ಗೋವಾದಿಂದ ಆಗಮಿಸಿದ 30 ಮಂದಿ ಹೋಮ್ ಕ್ವಾರಂಟೈನ್

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಬಾಗಲಕೋಟೆ:

ಹೊಟ್ಟೆಪಾಡಿಗಾಗಿ ಬದುಕನ್ನು ಕಟ್ಟಿಕೊಳ್ಳಲು ಗೋವಾ ರಾಜ್ಯಕ್ಕೆ ಕೂಲಿಗಾಗಿ ಹೋದ ಇಳಕಲ್ಲ ತಾಲೂಕಿನ ವಡಗೇರಿ ಗ್ರಾಮದ 30 ಜನರು ಇಂದು ಕೊರೊನಾ ಮಹಾಮಾರಿಯ ಎರಡನೆ ಅಲೆಯಿಂದಾಗಿ ಎಲ್ಲೆಡೆ ಲಾಕ್ ಡೌನ್ ಪ್ರಭಾವದಿಂದ ಮರಳಿ ಸ್ವ ಗ್ರಾಮಕ್ಕೆ ಆಗಮಿಸಿದ್ದಾರೆ.

ಸುದ್ದಿ ತಿಳಿದ ತಕ್ಷಣ ಎಚ್ಚೆತ್ತ ಗ್ರಾಮಾಡಳಿತ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿಯವರು ಇವರೆಲ್ಲರನ್ನು ಗುಡೂರಿನ ಸರ್ಕಾರಿ ಆಸ್ಪತ್ರೆಗೆ ಕರೆತಂದು ಕೊವಿಡ್ ಪರೀಕ್ಷೆಗೆ ಒಳಪಡಿಸಿ 4 ರಿಂದ 5 ದಿನಗಳವರೆಗೆ ಹೋಮ್ ಕ್ವಾರಂಟೈನ್ ವ್ಯವಸ್ಥೆ ಮಾಡಲಾಯಿತು.ಈ ವೇಳೆ ಯಾವುದೇ ರೋಗ ಲಕ್ಷಣಗಳು ಕಂಡು ಬಾರದೆ ಇದ್ದರೆ ಸಾಮಾನ್ಯ ಜನರೊಂದಿಗೆ ಬೆರೆಯಲು ತಿಳಸಲಾಯಿತು.

Be the first to comment

Leave a Reply

Your email address will not be published.


*