ರಾಜ್ಯ ಸುದ್ದಿಗಳು
ಮುದ್ದೇಬಿಹಾಳ: ಕೃಷ್ಣಾ ನದಿತೀರದ ಸುಮಾರು 11 ಗ್ರಾಮಗಳು ಪ್ರವಾಹಪೀಡಿತ ಗ್ರಾಮಗಳಾಗಿದ್ದಾವೆ. ಆದರೆ ತಾಲೂಕಾ ಆಡಳಿತಕ್ಕೆ ಮಾಹಿತಿ ಇದ್ದಿದ್ದು ಕೇವಲ 10 ಗ್ರಾಮಗಳದ್ದು. ಆದರೆ ಮುದ್ದೇಬಿಹಾಳ ತಾಲೂಕಿನ ಸಿದ್ದಾಪೂರ ಗ್ರಾಮದ 12 ಕುಟುಂಬಗಳು ಪ್ರವಾಹಕ್ಕೆ ಒಳಗಾಗಿದ್ದು ಇವರಿಗೆ ತಾಲೂಕಾ ಆಡಳಿತದಿಂದ ನ್ಯಾಯ ಸಿಗುತ್ತದೆಯಾ ಎಂಬುವುದು ದೀಕ್ಷಪ್ರಶ್ನೆಯಾಗಿದೆ.
ಹೌದು, ಸಿದ್ದಾಪೂರ ಗ್ರಾಮದ 12 ಕುಟುಂಬಗಳು ಕೃಷ್ಣಾ ಭಾಗ್ಯಜಲ ನಿಗಮಕ್ಕೆ ಸಂಬಂಧಿಸಿದ ಜಾಗದಲ್ಲಿ ಶೇಡ್ಡಗಳನ್ನು ಹಾಕಿಕೊಂಡು ವಾಸಿಸುತ್ತಿದ್ದವು. 15 ದಿನಗಳ ಹಿಂದೆ ಇವರ ವಾಸಿಸುತ್ತಿದ್ದ ಶೇಡ್ಡಿಗೆ ನೀರು ಹೊಕ್ಕಿ ವಿಷಜಂತುಗಳ ಮತ್ತು ಮೊಸಳೆಯಿಂತ ನರಕಯಾತನೆ ಅನುಭಿಸಿಸುತ್ತಿದ್ದವು. ಆದರೆ ತಾಲೂಕಾ ಆಡಳಿತಕ್ಕೆ ಇವರ ಮಾಹಿತಿಯೇ ಇಲ್ಲದಿದ್ದು ಅಧಿಕಾರಿಗಳ ನಿರ್ಲಕ್ಷಕ್ಕೆ ದೊಡ್ಡ ಉಧಾಹರಣೆಯಾಗಿದೆ. ಆದರೆ ಸ್ಥಳೀಯ ಶಾಸಕ ನಡಹಳ್ಳಿ ಅವರು ಸಹೋದರ ಶಾಂತಗೌಡ ಪಾಟೀಲ ನಡಹಳ್ಳಿ ಅವರು ಈ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದ್ದು ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸಿಕೊಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಕಾಳಜಿಕೇಂದ್ರದಿಂದ ಹೊರನಡೆಯುವಂತೆ ಹೇಳಿದ ಅಧಿಕಾರಿಗಳು:
ಸಿದ್ದಾಪೂರ ಗ್ರಾಮದ ಪ್ರವಾಹದಿಂದ ತತ್ತರಿಸಿದ್ದ ೧೨ ಕುಟುಂಬಸ್ಥರು ಮುದ್ದೇಬಿಹಾಳ ಪಟ್ಟಣದ ಪದವಿ ಕಾಲೇಜಿನ ಕಾಳಜಿಕೇಂದ್ರದಲ್ಲಿ ಗುರುವಾರ ಆಶ್ರಯ ಪಡೆದಿದ್ದರು. ಆದರೆ ಶುಕ್ರವಾರ ಇದೇ ಕೇಂದ್ರದಲ್ಲಿ ಆಶ್ರಯಪಡೆದಿದ್ದ ಪ್ರವಾಹಪೀಡಿತರು ನಮ್ಮ ಗ್ರಾಮಕ್ಕೆ ಮರಳಿ ತೆರಲುವ ನಿರ್ಧಾರ ಮಾಡಿದ್ದು ಸಿದ್ದಾಪೂರ ಜನರನ್ನೂ ನಿಮಗೆ ಎಷ್ಟು ಬೇಕೊ ಅಷ್ಟು ಅಕ್ಕಿ ಧಾನ್ಯಗಳನ್ನು ನೀಡುತ್ತೇವೆ. ನೀವು ಇಲ್ಲಿಂದ ನಿಮ್ಮ ಮನೆಗಳಿಗೆ ಹೋಗಿ ಎಂದು ಹೇಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ತಹಸೀಲ್ದಾರ ಅವರಿಗೂ ಮನವಿ:
ಸಿದ್ದಾಪೂರದ ಪ್ರವಾಹಪೀಡಿತರು ಸ್ಥಳೀಯ ತಹಸೀದಾರ ಅವರಿಗೂ ಮನವಿ ನೀಡಿ ಎಲ್ಲರಿಗೂ ಶಾಸ್ವತ ಪರಿಹಾರ ನೀಡುವಂತೆ ಮನವಿ ಸಲ್ಲಿಸಿದ್ದಾರೆ.
ಈ ಸದರ್ಭದಲ್ಲಿ ಪ್ರವಾಹಕ್ಕೆ ಒಳಗಾದ ರುಕ್ಮವ್ವ ಲೋಳಸರ, ಪಾರ್ವತೆವ್ವ ಚಿಂಚೊಡಿ, ಶರಣಮ್ಮ ಕರಿಭಾವಿ, ಯಲ್ಲಮ್ಮ ಈಳಗೇರ, ಹುಗಮ್ಮ ಗುಂತಲವರ, ಬಸಲಿಂಗಮ್ಮ ಪೂಜಾರಿ, ದವಲಬೀ ಜೂಲಗಡ್ಡಿ, ಶಂಕ್ರಮ್ಮ ವಲಿಕಾರ, ಗಿರಿಜಾ ಚಿನಿವಾಲರ, ಶಿವಕುಮಾರ ಚಿನಿವಾಲರ, ಸುಲ್ತಾನ ಜೂಲಗಡ್ಡಿ, ಯಲ್ಲಪ್ಪ ಮಾಲಿಗೌಡರ ಇದ್ದರು.
ಎನ್.ಡಿ.ಆರ್.ಎಫ್. ಅನ್ವಯ ಪರಿಹಾರಕ್ಕೆ ನಡಹಳ್ಳಿ ಒತ್ತಾಯ:
ಮುದ್ದೇಬಿಹಾಳ ತಾಲೂಕಿನ ಪ್ರವಾಹಪೀಡಿತ ಕುಂಚಗನೂರ, ಕಮಲದಿನ್ನಿ ಗ್ರಾಮಗಳಿಗೆ ಭೇಟಿ ನಿಡಿದ್ದ ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿ ಅವರಿಗೆ ಪ್ರವಾಹದ ಭೀಕರತೆಯ ವಾಸ್ತವ ಚಿತ್ರಣ ಮನವರಿಕೆ ಮಾಡಿಕೊಟ್ಟ ನಂತರ ತಂಗಡಗಿಯಲ್ಲಿರುವ ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರ ಮನವಿ ಸ್ವೀಕರಿವ ಸಂದರ್ಭ ಮಾತನಾಡಿದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು, ಪ್ರವಾಹಕ್ಕೆ ಸಿಕ್ಕು ನಮ್ಮ ಜನರ ಬದುಕು ಸಂಪೂರ್ಣ ನಾಶವಾಗಿದೆ. ಮರಳಿ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ಇವರೆಲ್ಲಾ ಇದ್ದಾರೆ. ಇವರಿಗೆ ರಾಷ್ಟ್ರೀಯ ಪ್ರಕೃತಿ ವಿಕೋಪ (ಎನ್‌ಡಿಆರ್‌ಎಫ್) ನಿಯಮಗಳ ಅನ್ವಯ ಪರಿಹಾರ ನೀಡದರೆ ಅದಕ್ಕೂ ಮೀರಿ ಮಾನವೀಯ ನೆಲೆಗಟ್ಟಿನಲ್ಲಿ, ಭವಿಷ್ಯದಲ್ಲಿ ಎದುರಿಸಬಹುದಾದ ತೊಂದರೆಯನ್ನು ಶಾಸ್ವತವಾಗಿ ಬಗೆಹರಿಸಲು ಅಗತ್ಯ ಕ್ರಮ ಕೈಕೊಳ್ಳುವ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
Be the first to comment