ಲಿಂಗಸಗೂರು ಪಟ್ಟಣದ ಕೆರೆದಂಡೆಯ ಹತ್ತಿರ HKDP ಅನುದಾನದ. ರೂ.80.00ಲಕ್ಷ ಕಾಮಗಾರಿ ಸಂಪೂರ್ಣ ಕಳಪೆ ಕರವೇ ತನಿಖೆಗೆ ಒತ್ತಯ

ಲಿಂಗಸುಗೂರ ವರದಿ ಜೂನ್ 24:-ಲಿಂಗಸುಗೂರ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ ) ತಾಲೂಕ ಸಮಿತಿ ಲಿಂಗಸಗೂರು ಲಿಂಗಸಗೂರು ಪಟ್ಟಣದ ಕರಡಕಲ್ ಕೆರೆಯ ಪಕ್ಕದಲ್ಲಿ ಚರಂಡಿ ಕಾಮಗಾರಿಯನ್ನು HKDP ಯು

ರೂ.80.00ಲಕ್ಷ ಅನುದಾನ ದಲ್ಲಿ ಕಾಮಗಾರಿ ನೆಡೆಯುತ್ತಿದ್ದು ಇಲ್ಲಿ ಚರಂಡಿಯ ನಿರ್ಮಾಣ ಕಾಮಗಾರಿ ಪ್ರಾರಂಭಿಸಿದ್ದು, ಚರಂಡಿಯ ನೆಲಕ್ಕೆ ಯಾವುದೇ ಬೆಡ್ ಹಾಕದೇ ಸೈಡ್ ಮೂಲ ರೌಂಡ್ ಹಾಕಿರುವದರಿಂದ ಟಾರ್ ರೋಡ ಬಿಟ್ಟುಹೋಗಿರುತ್ತದೆ. ರಾಟ್ ಕಟ್ಟಿ ಕಾಂಕರ್ ಸಿಮೆಂಟ್ ಕಟ್ಟಿ ಮುಂದುವರಿಸಿದ್ದಾರೆ. ಆದರೆ ಕಾಮಗಾರಿಯ ಸ್ಥಳಕ್ಕೆ ಸಂಬಂಧಪಟ್ಟ ಇಂಜನೀಯರ ಬಂದು ಅವರಿಗೆ ಕಾಲುವೆ ಮೇಜರಮೆಂಟ್ ಕೊಡದೇ ಇದನ್ನು ಸಂಬಂಧಪಟ್ಟ ಟೆಂಡರ ಗುತ್ತೇದಾರರು ಕಾಮಗಾರಿಯನ್ನು ಕೈಗೊಳ್ಳದೇ ಈ ಕಾಮಗಾರಿಯನ್ನು ಬೇರೆಯವರಿಗೆ ರಿಂಗ್ ಅಮೌಂಟಿಗೆ ಕೊಟ್ಟು ಗುತ್ತೇದಾರರು ತಮಗೆ ಬರಬೇಕಾದ ದೊಡ್ಡ ಮೊತ್ತದ ಹಣವನ್ನು ಕಿತ್ತಿಕೊಂಡು ದೂರ ಉಳಿದಿದ್ದಾರೆ.

ಇಲ್ಲಿ ಕಾಮಗಾರಿ ನಿರ್ವಹಿಸಿಕೊಡಲು ಒಪ್ಪಿಕೊಂಡವರು ಯಾವುದೇ ಜವಾಬ್ದಾರಿಯಿಂದ ಕೆಲಸ ಕೈಗೊಳ್ಳದೇ ತಮ್ಮ ಮನಸೋ ಇಚ್ಛೆಯಂತ ಚರಂಡಿ ಮಾಡಿದ್ದರಿಂದ ಈಗ ಚರಂಡಿಯಲ್ಲಿ ನೀರು ಹರಿದು ಮುಂದಕ್ಕೆ ಹರಿದು ಹೋಗದಂತೆ ಆಗಿದ್ದು, ಈಗ ಚರಂಡಿಯಲ್ಲಿ ಪೈಪ ಹಾಕಿ ನೀರು ಕಳುಹಿಸಿರುವದು ಕಾಣುತ್ತದೆ
ಇಂಜನಿಯರರ ಮೇಲೆ ಮತ್ತು ಗುತ್ತೇದಾರರ ಮೇಲೆ ಕಾನೂನು ಕ್ರಮ ಜರುಗಿಸಿ ಕಾಮಗಾರಿಗೆ ಇಟ್ಟ ಹಣವನ್ನು ಪುನಃ ಟೆಂಡರ್ ಕರೆದು ನಿಯಮಾನುಸಾರ ಕಾಮಗಾರಿ ಮಾಡುವ ರಿಗೆ ಕೆಲಸವನ್ನು ನೀಡಬೇಕು ಸರಕಾರದ ಹಣವನ್ನು ಲೂಟಿ ಮಾಡಲು ಹೊರಟ ಗುತ್ತೇದಾರ ಮತ್ತು ಸಂಬಂಧಪಟ್ಟ ಇಂಜನೀಯರರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಇದರ ಬಿಲ್ಲು ತಡೆದು ಕಾಮಗಾರಿಯು ಸರಕಾರದ ನಿಯಮಾನುಸಾರ ಕೈಗೊಳ್ಳುವವರೆಗೂ ಅದರ ಬಿಲ್ಲು ತಡೆಯಬೇಕು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ತಾಲ್ಲೂಕು ಅದ್ಯೆಕ್ಷ ಲಿಂಗಸುಗೂರ ಆಂಜನೇಯ ಭಂಡಾರಿ ಹಾಗೂ ಕರವೇ ಕಾರ್ಯ ಕರ್ತರು ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರಿಗೆ ಮನವಿ ಸಲ್ಲಿಸಿದರು

Be the first to comment

Leave a Reply

Your email address will not be published.


*