ಬಾಗಲಕೋಟೆ:ಇಲಕಲ್ಲ ರಾಜ್ಯದಲ್ಲಿ ಕೋವಿಡ್-19 ಕಾರಣದಿಂದ ದಿನಾಂಕ 01-01- 2020 ರಿಂದ ತಡೆಹಿಡಿಯಲಾಗಿದ್ದ ಮೂರು ಕಂತುಗಳ ತುಟ್ಟಿಭತ್ಯೆಯನ್ನು ಮಂಜೂರು ಮಾಡುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಅಖಿಲ ಭಾರತ ಬೆಲೆ ಸೂಚ್ಯಂಕವನ್ನಾಧರಿಸಿ ಭಾರತ ಸರ್ಕಾರವು ತನ್ನ ನೌಕರರಿಗೆ ದಿನಾಂಕ 01/07/2021 ರಿಂದ ಅನ್ವಯವಾಗುವಂತೆ ಶೇ 11% ತುಟ್ಟಿ ಭತ್ಯೆ ಮಂಜೂರು ಮಾಡಿರುತ್ತದೆ.
ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೂ ಸಹ ತುಟ್ಟಿ ಭತ್ಯೆ ಮಂಜೂರು ಮಾಡಲು ಸಂಘವು ಸಲ್ಲಿಸಿದ ಮನವಿಗೆ ಸ್ಪಂದಿಸಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀಯುತ ಬಿ ಎಸ್ ಯಡಿಯೂರಪ್ಪನವರು ದಿನಾಂಕ 01-07-2021 ರಿಂದ ಅನ್ವಯವಾಗುವಂತೆ ಬಾಕಿ ಇರುವ ಶೇ 11% ರಷ್ಟು ತುಟ್ಟಿಭತ್ಯೆ ಮಂಜೂರು ಮಾಡಲು ಆರ್ಥಿಕ ಇಲಾಖೆಗೆ ಆದೇಶಿಸಿರುತ್ತಾರೆ.ಈ ಆದೇಶದಿಂದ 6 ಲಕ್ಷ ರಾಜ್ಯ ಸರ್ಕಾರಿ ನೌಕರರು,4.5 ಲಕ್ಷ ಪಿಂಚಣಿದಾರರು,3 ಲಕ್ಷ ನಿಗಮ-ಮಂಡಳಿಗಳ ನೌಕರರಿಗೆ ಆರ್ಥಿಕ ಸೌಲಭ್ಯ ದೊರೆಯಲಿದೆ.
ಇದಕ್ಕಾಗಿ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ,ಸಚಿವ ಸಂಪುಟದ ಎಲ್ಲಾ ಸಚಿವರಿಗೆ,ಸರಕಾರದ ಉನ್ನತ ಹಂತದ ಅಧಿಕಾರಿಗಳಿಗೆ ಹಾಗೂ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಾಕ್ಷರಿ ರವರಿಗೆ,ಮಹಾ ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ್ ಪಾಟೀಲ್ ರವರಿಗೆ, ಖಜಾಂಚಿ ಗಳಾದ ಶ್ರೀನಿವಾಸ್ ರವರಿಗೆ ಇಳಕಲ್ ತಾಲ್ಲೂಕು ಸಮಸ್ತ ಸರ್ಕಾರಿ ನೌಕರರ ಪರವಾಗಿ ತಾಲ್ಲೂಕು ಅಧ್ಯಕ್ಷರಾದ ಪರಶುರಾಮ ಎಸ್ ಪಮ್ಮಾರ, ರಾಜ್ಯ ಪರಿಷತ್ ಸದಸ್ಯರಾದ ಈಶ್ವರ ಗಡ್ಡಿ, ಖಜಾಂಚಿಗಳಾದ ಎಂ ಎಚ್ ಗೌಡರ, ಕಾರ್ಯದರ್ಶಿಗಳಾದ ಗುಂಡಪ್ಪ ಕುರಿ, ಗೌರವಾಧ್ಯಕ್ಷರಾದ ಎಸ್ ಎನ್ ಗಡೇದ ಹಾಗೂ ಸಮಸ್ತ ಪದಾಧಿಕಾರಿಗಳು ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿರುತ್ತಾರೆ.
Be the first to comment