ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರನಾಯಕ, ಭಾರತದ ಮಾಜಿ ಉಪ ಪ್ರಧಾನಮಂತ್ರಿ ಡಾ.ಬಾಬು ಜಗಜೀವನರಾಮ ಅವರ 35ನೇ ಪುಣ್ಯಸ್ಮರಣೆಯನ್ನು ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಮಂಗಳವಾರ ಸರಳವಾಗಿ ಆಚರಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ ಬಾಬಾ ಜಗಜೀವನರಾಮ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ಅರ್ಜಿಸಿ ನಂತರ ಮಾತನಾಡಿದ ಅವರು ಡಾಕ್ಟರ ಬಾಬು ಜಗಜೀವನ್ ರಾಮ್‍ರವರು ಸ್ವತಂತ್ರ ಭಾರತದ ಅಭಿವೃದ್ದಿಯ ಛಲಗಾರರಾಗಿ ಕಾರ್ಮಿಕ ಕಲ್ಯಾಣವನ್ನು ಬಯಸಿದ ನೇತಾರರಾಗಿದ್ದಾರೆ. ತಳ ಸಮುದಾಯದಿಂದ ಬಂದ ಅವರು ಭಾರತದ ಉಪ ಪ್ರಧಾನಿ ಹುದ್ದೆಯವರೆಗೂ ಬೆಳೆದು ಒಬ್ಬ ಮನುಷ್ಯ ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ನಿದರ್ಶಕರಾಗಿದ್ದಾರೆ. ಮಹಾನುಭಾವರು ನಡೆದು ಬಂದ ದಾರಿಯಲ್ಲಿ ನಾವೆಲ್ಲರೂ ಸಾಗೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೀಳಗಿ ತಾಲೂಕಾ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಎಂ.ಪಾಟೀಲ, ಪ್ರತಿಭಾನ್ವಿತ ಶಾಲೆಯ ಪ್ರಾಂಶುಪಾಲ ಲಕ್ಷ್ಮಣ ಬಿರಾದಾರ, ಕಚೇರಿ ಸಿಬ್ಬಂದಿಗಳಾದ ವಾಯ್.ಎಸ್.ತಳವಾರ, ಜೆ.ಎಸ್.ಪಟ್ಟಣಶೆಟ್ಟಿ, ಎಂ.ಡಿ.ಕಾಳೆ, ಪಿ.ಎ.ಕಾರಬಾರಿ, ಶ್ರೀಧರ ಕೆಂಚನಗೌಡ್ರ, ಹುಸೇನ ರೊಳ್ಳಿ, ಮಲ್ಲಪ್ಪ ಅರಳಿಮಟ್ಟಿ, ಸಂಗಮೇಶ ಹುನಗುಂದ, ರಾಘವೇಂದ್ರ ಬಂಕಾಪೂರ ಸೇರಿದಂತೆ ಇತರರು ಇದ್ದರು.
Be the first to comment