಗಮನಕ್ಕೆ ತಂದಿದ್ದಾರೆ. ಗೊಬ್ಬರದ ದರದ ಫಲಕವನ್ನು ಅಳವಡಿಸಿರುವುದಿಲ್ಲ. ಬಿಲ್ ಕೂಡ ನೀಡಿಲ್ಲ ಎಂಬುದನ್ನು ಗಮನಿಸಿದ್ದೇನೆ. ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಆದಷ್ಟು ಬೇಗ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಬಾಚಣಕಿ ಗ್ರಾಮದ ರೈತ ಮುಖಂಡ ನಿಂಗಪ್ಪ ಕುರುಬರ: ಸಹಾಯಕ ಕೃಷಿ ನಿರ್ದೇಶಕರಿಗೆ ಹಲವು ಭಾರಿ ರೈತರ ಸಮಸ್ಯೆಗಳ ಬಗ್ಗೆ ದೂರಿದ್ದೇನೆ, ಆದರು ಯಾವುದೆ ಕ್ರಮಕ್ಕೆ ಮುಂದಾಗಿಲ್ಲ, ಖಾಸಗಿ ಆಗ್ರೋಗಳ ಜೋತೆ ಶಾಮೀಲ್ ಆಗಿ ಅಧಿಕಾರಿಗಳು ಒಳ ಒಪ್ಪಂದ ಮಾಡಿಕೊಂಡಿರುವುದು ಕಂಡು ಬರುತ್ತಿದೆ.

CHETAN KENDULI

ಕೂಡಲೆ ಮೇಲಧಿಕಾರಿಗಳು ಪರಿಶೀಲಿಸಿ ಅಧಿಕಾರಿ ಹಾಗೂ ಖಾಸಗಿ ಆಗ್ರೋ ಕೇಂದ್ರಗಳ ಮೇಲೆ ಕ್ರಮ ಕೈಗೊಳ್ಳುವುದು ಅವಶ್ಯವಿದೆ.
ಪೀರಜ್ಜ ಸಾಗರ, ನಿಂಗಪ್ಪ ಗೋಣೇನವರ, ಗುರುರಾಯ ರಾಯ್ಕರ, ಮಂಜುನಾಥ ಶೇಟ್, ಮಂಜುನಾಥ ಮೈಸೂರ, ಬಸಯ್ಯ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*