ಕೋವಿಡ್ ವೈರಸ್ ತಡೆಗಟ್ಟಲು ಕೋವಿಡ್ ವಾರಿಯರ್ಸಗಳ ಸೇವೆ ಅಮೋಘವಾದದ್ದು. ಈ ನಿಟ್ಟಿನಲ್ಲಿ ಅವರನ್ನು ಗೌರವಿಸುವುದು ಮಾನವೀಯ ಧರ್ಮ ಎಂದ ಎಸ್.ಆರ್.ಎನ್ ಫೌಂಡೇಶನ್ ಸಂಸ್ಥಾಪಕ ಎಸ್.ಆರ್.ನವಲಿಹಿರೇಮಠ ಅವರೆಲ್ಲರಿಗೂ ಗೌರವ ಸನ್ಮಾನ ನೀಡಿ ದಿನಸಿ ಕಿಟ್ ವಿತರಿಸಿದರು.
ಬಾಗಲಕೋಟೆ:(ಗುಡೂರ ಎಸ್.ಸಿ) ಎಸ್.ಆರ್.ಎನ್.ಫೌಂಡೇಶನ್ ವತಿಯಿಂದ ಇಲಕಲ್ಲ ತಾಲೂಕಿನ ಗುಡೂರ ಗ್ರಾಪಂ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಹರಡದಂತೆ ಸಾರ್ವಜನಿಕರಲ್ಲಿ ಅರಿವು,ಜಾಗೃತಿ ಮೂಡಿಸುತ್ತಿರುವ ಕೊರೊನಾ ಸೇನಾನಿಗಳಾದ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ, ಗ್ರಾಪಂ ಸಿಬ್ಬಂದಿಗೆ,ಪೋಲಿಸ್ ಸಿಬ್ಬಂದಿಗೆ ಗ್ರಾಪಂ ಸಭಾಂಗಣದಲ್ಲಿ ಸನ್ಮಾನಿಸಿ ದಿನಸಿ ಕಿಟ್ ವಿತರಿಸಲಾಯಿತು.
ನಂತರ ವಿಶ್ವ ಪರಿಸರ ದಿನವಾದ ಇಂದಹ ಗ್ರಾಪಂ ಆವರನದಲ್ಲಿ ಸಸಿ ನೆಟ್ಟು ಮಾತನಾಡಿದ ಎಸ್.ಆರ್.ಎನ್.ಫೌಂಡೇಷನ್ ಸಂಸ್ಥಾಪಕರಾದ ಎಸ್.ಆರ್.ನವಲಿಹಿರೇಮಠ ಲಾಕ್ ಡೌನ್ ಜಾರಿಯಾದಾಗಿನಿಂದ ಸತತವಾಗಿ ಗುಡೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೋವಿಡ್ 19 ವೈರಸ್ಸನ್ನು ತಡೆಯಲು, ಆರೋಗ್ಯಧಿಕಾರಿಗಳು ಮತ್ತು ಸಿಬ್ಬಂದಿ, ಆಶಾ ಮತ್ತು ಅಮಗನವಾಡಿ ಕಾರ್ಯಕರ್ತೆಯರು, ಪೊಲೀಸ್ ಇಲಾಖೆ, ಸ್ಚಚ್ಚಾತಾ ಸಿಬ್ಬಂದಿ, ಹೀಗೆ ಕರೋನ ವೇಳೆಯಲ್ಲಿ ಹಗಲಿರುಳೆನ್ನದೆ ದುಡಿದವರು ಈ ವಾರಿಯಸ್೯.ಇವರು ಕರೊನ ಮುಕ್ತಗೊಳಿಸಲು ಶ್ರಮಿಸಿದ್ದಾರೆ, ಲಾಕ್ ಡೌನ್ ವೇಳೆಯಲ್ಲಿ ಗ್ರಾಮವನ್ನು ಕರೋನ ಮುಕ್ತವಾಗಿಸುವುದು ಅತೀ ಮುಖ್ಯ ಸಂಗತಿಯಾಗಿತ್ತು, ಕರೋನ ವಾರಿಯಸ್೯ ನಮ್ಮ ರಕ್ಷಣೆ ಜೊತೆಗೆ ಮಾರಾಣಾಂತಿಕ ರೋಗದ ಜಾಗೃತಿ ಮೂಡಿಸಿದ್ದಾರೆ ಇವರೆಲ್ಲರನ್ನು ಅಭಿನಂದಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ರಫೀಕ್ ಇಟಗಿ,ಉಪಾಧ್ಯಕ್ಷ ಹಣಮಂತ ತೊಟ್ಲಪ್ಪನವರ ಹಾಗೂ ಗ್ರಾಪಂ ಸದಸ್ಯರು ಅಬ್ದುಲ್ ಸರಕಾಜಿ, ದೊಡ್ಡಬಸಯ್ಯ ಹಿರೇಮಠ ಶ್ರೀಶೈಲ ಪಾಪನಾಳ,ರಾಯಪ್ಪ ತಿಲಗರ, ಕಾರ್ಯಕರ್ತರಾದ ಸಲೀಂ ಜರದಾರಿ, ಬಸವರಾಜ ಗಾರವಾಡ, ಚಾಂದಸಾಬ ವಾಲಿಕಾರ ಉಪಸ್ಥಿತರಿದ್ದರು.
Be the first to comment