ಕೋವಿಡ್ ವಾರಿಯಸ್೯ಗಳಿಗೆ ರಕ್ಷಣಾ ಕಿಟ್ ವಿತರಣೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಕೊರೊನಾ ವೈರಸ್‌ನಿಂದ ಶಂಕಿತರ ಚಿಕಿತ್ಸೆಯಲ್ಲಿತೊಡಗಿರುವ ಆರೋಗ್ಯ ಸಿಬ್ಬಂದಿಗೆ ಸಂಪೂರ್ಣ ಸಂರಕ್ಷಣೆ ನೀಡುವ ನಿಟ್ಟಿನಲ್ಲಿ ಹುನಗುಂದ ಮತಕ್ಷೇತ್ರದ ಶಾಸಕ ದೊಡ್ಡನಗೌಡ ಪಾಟೀಲ ಮುಖ ಕವಚ ಒಳಗೊಂಡಂತೆ ರಕ್ಷಣಾ ಕಿಟ್ ಗಳನ್ನು ವಿತರಿಸಿದರು.

 

ಬಾಗಲಕೋಟೆ:(ಹುನಗುಂದ) ಜನಪ್ರೀಯ ಶಾಸಕರಾದ ಶ್ರೀ ದೊಡ್ಡನಗೌಡ ಜಿ ಪಾಟೀಲರು ಇಂದು ಸುಮಾರು ೨ ಲಕ್ಷ ೪೦ ಸಾವಿರ ರೂಪಾಯಿಗಳ ಸ್ವಂತ ಖರ್ಚಿನಲ್ಲಿ ಹುನಗುಂದ ಇಲಕಲ್ಲ ತಾಲೂಕಿಗೆ ಸಂಬಂಧಿಸಿದ ಕೋವಿಡ್-೧೯ ವಾರಿಯಸ್೯ಗಳಾದ ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು, ನಗರಸಭೆ ಮತ್ತು ಪುರಸಭೆ ಕಾರ್ಯನಿರತ ಸಿಬ್ಬಂದಿಗಳಿಗೆ ಕೋವಿಡ್ ರೋಗದಿಂದ ರಕ್ಷಣೆ ಪಡೆದುಕೊಳ್ಳಲು, ರಕ್ಷಣಾ ಕಿಟ್ ವಿತರಿಸಿದರು.

ಮುಖ ಕವಚವು ಸಿಬ್ಬಂದಿಗೆ ರಕ್ಷಣಾ ಸಾಧನವಾಗಿದೆ. ಇದು ರೋಗಿಗಳು ಕೆಮ್ಮು ಅಥವಾ ಸೀನಿನ ಮೂಲಕ ಹೊರ ಹಾಕುವ ಉಸಿರಾಟದ ಹನಿಗಳ ವಿರುದ್ಧ ತಡೆಗೋಡೆಯಾಗಿ ಕಾರ್ಯ ನಿರ್ವಹಿಸುತ್ತದೆ.

Be the first to comment

Leave a Reply

Your email address will not be published.


*