ನೈಸರ್ಗಿಕ ಸಂಪನ್ಮೂಲಗಳನ್ನು ದುರುಪಯೋಗ ಪಡಿಸಿಕೊಳ್ಳುವುದರ ಪರಿಣಾಮವೇ ನಮ್ಮ ಜಾಗತಿಕ ತಾಪಮಾನದಲ್ಲಿ ಆಗುತ್ತಿರುವ ಏರು-ಪೇರು. ಪ್ರಸ್ತುತದಲ್ಲಿ ಜಾಗತಿಕ ತಾಪಮಾನ ಹಾಗೂ ಇತರ ರೋಗಗಳಿಂದ ಆಗುತ್ತಿರುವ ಹಾನಿಯನ್ನು ಎದುರಿಸಬೇಕಾಗುತ್ತಿದೆ. ಹೀಗಿರುವಾಗ ಪರಿಸರ ಕಾಳಜಿಯ ಕುರಿತಾಗಿ ಗಮನಹರಿಸಲೇ ಬೇಕಿದೆ.
ಬಾಗಲಕೋಟೆ:(ಕೆಲೂರ) ಗ್ರಾಮ ಪಂಚಾಯತ್ ವತಿಯಿಂದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ್ಕೆ ಗ್ರಾ.ಪಂ.ಅಧ್ಯಕ್ಷ ಮಹಾಲಿಂಗೇಶ ನಾಡಗೌಡರ ಸಸಿ ನೆಡುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯರಾದ ರಮೇಶ ಕೊಪ್ಪದ,ಉಮೇಶ ಹೂಗಾರ,ಹನಮಂತ ವಡ್ಡರ,ಪಿ.ಕೆ.ಪಿ.ಎಸ್ ಸದಸ್ಯರಾದ ವಜಿರಪ್ಪ ಪೂಜಾರ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಪಿ.ಬಿ.ಮುಳ್ಳೂರ,ಗ್ರಾಮ ಲೆಕ್ಕಾಧಿಕಾರಿ ಧರ್ಮಣ್ಣ ಯತ್ನಟ್ಟಿ,ಅರಣ್ಯಾಧಿಕಾರಿ ದೆವೇಂದ್ರ ನಾಯ್ಕರ, ಕಾರ್ಯದರ್ಶಿ ಅರುಣರಷಿದ್ ಮಿಟ್ಟಲಕೋಡ್, ಗ್ರಾಮದ ಪ್ರಮುಖರಾದ ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಮುತ್ತಣ್ಣ ನಾಡಗೌಡರ, ಗ್ರಾಮದ ಪ್ರಮುಖರಾದ,ಮಾಸಪ್ಪ ಕಬ್ಬರಗಿ, ಗೌಡಪ್ಪ ಕೊಪ್ಪದ,ಬಸವರಾಜ ಮಾದರ,ಬಾಬು ಸಿಮಿಕೇರಿ,ಮೈಲಾರಪ್ಪ ತುಂಬದ ಉಪಸ್ಥಿತರಿದ್ದರು.
Be the first to comment