ಬಾಗಲಕೋಟೆ:(ಗುಡೂರ)ಇಲಕಲ್ಲ ತಾಲೂಕಿನ ಗುಡೂರ(ಎಸ್.ಸಿ) ಗ್ರಾಮ ಪಂಚಾಯಿತಿ ಸಿಬ್ಬಂದಿಯವರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಮೂಲಕ ಮನವಿ ಪತ್ರವನ್ನು ಸರ್ಕಾರಕ್ಕೆ ಕಳುಹಿಸಲು ಮನವಿ ಮಾಡಿಕೊಳ್ಳಲಾಯಿತು.
ನೌಕರರ ಪ್ರಮುಖ ಬೇಡಿಕೆಗಳಾದ ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ 15ನೇ ಹಣಕಾಸು ಆಯೋಗದ ಹಣದಲ್ಲಿ ವೇತನ ಕೊಡುವುದು,ಎಲ್ಲ ಸಿಬ್ಬಂದಿಗಳಿಗೆ ನಿವೃತ್ತಿ ವೇತನ ನೀಡುವುದು,ವೈದ್ಯಕೀಯ ವೆಚ್ಚ ಹಾಗೂ ಗ್ರ್ಯಾಚುಟಿ ಹಣ ಕೂಡಲೆ ಬಿಡುಗಡೆ ಮಾಡಬೇಕು.ಗ್ರಾಮ ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಲ್ ಕಲೆಕ್ಟರ್ಗಳನ್ನು ಕಾರ್ಯದರ್ಶಿ-ಗ್ರೇಡ್ 2ಗೆ ಪದೋನ್ನತಿಗೊಳಿಸಲು ತಡೆಹಿಡಿದ ಆದೇಶವನ್ನು ಕೂಡಲೆ ಹಿಂಪಡೆದು ನೇಮಕಾತಿಗೆ ಅವಕಾಶ ಮಾಡಿಕೊಡುವುದು ಗ್ರಾಮ ಪಂಚಾಯತಿ ನೌಕರರನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ ಇಲ್ಲವಾದರೆ ಕೊರೊನಾ ಕೆಲಸದಿಂದ ಮುಕ್ತಗೊಳಿಸಬೇಕು.ಹೀಗೆ ಹಲವು ಬೇಡಿಕೆಗಳನ್ನು ಈಡೇರಿಸುವ ಕುರಿತು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಮೂಲಕ ಕರಣಿಕ ಮಹಾಂತೇಶ ಕೊಡಕೇರಿ ಮುಂದಾಳತ್ವದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
Be the first to comment