ಜಿಲ್ಲಾ ಸುದ್ದಿಗಳು
ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಋತುಚಕ್ರ ಸಂದರ್ಭದಲ್ಲಿ ಬಟ್ಟೆ ಬಳಕೆ ಮಾಡುವುದರಿಂದ ಸೋಂಕು ತಗಲುವ ಪ್ರಮಾಣ ಹೆಚ್ಚಾಗಿದ್ದು, ಬಟ್ಟೆ ಬಳಕೆಯನ್ನು ತೊಡೆದು ಹಾಕಿ ಪ್ಯಾಡ್‍ಗಳ ಬಳಕೆ ಮಾಡಿ ಹಾಗೂ ಋತುಚಕ್ರದ ಕಪ್‍ಗಳನ್ನು ಬಳಕೆ ಮಾಡಬೇಕು.
ಬಾಗಲಕೋಟೆ :ಜಿಲ್ಲಾ ಪಂಚಾಯತ ಸ್ವಚ್ಛ ಭಾರತ (ಗ್ರಾಮೀಣ) ಯೋಜನೆಯಡಿ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಶುಕ್ರವಾರ ಋತುಚಕ್ರ ನೈರ್ಮಲ್ಯ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.
ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಉಪನ್ಯಾಸಕರಾಗಿ ಆಗಮಿಸಿದ್ದ ತಾಯಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ ಡಾ.ಜಯಶ್ರೀ ಎಮ್ಮಿ ಮಾತನಾಡಿ ಮಹಿಳೆಯರಲ್ಲಿ ಮುಟ್ಟು ಒಂದು ಸಹಜವಾದ ಪ್ರಕ್ರಿಯೆಯಾಗಿದೆ. ಹಾಗಾಗಿ ಇದರಿಂದ, ಮುಜುಗರತೆಯನ್ನು ತೊಡೆದು ಹಾಕಬೇಕು. ಹಳ್ಳಿಗಾಡು ಪ್ರದೇಶಗಳಲ್ಲಿ ಪ್ರತಿಶತ 40% ರಷ್ಟು ಬಳಕೆ ಮಾಡುತ್ತಿದ್ದು, ಸಂಪೂರ್ಣವಾಗಿ ಮಹಿಳೆಯರು ಸ್ಯಾನಿಟರ್ ಪ್ಯಾಡ್‍ಗಳನ್ನು ಬಳಕೆ ಮಾಡುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಅವಶ್ಯಕವಾಗಿದೆ ಎಂದು ತಿಳಿಸಿದರು.
ಪ್ರತಿ ಗ್ರಾಮಗಳಲ್ಲಿ ಸರಕಾರದಿಂದ ಶುಚಿ ಪ್ಯಾಡ್‍ಗಳನ್ನು ಉಚಿತವಾಗಿ ನೀಡುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳವದರೊಂದಿಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಋತುಚಕ್ರ ಸಂದರ್ಭದಲ್ಲಿ ಬಟ್ಟೆ ಬಳಕೆ ಮಾಡುವುದರಿಂದ ಸೋಂಕು ತಗಲುವ ಪ್ರಮಾಣ ಹೆಚ್ಚಾಗಿದ್ದು, ಬಟ್ಟೆ ಬಳಕೆಯನ್ನು ತೊಡೆದು ಹಾಕಿ ಪ್ಯಾಡ್‍ಗಳ ಬಳಕೆ ಮಾಡಿ ಹಾಗೂ ಋತುಚಕ್ರದ ಕಪ್‍ಗಳನ್ನು ಬಳಕೆ ಮಾಡಬೇಕು. ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ರಕ್ತ ಹಿನತೆ ಕಂಡು ಬಂದಲ್ಲಿ 3 ರಿಂದ 4 ತಿಂಗಳು ಕ್ಯಾಲ್ಸಿಯಂ ಮಾತ್ರೆಯನ್ನು ತೆಗೆದುಕೊಳ್ಳುವುದು ಸೂಕ್ತ ಎಂದರು.
ಮುಟ್ಟಿನ ಸಮಯದಲ್ಲಿ ರಕ್ತ ಸ್ರಾವವಾಗುವುದರಿಂದ ಇಂತಹ ಸಮಯದಲ್ಲಿ ಪ್ರೋಟಿನ್ ಭರಿತ ಆಹಾರ ಸೇವಿಸುವುದು ಅಗತ್ಯವಾಗಿದೆ. ಹಸಿರು ತರಕಾರಿ ಮೂಳಕೆಕಾಳು, ಪ್ರೋಟಿನ್ ಭರಿತ ಆಹಾರ ಸೇವನೆ ಮಾಡಬೇಕು. ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜಿ.ಪಂ ಯೋಜನಾ ನಿರ್ದೇಶಕ ಎಂ.ಜಿ.ಮಂಗೋಜಿ, ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಐಇಸಿ ಸಮಾಲೋಚಕಿ ಕಾವೇರಿ ಝಂಢೇ ಜಿಲ್ಲಾ ಆಡಳಿತ ಭವನದಲ್ಲಿ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
Be the first to comment