ಜಿಲ್ಲಾ ಸುದ್ದಿಗಳು
ಪುರಾತನ ಕಾಲದಿಂದಲೂ ನಾವು ಗ್ರಂಥಾಲಯಗಳನ್ನು ಕಾಣಬಹುದು ಆದರೆ ಅವು ಸಾವ೯ಜನಿಕರ ಸ್ವತ್ತಾಗದೇ ರಾಜರ , ಉಳ್ಳವರ ಸ್ವತ್ತಾಗಿದ್ದವು . ಕ್ರಮೇಣ ಗ್ರಂಥಾಲಯಗಳು ಸಾವ೯ಜನಿಕರಿಗೆ ಮುಕ್ತ ಪ್ರವೇಶ ನೀಡಿ ಓದುಗರಿಗೆ ಅನುಕೂಲ ಕಲ್ಪಿಸಿಕೊಟ್ಟವು . ಇದೀಗ ಗ್ರಂಥಾಲಯಗಳು ಮಾಹಿತಿ ಕೇಂದ್ರಗಳಾಗಿ ಕೆಲಸ ನಿವ೯ಹಿಸುವ ಮತ್ತು ಸ್ಪದಾ೯ತ್ಮಕ ಅಧ್ಯಯನ ಕೇಂದ್ರಗಳಾಗಿ ಕೆಲಸ ನಿವ೯ಹಿಸುವಷ್ಟು ಬೆಳದು ನಿಂತಿವೆ.
ಬಾಗಲಕೋಟೆ: (ಕೆಲೂರ) ಮುಂಬೈ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಸಿಯಲ್ ಸೈನ್ಸನಲ್ಲಿ ಸಹಾಯಕ ಗ್ರಂಥಪಾಲಕರಾಗಿ ಸುಮಾರು 28 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪುಟ್ಟರಾಜ ಚೌಕಿಮಠರು ಕೊವಿಡ್ ಎರಡನೆ ಅಲೆಯ ಲಾಕ್ ಡೌನ್ ದಿಂದ ತಮ್ಮ ತವರೂರಾದ ಶಿರೂರಿಗೆ ಆಗಮಿಸಿದ್ದು ಇಂದು ಮಂಗಳವಾರ ಆಕಸ್ಮಿಕವಾಗಿ ಇಲಕಲ್ಲ ತಾಲೂಕಿನ ಕೆಲೂರಿನ ಅಲೆಮಾರಿ ಗ್ರಂಥಾಲಯಕ್ಕೆ ಓದವ ನಿಮಿತ್ಯ ಭೇಟಿ ನೀಡಿದರು.
ಹಿಂದೆ ಗ್ರಂಥಪಾಲಕನನ್ನು ಉಗ್ರಾಣಿಕನೆಂದು , ಗ್ರಂಥಾಲಯವನ್ನು ಉಗ್ರಾಣ ಎಂದು ಕರೆಯುತ್ತಿದ್ದರು . ಅಧುನಿಕ ಕಾಲದಲ್ಲಿ ಗ್ರಂಥಾಲಯಗಳು ಮಾಹಿತಿ ಕೇಂದ್ರಗಳಾಗಿ , ಸ್ಪಧಾ೯ತ್ಮಕ ಅಧ್ಯಯನ ಕೇಂದ್ರ , ಮಕ್ಕಳ, ವೃದ್ದರ , ಸಂಶೋಧನಾ ,ಶೈಕ್ಷಣಿಕ , ವಿಶೇಷ,ವಿಶ್ವವಿದ್ಯಾಲಯ ಹೀಗೆ ಅನೇಕ ಪ್ರಕಾರದ ಗ್ರಂಥಾಲಯಗಳು ಓದುಗರಿಗೆ ಗ್ರಂಥ ದೊರಕಿಸಿಕೊಡುವ ಕೆಲಸ ಮಾಡುತ್ತಿವೆ.
ಗ್ರಾಮೀಣ ಭಾಗದಲ್ಲಿ ತೆರೆದಿರುವ ಅಲೆಮಾರಿ ಗ್ರಂಥಾಲಯ ಕೇವಲ ಪುಸ್ತಕಗಳನ್ನು ತುಂಬುವುದಷ್ಟೇ ಅಲ್ಲದೆ, ಆ ಜಾಗದಲ್ಲಿ ಗೋಡೆಗಳಿಗೆ ಸುಂದರವಾಗಿ ಕಾಣುವಂತೆ ಬಣ್ಣದ ಪೇಂಟ್ ಮಾಡಿಸಿದ್ದು, ಇದೊಂದು ಪ್ರಶಾಂತ ಸ್ಥಳವಾಗಿದೆ. ಗ್ರಂಥಾಲಯಗಳಿಗೆ ಕಾಲಿಟ್ಟೊಡನೆ ಶಾಂತ ಭಾವ ಕೈಬೀಸಿ ಕರೆದು ಓದುವ ಆಸಕ್ತಿ ಮೂಡಿಸುವಂತಿದೆ. ಅಲ್ಲಲ್ಲಿ ಗ್ರಂಥಾಲಯದ ಗೋಡೆಗಳಿಗೆ ನಾನ್ನುಡಿಗಳು ಕಲಾಸ್ಪರ್ಶ ನೀಡಿ ಮತ್ತಷ್ಟು ಆಕರ್ಷಕವಾಗಿ ಕಾಣುವಂತೆ ಮಾಡಿದ್ದಾರೆ. ಎಂದು ಪುಟ್ಟರಾಜ ಚೌಕಿಮಠ ಹೇಳಿದರು.
ಈ ಸಂದರ್ಭದಲ್ಲಿ ಅಲೆಮಾರಿ ಗ್ರಂಥಾಲಯ ಮೇಲ್ವಿಚಾರಕರಾದ ಶ್ರೀಮತಿ ಸುಧಾ ಹೆಳವರ,ಶ್ರೀ ಗುರು ಮಂಟೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಎಸ್.ಬಿ.ದಾಸರ,ಶಿಕ್ಷಕರಾದ ಸಿದ್ಧರಾಜ ಕೆಂಧೂಳ್ಳಿ ಇದ್ದರು.
Be the first to comment