ರಾಮಲಿಂಗೇಶ್ವರ ದೇವಸ್ಥಾನದ ಸುತ್ತ ಸಸಿ ನೆಡುವ ಅಭಿವೃದ್ಧಿ ಕಾಮಗಾರಿಯ ವೀಕ್ಷಣೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಕೆಲೂರ ಗ್ರಾಮದ ಹೊರವಲಯದಲ್ಲಿರುವ ಹೊಂಡದ ಸುತ್ತಲೂ ಸಸಿ ನೆಡುವ ಅಭಿವೃದ್ದಿ ಕಾಮಗಾರಿಯನ್ನು ಕೃಷಿ ಅರಣ್ಯ ಜಲನಯನ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಾದ ಶ್ರೀಮತಿ ಹೇಮಾವತಿ ಎನ್ ವೀಕ್ಷಿಸಿದರು.

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:ಇಲಕಲ್ಲ ತಾಲೂಕಿನ ಕೆಲೂರ ಗ್ರಾಮದ ಹೊರವಲಯದಲ್ಲಿರುವ ಐತಿಹಾಸಿಕ ಶ್ರೀ ರಾಮಲಿಂಗಶ್ವರ ದೇವಸ್ಥಾನದ ಹೊಂಡದ ಸುತ್ತುಮುತ್ತಲೂ ಉದ್ಯಾನ ವನ ನಿರ್ಮಾಣ ಮಾಡುವ ಉದ್ದೇಶದಿಂದ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸದರಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೃಷಿ ಅರಣ್ಯ ಜಲನಯನ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಾದ ಶ್ರೀಮತಿ ಹೇಮಾವತಿ ಎನ್ ಅವರ ಮಾರ್ಗದರ್ಶನದಲ್ಲಿ ಶ್ರೀ ಮಹೇಂದ್ರ ದೇಸಾಯಿ, ಪ್ರವೀಣ್ ಭರಾಮಗೌಡ್ರ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಮಹಾಲಿಂಗೇಶ್ ನಾಡಗೌಡರ ಅವರು ವೀಕ್ಷಣೆ ಮಾಡಿದರು.

ಪಂಚ ರಾಮಲಿಂಗಶ್ವರ ದೇವಸ್ಥಾನವು ಐತಿಹಾಸಿಕ ಚಾಲುಕ್ಯರ ಇಮ್ಮಡಿ ಪುಲಕೇಶಿಯ ಕಾಲದಲ್ಲಿ ನಿರ್ಮಾಣವಾಗಿದ್ದು ,ಈಗ ಪ್ರವಾಸೋದ್ಯಮ ಮತ್ತು ಪ್ರಾಚ್ಯವಸ್ತು ಇಲಾಖೆಯವರು ಸಮಗ್ರ ದೇವಸ್ಥಾನವನ್ನು ಅಭಿವೃದ್ಧಿ ಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.ಈ ಸಂದರ್ಭದಲ್ಲಿ ಕೆಲೂರ ಗ್ರಾಮದ ಪಿಕೆಪಿಎಸ್ ನಿರ್ದೇಶಕರು ಶ್ರೀ ವಜೀರಪ್ಪ ಪೂಜಾರ,ಶ್ರೀ ಕಲ್ಲನಗೌಡ ನಾಡಗೌಡರ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*