ವಿಶ್ರಾಂತಿಗಾಗಿ ಸುಂದರ ವನ ನಿರ್ಮಾಣ:ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ವಿವಿಧ ಜಾತಿಗಳ ಸಸಿ ನೆಡುವ ಮೂಲಕ ಪರಿಸರ ರಕ್ಷಣೆಯಲ್ಲೂ ಮೆಚ್ಚುಗೆಗೆ ಪಾತ್ರವಾದ ಕೆಲೂರ ಗ್ರಾಮ ಪಂಚಾಯತ್

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

15 ಜಾತಿಯ ಸಪ್ತಪರ್ಣಿ, ಜಕರಂಡ, ಸ್ಟಕ್ಯು೯ಲರಿಯಾ, ಗುಲ್ಮೋರ್, ಶಿವಣಿ, ಆಕಾಶ ಮಲ್ಲಿಗೆ, ಕದಂಬ, ಕೈಚೆಲಿಯಾ,ಕಾರ್ದಿಯಾ ಸೆಬಿಸ್ಪಿನ್, ಸೈತೊಡಿಯಾ, ಅತ್ತಿ,ಗೋಣಿ, ತಾಬುಬಿಯಾ ರೋಜಿಯಾ, ಬಿಲ್ವ ಪತ್ರಿ, ಬನ್ನಿ ಹೀಗೆ 650 ಕ್ಕೂ ಹೆಚ್ಚು ಸಸಿಗಳನ್ನು ನೆಡುವುದರೊಂದಿಗೆ ಕೆಲೂರ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸುಂದರ ವನ ನಿರ್ಮಾಣಕ್ಕೆ ಚಾಲನೆ.

ಬಾಗಲಕೋಟೆ:(ಕೆಲೂರ) ಇಲಕಲ್ಲ ತಾಲೂಕಿನ ಕೆಲೂರ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಅರಣ್ಯ ಇಲಾಖೆ ಸಹಯೋಗದೊಂದಿಗೆ ಗ್ರಾಮ ಪಂಚಾಯತಿ ವತಿಯಿಂದ ಸುಂದರ ವನ ನಿರ್ಮಾಣ ಮಾಡಲು ಇಂದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹಾಲಿಂಗೇಶ ನಾಡಗೌಡರ ಸಸಿನೆಡುವುದರ ಮೂಲಕ ಚಾಲನೆ ನೀಡಿದರು.

ಕೆಲೂರ ಗ್ರಾಮದ ಹೊರ ವಲಯದಲ್ಲಿ ಇರುವ ಪ್ರಕೃತಿ ಮಡಿಲಿನಲ್ಲಿ ನಯನ ಮನೋಹರವಾದ ಹೊಂಡದ ಹತ್ತಿರದ ಗುಡ್ಡದ ಮೇಲೆ ಶ್ರೀ ಪಂಚಲಿಂಗೇಶ್ವರ ದೇವಾಲಯ ಇದ್ದು ಬಹುಶ: ಚಾಲೂಕ್ಯ ಶಿಲ್ಪ ಕಲೆಯ 5 ವಿಭಿನ್ನ ಲಿಂಗಗಳು ಬೇರೆ ಬೇರೆ ಯಾಗಿವೆ. ಮಧ್ಯದಲ್ಲಿ ಒಂದು ಬೃಹತ್ ಲಿಂಗವಿದೆ.ಸಮನಾದ ಅಳತೆಯಲ್ಲಿ 5 ದೇಗುಲಗಳು ಒಂದೆ ಸಮತಲದಲ್ಲಿದ್ದು ಇವುಗಳನ್ನು ಒಟ್ಟಾರೆ ಸ್ಥಳೀಯರು ಶ್ರೀ ರಾಮಲಿಂಗೇಶ್ವರ ದೇವಾಲಯ ಎಂದು ಕರೆಯುತ್ತಾರೆ.

ಇದರ ಪಕ್ಕದಲ್ಲಿಯೇ ಸರ್ವ ಋತುವಿನಲ್ಲಿ ಜಲದಿಂದ ತುಂಬಿರುವ ಹೊಂಡವಿದೆ.ಇಲ್ಲಿ ಪ್ರತಿ ವರ್ಷ ದೀಪಾವಳಿ ಪಾಡ್ಯದಂದು ತೆಪ್ಪದ ರಥೋತ್ಸವ ವಿಜೃಂಭಣೆಯಿಂದ ಜರುಗುತ್ತದೆ. ದೇವಾಲಯದ ಹಿಂಬಾಗದಲ್ಲಿ ಬೃಹದಾಕಾರದ ಆಲದ ಮರವಿದೆ.ಇದೊಂದು ಪುಣ್ಯಕ್ಷೇತ್ರವೆ ಸರಿ.ಈ ವನದ ಉಪಯೋಗ ಕೇವಲ ನಮ್ಮೂರಿನವರಷ್ಟೆ ಅಲ್ಲದೆ ಸುತ್ತ ಮುತ್ತಲಿನ ಬೇರೆ ಬೇರೆ ಗ್ರಾಮದಿಂದ ಜನರು ಆಗಮಿಸಿ ಈ ಐತಿಹಾಸಿಕ ಸ್ಮಾರಕದ ಜೊತೆಗೆ ಸುಂದರ ವನ ವೀಕ್ಷಣೆಮಾಡಿ ದೇವರ ದರ್ಶನ ಪಡೆದು ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ ಸಸಿಗಳನ್ನು ವಿವಿಧ ಜಾತಿಯ ಸಸಿಗಳನ್ನು ಆಲಮಟ್ಟಿ ಅರಣ್ಯದಿಂದ ತರಲಾಗಿದೆ.

ಇದಕ್ಕೆ ಕಾಯಕಲ್ಪ ನೀಡಿ ಪ್ರವಾಸಿ ತಾಣವಾಗಿಸಿ ದೇವರ ದರ್ಶನ ಪಡೆದು,ವಿಶ್ರಾಂತಿ ಪಡೆಯಲು, ವಾಯು ವಿಹಾರಮಾಡಿ,ಅಭಿವೃದ್ಧಿ ಪಡಿಸಿ ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತೆ ಸುಂದರ ವನ ನಿರ್ಮಾಣ ಮಾಡಲು 15 ಜಾತಿಯ ಸಪ್ತಪರ್ಣಿ, ಜಕರಂಡ, ಸ್ಟಕ್ಯು೯ಲರಿಯಾ, ಗುಲ್ಮೋರ್, ಶಿವಣಿ, ಆಕಾಶ ಮಲ್ಲಿಗೆ, ಕದಂಬ, ಕೈಚೆಲಿಯಾ,ಕಾರ್ದಿಯಾ ಸೆಬಿಸ್ಪಿನ್, ಸೈತೊಡಿಯಾ, ಅತ್ತಿ,ಗೋಣಿ, ತಾಬುಬಿಯಾ ರೋಜಿಯಾ,ಬಿಲ್ವ ಪತ್ರಿ,ಬನ್ನಿ ಹೀಗೆ 650 ಕ್ಕೂ ಹೆಚ್ಚು ಸಸಿಗಳನ್ನು ನೆಡಲು  ದೇವಸ್ಥಾನದ ಆವರಣ ಮತ್ತು ಹೊಂಡದ ಸುತ್ತಲು  ಈಗಾಗಲೆ ತಗ್ಗುಗಳನ್ನು ತೋಡಲಾಗಿದೆ.

ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ರೇಂಜರ್ ಎಮ್.ಆರ್.ದೇಸಾಯಿ,ಉಪ ರೇಂಜರ್ ಪ್ರವೀಣ ಭರಮಗೌಡರ,ಪಿಡಿಓ ಪಿ.ಬಿ.ಮುಳ್ಳೂರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹಾಲಿಂಗೇಶ ನಾಡಗೌಡರ, ಸದಸ್ಯರಾದ ರಮೇಶ ಕೊಪ್ಪದ, ಹನಮಂತ ವಡ್ಡರ,ಉಮೇಶ ಹೂಗಾರ,ಪಿಕೆಪಿಎಸ್ ಸದಸ್ಯರಾದ ವಜಿರಪ್ಪ ಪೂಜಾರ,ಈರಣ್ಣ ಬೂದಿಹಾಳ, ಗ್ರಾಮದ ಪ್ರಮುಖರಾದ ಮಾಸಪ್ಪ ಕಬ್ಬರಗಿ, ವಿರೇಶ ಕಮತರ, ಬಸವರಾಜ ಮಾದರ, ಕರಿಯಪ್ಪ ತೋಟಗೇರ,ಕಲ್ಲು ನಾಡಗೌಡರ,ಬಾಬು ಸಿಮಿಕೇರಿ ಹಾಗೂ ಇತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*