ದೌರ್ಜನ್ಯ ಪ್ರಕರಣ : ಕುಟುಂಬಕ್ಕೆ ಸಾಂತ್ವನ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:ನಗರದ ದಡ್ಡೇನವರ ಆಸ್ಪತ್ರೆಗೆ ಸಮಾಜ ಕಲ್ಯಾಣ ಉಪನಿರ್ದೇಶಕ ಮಹೇಶ ಪೋತದಾರ ಮತ್ತು ಬೀಳಗಿ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಎಂ.ಪಾಟೀಲ ಬೇಟಿ ನೀಡಿ ದೌರ್ಜನ್ಯ ಪ್ರಕರಣದಲ್ಲಿ ನೊಂದ ಬೀಳಗಿಯ ಉಮೇಶ ಯಲ್ಲಪ್ಪ ಚಲವಾದಿ ಅವರ ಆರೋಗ್ಯವನ್ನು ವಿಚಾರಿಸಿ, ಕುಟುಂಬಕ್ಕೆ ಸಾಂತ್ವನ ಹೇಳಿದರು.

ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವೈದ್ಯರೊಂದಿಗೆ ಸಮಾಲೋಚಿಸಿ ಆದಷ್ಟು ಬೇಗ ಗುಣಮುಖರಾಗುವಂತೆ ಮನವಿ ಮಾಡಿಕೊಂಡರು. ಜುಲೈ 4 ರಂದು ಬೀಳಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ದೌರ್ಜನ್ಯ ಪ್ರಕರಣದಲ್ಲಿ ಉಮೇಶ ಚಲವಾದಿ, ಸಚಿನ್ ಚಲವಾದಿ ಹಾಗೂ ಬಾಳೇಶ ಕುಮಾರ ಭಜಂತ್ರಿ ಅವರ ಮೇಲೆ ದೌರ್ಜನ್ಯ ನಡೆದ ಹಿನ್ನಲೆಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಉಮೇಶ ಚಲವಾದಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ದೈರ್ಯ ಹೇಳಿದರು.

ಸರಕಾರದಿಂದ ಬರುವ ಪರಿಹಾರಧನವನ್ನು ಶೀಘ್ರದಲ್ಲಿಯೇ ಮಂಜೂರಿಗೆ ಪೂಕರ ದಾಖಲೆಗಳನ್ನು ಸಲ್ಲಿಸುವಂತೆ ತಿಳಿಸಿದರು. ಇದೇ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿ, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಜೆ.ಎಸ್.ಪಟ್ಟಣಶೆಟ್ಟಿ ಹಾಗೂ ದೌರ್ಜನ್ಯದಲ್ಲಿ ನೊಂದ ಕುಟುಂಬ ವರ್ಗದವರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*