ಜಿಲ್ಲಾ ಸುದ್ದಿಗಳು
ಪರಿಶಿಷ್ಟ ಜಾತಿ,ಪರಿಶಿಷ್ಟವರ್ಗ ಮತ್ತು ಹಿಂದುಳಿದ ವರ್ಗದ ಅಲೆಮಾರಿ ಮಕ್ಕಳು,ದೇವದಾಸಿ ಮಕ್ಕಳು,ಸಫಾಯಿ ಕರ್ಮಚಾರಿ ಮಕ್ಕಳಿಗೆ ವಿಶೇಷ ರಿಯಾಯಿತಿ ಶೇಕಡಾ 10% ಸೀಟುಗಳನ್ನು ಪ್ರಥಮ ಆದ್ಯತೆಯ ಮೇರೆಗೆ ನೀಡಲಾಗುತ್ತದೆ.ಆದ್ದರಿಂದ ಅರ್ಜಿ ಭರ್ತಿ ಮಾಡುವಾಗ ವಿಶೇಷ ಮೀಸಲಾತಿ ಕಾಲಂ ನಲ್ಲಿ ಆಯ್ಕೆ ಮಾಡಿ ಈ ಮೇಲ್ಕಂಡ ಅಂಶವನ್ನು ದಾಖಲು ಮಾಡಿ.
ಬಾಗಲಕೋಟೆ:ಸಮಾಜ ಕಲ್ಯಾಣ ಇಲಾಖೆ ನಡೆಸುತ್ತಿರುವ ವಸತಿ ಶಾಲೆಗಳಿಂದ 2021-22 ನೇ ಸಾಲಿನ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ 2020-21ನೇ ಸಾಲಿನಲ್ಲಿ 6ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳು ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಬೇಕು.
ಪರಿಶಿಷ್ಟ ಜಾತಿ,ಪರಿಶಿಷ್ಟವರ್ಗ ಮತ್ತು ಹಿಂದುಳಿದ ವರ್ಗದ ಅಲೆಮಾರಿ ಮಕ್ಕಳು,ದೇವದಾಸಿ ಮಕ್ಕಳು,ಸಫಾಯಿ ಕರ್ಮಚಾರಿ ಮಕ್ಕಳಿಗೆ ವಿಶೇಷ ರಿಯಾಯಿತಿ ಶೇಕಡಾ 10% ಸೀಟುಗಳನ್ನು ಪ್ರಥಮ ಆದ್ಯತೆಯ ಮೇರೆಗೆ ನೀಡಲಾಗುತ್ತದೆ.ಆದ್ದರಿಂದ ಅರ್ಜಿ ಭರ್ತಿ ಮಾಡುವಾಗ ವಿಶೇಷ ಮೀಸಲಾತಿ ಕಾಲಂ ನಲ್ಲಿ ಆಯ್ಕೆ ಮಾಡಿ ಈ ಮೇಲ್ಕಂಡ ಅಂಶವನ್ನು ದಾಖಲು ಮಾಡಿ.
ಅಲೆಮಾರಿ,ದೇವದಾಸಿ ಮಕ್ಕಳು ಹೀಗೆ ಯಾವುದೇ ಅನ್ವಯಿಸುತ್ತದೆಯೋ ಅದನ್ನು ಭರ್ತಿ ಮಾಡಿ ಈ ಸದಾವಕಾಶವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಲು ಈ ಮಾಹಿತಿಯನ್ನು ನಿಮಗೆ ಗೊತ್ತಿರುವ ಎಲ್ಲ ಪರಿಶಿಷ್ಟ ಜಾತಿ ಮತ್ತು ಪಂಗಡದ ಗ್ರೂಪ್ ಗಳಿಗೆ ಆದಷ್ಟು ಷೇರ್ ಮಾಡಿ ವಿಷಯ ಹಂಚಿ.
ದಯಮಾಡಿ ತಮ್ಮ ಗ್ರಾಮ ಅಥವಾ ನಗರದ ಸುತ್ತಮುತ್ತಲಿನ ಮಕ್ಕಳಿಗೆ ಮಾಹಿತಿಯನ್ನು ನೀಡಿ ವಸತಿ ಶಾಲೆಯಲ್ಲಿ ಇಂಗ್ಲಿಷ್ ಮೀಡಿಯಂ ಗೆ 6ನೇ ತರಗತಿಗೆ ಉಚಿತ ಪ್ರವೇಶ ಪಡೆದರೆ 10ನೇ ತರಗತಿಯವರಿಗೆ ಉಚಿತ ಮತ್ತು ಗುಣಮಟ್ಟದ ವಸತಿ ಶಿಕ್ಷಣ ದೊರೆಯುತ್ತದೆ ಆದ್ದರಿಂದ ಅವಶ್ಯಕತೆ ಇರುವ ಮಕ್ಕಳಿಗೆ ಮಾಹಿತಿಯನ್ನು ನೀಡಿ ಅವರನ್ನು ಪರೀಕ್ಷೆಗೆ ಹಾಜರಾಗಿ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲು ಪ್ರೋತ್ಸಾಹಿಸಬೇಕೆಂದು SC & ST ಅಲೆಮಾರಿ ವಿಮುಕ್ತ ಬುಡಕಟ್ಟು ಮಹಾ ಸಭಾ (ರಿ) ರಾಜ್ಯ ಸಮಿತಿ ಬೆಂಗಳೂರು ಇವರು ಈ ಮೂಲಕ ಮನವಿ ಮಾಡಿದ್ದಾರೆ.
ಅಲೆಮಾರಿ ವಿಶೇಷ ಕೋಟಾದಲ್ಲಿ 10% ವಿಶೇಷ ಮೀಸಲಾತಿ ಪಡೆಯಲು ಯಾವುದಾದರೂ ಗೊಂದಲವಿದ್ದರೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಉಪ/ ಜಂಟಿ ನಿರ್ದೇಶಕರಿಗೆ ಕರೆ ಮಾಡಿ ಅಥವಾ ಭೇಟಿ ಮಾಡಿ ಮಾಹಿತಿ ಪಡೆಯಿರಿ.
Be the first to comment