ಬಾಗಲಕೋಟೆ:ಕಾಮಧೇನು ಸಂಸ್ಥೆ ಪ್ರತಿನಿತ್ಯ ಕರೋಣ ಸೊಂಕಿತರಿಗೆ ಅವರ ಸಂಬಂದಿಕರಿಗೆ,ಮನೆಯಲ್ಲಿ ಕ್ವಾರಂಟೈನ್ ಇರುವವರಿಗೆ, ಕಡುಬಡವರಿಗೆ ಪ್ರತಿನಿತ್ಯ ಊಟದ ವ್ಯವಸ್ಥೆ ಮಾಡುತ್ತಿದ್ದು,ಇಂದುಕಾಮಧೇನು ಸಂಸ್ಥೆ ಸಹಯೋಗದಲ್ಲಿ ಆರ್ಯವೈಶ್ಯ ಸಮಾಜ ದಿಂದ ಶ್ರೀವಾಸವಿ ಜಯಂತಿ ಆಚರಿಸಲಾಯಿತು.
ಜಿಲ್ಲಾ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುವ ಸೊಂಕಿತರಿಗೆ ಹಾಗೂ ಅವರ ಸಂಬಂಧಿಕರಿಗೆ ಊಟದ ಪೊಟ್ಟಣ ಹಾಲುಹುಗ್ಗಿ,ಹೆಸರಕಾಳು ಪಲ್ಯ, ಚಪಾತಿ, ಪಲಾವ್, ರೈತಾ,ಶುದ್ಧ ಕುಡಿಯುವ ನೀರು,ವಿತರಣೆ ಮಾಡುವ ಮೂಲಕ ಸರಳವಾಗಿ ಅರ್ಥಪೂರ್ಣ ಆಚರಣೆ ಮಾಡಲಾಯಿತು.ಇಂದು ಬೆಳಿಗ್ಗೆ ಉಪಾಹಾರ, ಮದ್ಯಾಹ್ನ ಊಟ,ರಾತ್ರಿ ಊಟದ ವ್ಯವಸ್ಥೆ ಆರ್ಯವೈಶ್ಯ ಸಮಾಜ ಕಾಮಧೇನು ಸಂಸ್ಥೆ ಸಹಯೋಗದಲ್ಲಿ ವ್ಯವಸ್ಥೆ ಮಾಡಲಾಯಿತು.
ಈ ಸಂದರ್ಭದಲ್ಲಿ ಆರ್ಯವೈಶ್ಯ ಸಮಾಜದ ಪ್ರಮುಖಕರು ಹಾಗೂ ಕಾಮಧೇನು ಸಂಸ್ಥೆಯ ಸದಸ್ಯರು ವಿಜಯ ಸುಲಾಖೆ, ರವಿ ಕುಮಟಗಿ, ಅಶೋಕ ಮುತ್ತಿನಮಠ, ಬಸವರಾಜ ಕಟಗೇರಿ, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Be the first to comment