ಪ್ರವಾಹ : ಜಾನುವಾರುಗಳಿಗೆ 44 ಟನ್ ಮೇವು ಪೂರೈಕೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ : ಕೃಷ್ಣಾ ನದಿಯ ಪ್ರವಾಹದಿಂದ ಜಿಲ್ಲೆಯ ಜಮಖಂಡಿ ಮತ್ತು ರಬಕವಿ-ಬನಹಟ್ಟಿ ತಾಲೂಕುಗಳಲ್ಲಿ ಬಾದಿತಗೊಂಡ ಗ್ರಾಮಗಳಲ್ಲಿನ ಜಾನುವಾರುಗಳಿಗೆ ಒಟ್ಟು 44.03 ಟನ್ ಮೇವು ಪೂರೈಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ಇಲ್ಲಿಯವರೆಗೆ ಜಮಖಂಡಿ ತಾಲೂಕಿನ 16 ಹಾಗೂ ರಬಕವಿ ಬನಹಟ್ಟಿ ತಾಲೂಜಿನಲ್ಲಿ 12 ಗ್ರಾಮಗಳು ಪ್ರವಾಹದಿಂದ ಬಾಧಿತಗೊಂಡಿದ್ದು, ಅಲ್ಲಿರುವ ಜಾನುವಾರುಗಳು ಜಮಖಂಡಿ ತಾಲೂಕಿಗೆ 20 ಟನ್ ಹಾಗೂ ರಬಕವಿ-ಬನಹಟ್ಟಿ ತಾಲೂಕಿಗೆ 24.03 ಟನ್ ಮೇವು ಪೂರೈಕೆ ಮಾಡಲಾಯಿತು. ಮಂಗಳವಾರ ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ 3.90 ಲಕ್ಷ ಕ್ಯೂಸೆಕ್ಸ್, ಘಟಪ್ರಭಾ ನದಿಗೆ 60418 ಕ್ಯೂಸೆಕ್ಸ್ ಹಾಗೂ ಮಲಪ್ರಭಾ ನದಿಗೆ 17594 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ.

ಪ್ರವಾಹದಿಂದ ಜಿಲ್ಲೆಯಲ್ಲಿ 62 ಗ್ರಾಮಗಳಿಗೆ ನೀರು ನುಗ್ಗಿದ್ದು, ಯಾವುದೇ ವ್ಯಕ್ತಿಯ ಜೀವಹಾನಿಯಾಗಿರುವದಿಲ್ಲ. ಜಮಖಂಡಿ ತಾಲೂಕಿನಲ್ಲಿ 2, ರಬಕವಿ-ಬನಹಟ್ಟಿ ತಾಲೂಕಿನ 7 ಹಾಗೂ ಮುಧೋಳ ತಾಲೂಕಿನ 2 ಸೇರಿ ಒಟ್ಟು 11 ಜಾನುವಾರುಗಳು ಮರಣ ಹೊಂದಿರುತ್ತವೆ.

ಜಿಲ್ಲೆಯಲ್ಲಿ ಜುಲೈ 21 ರಿಂದ ಇಲ್ಲಿಯವರೆಗೆ 84 ಮನೆಗಳು ಬಾಗಶಃ ಹಾನಿಯಾಗಿದ್ದು, 7061 ಜನರು ನಿರಾಶ್ರಿತರಾಗಿದ್ದಾರೆ. ನಿರಾಶ್ರಿತರಿಗೆ 48 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. 8979 ಹೆಕ್ಟೆರ್ ಕೃಷಿ ಹಾಗೂ 563.2 ಹೆಕ್ಟೆರ್ ತೋಟಗಾರಿಕೆ ಬೆಳೆ ಹಾನಿಯಾಗಿರುವುದಾಗಿ ಪ್ರಾಥಮಿಕ ವರದಿಯಿಂದ ತಿಳಿದುಬಂದಿರುತ್ತದೆ. ವಿದ್ಯುತ್ ಕಂಬಗಳು, ರಸ್ತೆ, ಸೇತುವೆ ಹಾಗೂ ಇತರೆ ಮೂಲಭೂತ ಸೌಕರ್ಯಗಳ ಹಾನಿಯ ಬಗ್ಗೆ ವರದಿ ತಯಾರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*