ಪ್ರೌಢಶಾಲಾ ದಾಖಲಾತಿ ಆಂದೋಲನಕ್ಕೆ ಚಾಲನೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಕೊವಿಡ್-19 ಸಂಕಷ್ಟದ ನಡುವೆಯು ಮಕ್ಕಳ ಕಲಿಕಾ ಪ್ರಗತಿ ಹಿಂದೂಳಿಯಬಾರದು ಎಂಬ ಸದುದ್ದೇಶದಿಂದ ತಂತ್ರಜ್ಞಾನದ ಮೂಲಕ ಹಾಗೂ ದೂರದರ್ಶನ ಚಂದನ ವಾಹಿನಿಯಲ್ಲಿ ಆನ್‌ಲೈನ್ ಶಿಕ್ಷಣ ತರಗತಿಗಳನ್ನು ಪ್ರಾರಂಭಿಸುತ್ತಿದ್ದು, ಅದರಂತೆ ಶಾಲಾ ದಾಖಲಾತಿ ಪ್ರವೇಶ ಕೂಡ ಅತ್ಯವಶ್ಯಕವಾಗಿದೆ.

ಬಾಗಲಕೋಟೆ:(ಕೆಲೂರ) ‘ಮಕ್ಕಳಿಗೆ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ’ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕದಿರಿ ಎನ್ನುವುದರ ಮೂಲಕ ಕೆಲೂರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹಾಲಿಂಗೇಶ ನಾಡಗೌಡರ ಇವರು ಬವಿವಿ ಸಂಸ್ಥೆಯಡಿಯಲ್ಲಿ ನಡೆಯುತ್ತಿರುವ ಕೆಲೂರಿನ ಶ್ರೀ ಗುರು ಮಂಟೇಶ್ವರ ಪ್ರೌಢಶಾಲೆಯಲ್ಲಿ 8 ರಿಂದ 10 ನೇ ತರಗತಿಯ ದಾಖಲಾತಿ ಆಂದೋಲನಕ್ಕೆಚಾಲನೆ ನೀಡಿದರು.

ಸರ್ಕಾರದ ಮತ್ತು ನಮ್ಮ ಬವಿವ ಸಂಸ್ಥೆಯ ಮುಖ್ಯ ಆಶಯ ಶಾಲಾ ವಯಸ್ಸಿನ ಅರ್ಹ ಎಲ್ಲಾ ಮಕ್ಕಳನ್ನು ಶಾಲೆಗೆ ದಾಖಲು ಮಾಡಿಕೊಂಡು ಅವರಿಗೆ ಕಲಿಕಾ ಪಠ್ಯ ಪುಸ್ತಕಗಳನ್ನು ನೀಡುವುದರ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಸರಕಾರದ ಉಚಿತ ಪಠ್ಯ ಪುಸ್ತಕ, ಬಿಸಿಯೂಟ, ಕ್ಷೀರಭಾಗ್ಯ, ವಿದ್ಯಾರ್ಥಿ ವೇತನ ಮುಂತಾದ ಸೌಲಭ್ಯಗಳನ್ನು ದೊರಕಿಸಿಕೊಡುವುದರ ಮೂಲಕ ಕಲಿಕೆಗೆ ಪ್ರೆರಣೆ ನೀಡಬೇಕು. 2021-22ನೇ ಶೈಕ್ಷಣಿಕ ವರ್ಷಕ್ಕೆ 8 ರಿಂದ 10 ನೇ ತರಗತಿ ಪ್ರವೇಶಾತಿಗೆ ದಾಖಲಾತಿ ಪ್ರಾರಂಭಿಸಲಾಗಿದೆ. ಸರ್ಕಾರದ ಮತ್ತು ಆಡಳಿತ ಮಂಡಳಿಯ ನಿರ್ದೇಶನದಂತೆ ಗ್ರಾಮದ ಅರ್ಹ ವಯಸ್ಸಿನ ಎಲ್ಲಾ ಮಕ್ಕಳನ್ನು ಶಾಲೆಗೆ ದಾಖಲು ಮಾಡಿಕೊಳ್ಳಬೇಕು ಎಂದು ಪ್ರೌಢ ಶಾಲಾ ಮುಖ್ಯಸ್ಥರಾದ ಎಸ್.ಬಿ.ದಾಸರ ತಿಳಿಸಿದರು.

ಈ ಸಂದರ್ಭದಲ್ಲಿ ಪಿಕೆಪಿಎಸ್ ಬ್ಯಾಂಕಿನ ನಿರ್ದೇಶಕರಾದ ವಜಿರಪ್ಪ ಪೂಜಾರ,ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಮುತ್ತಣ್ಣ ನಾಡಗೌಡರ,ಪಾಲಕರು,ಗ್ರಾಮ ಪಂಚಾಯತಿ ಸದಸ್ಯರು ಮತ್ತು ಶಿಕ್ಷಕ ಸಿಬ್ಬಂದಿ ಯವರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*