ಲಿಂಗಸ್ಗೂರ::- ಲಿಂಗಸ್ಗೂರ ನಗರದಲ್ಲಿ ಇರುವ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಮತ್ತು ಸಂಬಂಧಿಕರಿಗೆ ಆಹಾರ ನೀಡುವ ಮಹತ್ವದ ಕಾರ್ಯವನ್ನು ಕಳೆದ 13 ದಿನಗಳಿಂದ ಜೆೆಡಿಎಸ ಮುಖಂಡ ಸಿದ್ದು ಬಂಡಿ ನೇತೃತ್ವದಲ್ಲಿ ತಾಲ್ಲೂಕ ಜೆಡಿಎಸ ಕಾರ್ಯಕರ್ತರು ಮಾಡುತ್ತಾ ಹಸಿದವರ ಹೊಟ್ಟೆ ತುಂಬಿಸುತಿದ್ದಾರೆ.
ತಾಲ್ಲೂಕನ ಯುವ ನಾಯಕರಾ ಜೆೆಡಿಎಸ ಮುಖಂಡ ಸಿದ್ದು ಬಂಡಿಯವರು ಹಸಿದವರ ನೆರವಿಗೆ ಧಾವಿಸಿದ್ದು, ಪ್ರತಿನಿತ್ಯ ತಾವೇ ನಿಂತು ಆಹಾರ ತಯಾರಿಸಿ ಪ್ಯಾಕೆಟ್ ಮಾಡಿ, ಆಹಾರದ ಪ್ಯಾಕೆಟ್ ಹಾಗೂ ನೀರಿನ ಬಾಟಲ್ ವಿತರಣೆ ಮಾಡುತ್ತಿದ್ದಾರೆ.ತಾಲ್ಲೂಕ ಆಸ್ಪತ್ರೆಗೆ ಬರುವ ಕೊರೊನಾ ರೋಗಿಗಳ ಸಂಬಂಧಿಕರು, ನಾನ್ ಕೋವಿಡ್ ರೋಗಿಗಳು, ಬಡವರು ಮಧ್ಯಾಹ್ನದ ಊಟ ಸಿಗದೆ ಹಸಿವಿನಿಂದ ಬಳಲುತ್ತಿದ್ದರು. ಲಾಕ್‍ಡೌನ್ ಹಿನ್ನೆಲೆ ಹೋಟೆಲ್ ಗಳು ಮುಚ್ಚಿ ಮಧ್ಯಾಹ್ನದ ಊಟ ಸಿಗದೆ ಪರದಾಡುತ್ತಿದ್ದ ಜನರಿಗೆ ಊಟ ವಿತರಿಸುತ್ತಿದ್ದಾರೆ.
ತಾವೇ ಅಂಗಡಿಯಿಂದ ದಿನಸಿ ತರುವ ಸಿದ್ದು ಬಂಡಿಯವರು ಖುದ್ದು ತಾವೇ ನಿಂತು ತಯಾರಿಸಿದ ಆಹಾರದ ಪ್ಯಾಕೆಟ್ ಹಾಗೂ ನೀರಿನ ಬಾಟಲಿಗಳನ್ನು ವಾಹನಕ್ಕೆ ತುಂಬಿಕೊಂಡು ಹಸಿದವರಿಗೆ ಹಂಚುತ್ತಾರೆ.ಲಿಂಗಸ್ಗೂರ ತಾಲ್ಲೂಕ ಆಸ್ಪತ್ರೆಗೆ ನಗರದಲ್ಲಿ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳ ಮುಂದೆ ಹಸಿದು ಬರುವವರ ಹೊಟ್ಟೆ ತುಂಬಿಸುತ್ತಿದ್ದಾರೆ. ಇವರ ಕಾರ್ಯಕ್ಕೆ ತಾಲ್ಲೂಕ ಜೆಡಿಎಸ ಕಾರ್ಯಕರ್ತರು ಹಾಗೂ ನಗರ ಸಭೆ ಸದಸ್ಯರು ಸಹಕರಿಸಿದರು.
ತಾಲ್ಲೂಕನಲ್ಲಿ ಈಗಾಗಲೇ ಕರೋನ ಪ್ರಕರಣಗಳು ತಾಲ್ಲೂಕಿನಲ್ಲಿ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತಿರುದರಿಂದ ಜನರಲ್ಲಿ ಮನವಿ ಮಾಡಿಕೋಳುತ್ತೆನೆ ಆಸ್ಪತ್ರೆ ಗೆ ಬಂದು ಚಿಕಿತ್ಸೆ ಪಡೆದು ಆರೋಗ್ಯವಾಗಿರಬೇಕು ಎಂದು ಹೇಳಿದರು
ನನ್ನ ತಾಲ್ಲೂಕಿನ ಜನತೆ ತೊಂದರೆಯಲ್ಲಿ ಇದ್ದಾಗ ಸುಮ್ಮನೆ ಕೂರುವ ವ್ಯಕ್ತಿ ನಾನ್ನಲ್ಲ. ಮನುಷ್ಯರಾದ ನಾವು ಸಹ ಜವಾಬ್ದಾರಿ ಹೊರಬೇಕು. ದೇವರು ನನಗೆ ಕೊಟ್ಟಿದ್ದಾನೆ, ಆದರಿಂದ ಹಸಿದವರಿಗೆ ನೆರವಾಗಬೇಕು ಅನುವುದು ನನ್ನ ಉದ್ದೇಶ. ಲಾಕ್‍ಡೌನ್ ಜಾರಿಯಲ್ಲಿರುವ ತನಕ ಈ ಸೇವೆ ಮುಂದುವರಿಸುತ್ತೇನೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಜೆಡಿಎಸ ತಾಲ್ಲೂಕ ಅಧ್ಯಕ್ಷರಾದ ನಾಗಭೂಷಣ ತಾಲ್ಲೂಕಿನ ಪ್ರಧಾನ ಕಾರ್ಯದರ್ಶಿ ಸಿದ್ದು ಬಡಿಗೇರ ನಗರ ಘಟಕ ಜೆಡಿಎಸ ಅಧ್ಯಕ್ಷ ವಿಜಯ ಪೂಜಾರಿ ಇಮ್ತಜೆಪಸಷಾ ಜೆಡಿಎಸ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹಾಜರಿದ್ದರು
Be the first to comment