Reported by: Chetan Kenduli

ರಾಜ್ಯ ಸುದ್ದಿ:

ಮುದ್ದೇಬಿಹಾಳ:

ಪ್ರವಾಹ ಪೀಡಿತ ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳಿಸಬೇಕಾದ ತಾಲೂಕಾ ಆಡಳಿತ ನಿರ್ಲಕ್ಷದಿಂದ 12 ಕುಟುಂಬಗಳು ಓರ್ವ   ಪ್ರವಾಹಕ್ಕೆ ತುತ್ತಾಗಿ 15 ದಿನಗಳ ಕಾಲ ನರಕಯಾತನೆ ಅನುಭವಿಸಿದ್ದಾರೆ. ಆದರೆ ಸಮಾಜ ಸೇವಕ  ಮುದ್ದೇಬಿಹಾಳ ಮತಕ್ಷೇತ್ರ ಶಾಸಕರ ಸಹೋದರ ಶಾಂತಗೌಡ ಪಾಟೀಲ ನಡಹಳ್ಳಿ ಅವರ ಸಹಾಯದಿಂದ ಗುರುವಾರ ಸಂತ್ರಸ್ತರು ಮುದ್ದೇಬಿಹಾಳ ಪಟ್ಟಣದ ಸರಕಾರಿ ಕಾಳಜಿ ಕೇಂದ್ರಕ್ಕೆ ಬಂದು ತಲುಪಿದ್ದಾರೆ.


ಮುದ್ದೇಬಿಹಾಳ ತಾಲೂಕಿನ ನಾಗಬೇನಾ ಪಂಚಾಯತಿ ವ್ಯಾಪ್ತಿಯ ಸಿದ್ದಾಪೂರ ಗ್ರಾಮದ ಪ್ರವಾಹ ನಿರಾಶ್ರಿತರು ಗುರುವಾರ ಮುದ್ದೇಬಿಹಾಳ ಪಟ್ಟಣದ ಸರಕಾರಿ ಪದವಿ ಕಾಲೇಜಿನ ಕಾಳಜಿ ಕೇಂದ್ರಕ್ಕೆ ಬಂದಿರುವುದು.

೪೦ ವರ್ಷಗಳಿಂದ ಗ್ರಾಮದಲ್ಲಿ ವಾಸ:
ತಾಲೂಕಿನ ಸಿದ್ದಾಪೂರ ಗ್ರಾಮದ ಪ್ರವಾಹಕ್ಕೆ ಒಳಗಾದವರು ಸುಮಾರು ೪೦ ವರ್ಷಗಳಿಂದ ಗ್ರಾಮದಲ್ಲಿನ ಕೆಬಿಜೆಎನ್‌ಎಲ್ ಇಲಾಖೆಗೆ ಸಂಬಂಧಿಸಿದ ಜಾಗದಲ್ಲಿ ಶೇಡ್ಡಗಳನ್ನು ಹಾಕಿಕೊಂಡು ವಾಸಿಸುತ್ತಿದ್ದಾರೆ. ಅಲ್ಲದೇ ತಾಲೂಕಿನ ವಿರೇಶನಗರದಲ್ಲಿ ಮತದಾನದ ಹಕ್ಕನ್ನು, ಆಧಾರ ಕಾರ್ಡ ಚಡಿತರ ಚೀಟಿ ದಾಖಲೆಗಳೂ ಇವೆ. ಆದರೆ ಕುಟುಂಬದ ಯಾವಬ್ಬರಿಗೂ ಸರಕಾರದಿಂದ ನಿವೇಶನ ಸಿಕ್ಕಿಲ್ಲ. ಇದು ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ದೂರಲಾಗುತ್ತಿದೆ.
ಪ್ರವಾಹಕ್ಕೆ ಒಳಗಾದ ಕುಟುಂಬಗಳನ್ನು ಪತ್ತೆಹಚ್ಚಿದ ಶಾಂತಗೌಡ:
ಸಿದ್ದಾಪೂರ ಗ್ರಾಮದ ಕೆಲ ಕುಟುಂಬಗಳೂ ಪ್ರವಾಹಕ್ಕೆ ಒಳಗಾಗಿವೆ ಎಂದು ಶಾಂತಗೌಡ ಅಭಿಮಾನಿಗಳ ಬಳಗದ ಖಚಿತ ಮಾಹಿತಿ ಮೆರೆಗೆ ಸಮಾಜ ಸೇವಕ ಶಾಂತಗೌಡ ಪಾಟೀಲ ನಡಹಳ್ಳಿ ಅವರು ತಮ್ಮ ತಂಡದೊಂದಿಗೆ ಪ್ರವಾಹಪೀಡಿತ ಕೆಬಿಜೆಎನ್‌ಎಲ್‌ಗೆ ಸಂಬಂಧಿಸಿದ ಪ್ರದೇಶದಲ್ಲಿ ವಾಸವಾಗಿದ್ದ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಅವರನ್ನು ಮುದ್ದೇಬಿಹಾಳ ಪಟ್ಟಣದ ಸರಕಾರಿ ಪದವಿ ಕಾಲೇಜಿನ ಪ್ರವಾಹ ಪೀಡಿತರ ಕೇಂದ್ರದಲ್ಲಿ ಆಶ್ರಯ ಪಡೆಯುವಂತೆ ನಿರಾಶ್ರಿತರಿಗೆ ಸೂಚಿಸಿ ಮಾನವಿಯತೆ ಮೆರೆದಿದ್ದಾರೆ.


ಮುದ್ದೇಬಿಹಾಳ ತಾಲೂಕಿನ ನಾಗಬೇನಾ ಪಂಚಾಯತಿ ವ್ಯಾಪ್ತಿಯ ಸಿದ್ದಾಪೂರ ಗ್ರಾಮದ ಪ್ರವಾಹ ನಿರಾಶ್ರಿತರನ್ನು ಬೇಟಿ ಮಾಡಿದ ಸಮಾಜ ಸೇವಕ ಶಾಂತಗೌಡ ಪಾಟೀಲ ನಡಹಳ್ಳಿ ಅವರು

ಗೊಂದಲದ ಸಮಸ್ಯೆ:
ಪ್ರವಾಹಕ್ಕೆ ಒಳಗಾದ ನಿರಾಶ್ರಿತರು ತಮ್ಮ ಮತದಾನದ ಹಕ್ಕುಗಳು ಮುದ್ದೇಬಿಹಾಳ ಕ್ಷೇತ್ರದಲ್ಲಿವೆ ಎಂದು ಹೇಳುತ್ತಿದ್ದಾಗ ಕೆಲವರು ಸಿದ್ದಾಪೂರ ಯಾದಗಿರಿ ಜಿಲ್ಲೆಯ ನಾರಾಯಣಪೂರ ಗ್ರಾಮಕ್ಕೆ ಸಂಬಂಧಿಸಿವೆ ಎಂದು ಹೇಳಿದರು. ನಂತರ ನಿರಾಶ್ರಿತರ ಮತದಾರರ ಗುರುತಿನ ಚೀಟಿಯನ್ನು ಸಮಗ್ರವಾಗಿ ಪರಿಶೀಲಿಸಿದ ನಂತರ ಮುದ್ದೇಬಿಹಾಳ ತಾಲೂಕಿನ ಗಡಿಭಾಗವಾಗಿರುವ ಕೋರಿಸಂಗಪ್ಪಯ್ಯಗುಡಿಯ ಹತ್ತಿರ ಈ ಕುಟುಂಬಗಳು ವಾಸವಾಗಿದ್ದವು.
ನರಕಯಾತನೆ ಅನುಭವಿಸಿದ ೮ ತಿಂಗಳ ಗರ್ಭಿನಿ:

ಎಲ್ಲರ ಕಣ್ಣಲ್ಲಿಯೂ ನೀರು ತರಿಸುವಂತಾಯಿತು. ನಿತ್ಯ ರಾತ್ರಿ ವೇಳೆಯಲ್ಲಿ ನದಿಯಿಂದ ಮೊಸಳೆ ಹಾಗೂ ಹಾವುಗಳಿಂದ ಉಳಿದುಕೊಳ್ಳು ರಾತ್ರಿ ಇಡೀ ಮಳಗದೆ ಕಳೆಯುವ ಸ್ಥಿತಿ ಎದುರಿದ್ದಾಳೆ ಎಂದು ಕುಟುಂಬಸ್ಥರು ಅಳಲನ್ನು ತೋಡಿಕೊಂಡಿದ್ದಾರೆ



ಎಚ್ಚೆತ್ತುಕೊಳ್ಳಬೇಕಾಗಿರುವ ತಾಲೂಕಾ ಆಡಳಿತ:
ಮುದ್ದೇಬಿಹಾಳ ತಾಲೂಕಿನಲ್ಲಿ ಸಿದ್ದಾಪೂರ ಗ್ರಾಮದ ಪ್ರವಾಹ ಪೀಡಿತರನ್ನು ಗುರುತಿಸುವಲ್ಲಿ ತಾಲೂಕಾ ಆಡಳಿತವು ವಿಫಲಗೊಂಡಿದ್ದು ಸಿದ್ದಾಪೂರಿನಂತೆ ಇನ್ನೂ ಅನೇಕ ಗ್ರಾಮಗಳು ಇವೆಯೇ ಎಂಬುವುದನ್ನು ಸರ್ವೆ ಮಾಡಬೇಕಿದೆ. ಅಲ್ಲದೇ ಇಂತಹ ಪ್ರವಾಹಪೀಡಿತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಬೇಕಿದೆ. ಈ ನಿಟ್ಟಿನಲ್ಲಿ ತಾಲೂಕಾ ಆಡಳಿತ ಎಚ್ಚೆತ್ತುಕೊಳ್ಳುವುದು ಅವಶ್ಯಕವಿದೆ ಎನ್ನುವುದು ಪತ್ರಿಕೆಯ ಮನವಿಯಾಗಿದೆ.

Be the first to comment

Leave a Reply

Your email address will not be published.


*