ಗ್ರಾಮದ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಕಾಯಕಯೋಗಿಗಳಿಗೆ ಆಹಾರ ಧಾನ್ಯ ಕಿಟ್ ವಿತರಣೆ: ಎಸ್.ಆರ್.ಎನ್ ಫೌಂಡೇಷನ್ ಅಧ್ಯಕ್ಷ ನವಲಿಹಿರೇಮಠ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಕಾರ್ಮಿಕರ ಜೀವನಮಟ್ಟ ಸುಧಾರಿಸದ ಹೊರತು ಅಭಿವೃದ್ಧಿಗೆ ಅರ್ಥವಿಲ್ಲ.ಕಾರ್ಮಿಕರ ಶ್ರಮವಿದ್ದಲ್ಲಿ ಮಾತ್ರ ನಾವೆಲ್ಲರು ಆರೋಗ್ಯದಿಂದಿರಲು ಸಾಧ್ಯ. ದೇಶದ ನಿಜವಾದ ಕಾಯಕಯೋಗಿಗಳು ಗ್ರಾಮದ ಸ್ವಚ್ಚತೆಯನ್ನು ಬಯಸುವವರು. ಎಸ್.ಆರ್.ಎನ್

ಬಾಗಲಕೋಟೆ:(ಗುಡೂರ)
ಮಳೆ,ಗಾಳಿ, ಚಳಿ, ಬಿಸಿಲು, ಲೆಕ್ಕಿಸದೆ ಇಲಕಲ್ಲ ತಾಲೂಕಿನ ಗುಡೂರ ಗ್ರಾಮ ಪಂಚಾಯತಿ ಕಾರ್ಮಿಕರು ಸಮಾಜದ ಸ್ವಾಸ್ಥ್ಯಕ್ಕಾಗಿ,ಗ್ರಾಮದ ಸ್ವಚ್ಚತೆಗಾಗಿ ದುಡಿಯುತ್ತಿದ್ದಾರೆ.ಕೋವಿಡ್ ಅಲೆ ಇದ್ದರು ಕೂಡಾ ಗ್ರಾಮದ ಸ್ವಚ್ಚತೆಗಾಗಿ ಶ್ರಮಿಸುತ್ತಿರುವ ಕಾಯಕಯೋಗಿಗಳಿಗೆ ಎಸ್.ಆರ್.ಎನ್ ಫೌಂಡೇಷನ್ ಅಧ್ಯಕ್ಷ ಎಸ್.ಆರ್.ನವಲಿಹಿರೇಮಠ ಗ್ರಾಮ ಪಂಚಾಯತಿ ಆವರಣದಲ್ಲಿ ಆಹಾರಧಾನ್ಯದ ಕಿಟ್ ವಿರಿಸಿದರು.

ಕಿಟ್ ವಿತರಿಸಿ ಮಾತನಾಡಿದ ಅವರು ಗ್ರಾಮದ ಸುಂದರ ಪರಿಸರ ನಿರ್ಮಾಣದಲ್ಲಿ ಗ್ರಾಮದ ಸ್ವಚ್ಛತೆಯಲ್ಲಿ ಇವರ ಪಾತ್ರ ಬಹಳ ದೊಡ್ಡದು ಎಂದರು.ಈ ಸಂದರ್ಭದಲ್ಲಿ ದೊಡ್ಡಬಸಯ್ಯ ಹಿರೇಮಠ, ಶ್ರೀಶೈಲ ಪಾಪನಾಳ್,ಸಲೀಂ ಜರತಾರಿ ರಫೀಕ್ ಇಟಗಿ, ಗ್ರಾಮ ಪಂಚಾಯ್ತಿ ಅಧ್ಯಕ್ಷರು ಶ್ರೀಮತಿ ಚಾಂದಿನಿ ರಫೀಕ್ ಇಟಗಿ,ಉಪಾಧ್ಯಕ್ಷರು ಶ್ರೀ ಹಣಮಂತ ತೊಟ್ಲಪ್ಪನವರ್,ರಾಯಪ್ಪ ತಿಳಗರ,ಶಶಿ ಮ್ಯಾಗೇರಿ, ಬಸವರಾಜ ಗಾರವಾಡ, ಅಬ್ದುಲ್ ಸರಕಾಜಿ
ಫಕೀರಪ್ಪ ತೊಟ್ಲಪ್ಪನವರ್ ಉಪಸ್ಥಿತರಿದ್ದರು.

ಹುನಗುಂದ ಮತಕ್ಷೇತ್ರದ ಜನತೆಗಾಗಿ ಅಂಬುಲೆನ್ಸ ಲೋಕಾರ್ಪಣೆ

ಮತಕ್ಷೇತ್ರದ ಬಡ ಜನತೆಯ ಅನುಕೂಲತೆಗಾಗಿ ಇಲಕಲ್ಲನ ಎಸ್.ಆರ್.ಎನ್ ಫೌಂಡೇಷನ್ ವತಿಯಿಂದ ಉಚಿತ ಅಂಬುಲೆನ್ಸ ಸೇವೆ ಪ್ರಾರಂಭಿಸಲಾಯಿತು.ಈ ಸಂದರ್ಭದಲ್ಲಿ ಅಧ್ಯಕ್ಷರಾದ ಎಸ್.ಆರ್.ನವಲಿಹಿರೇಮಠ, ಸದಸ್ಯರಾದ ರಜಾಕ್ ತಟಗಾರ,ವೀಣಾ ಅರಳಿಕಟ್ಟಿ,ಮಹಾಂತೇಶ ಅಂಗಡಿ,ಅಶೋಕ ತೆಳಗಡೆ ಮತ್ತಿತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*