ಇಂದು ರಾತ್ರಿ 9 ರಿಂದ ಸೋಮವಾರ ಬೆಳಿಗ್ಗೆ 6 ರ ವರೆಗೆ ವೀಕೆಂಡ್ ಕಫ್ರ್ಯೂ ಜಾರಿ.

ವರದಿ: ಶರಣಪ್ಪ ಬಾಗಲಕೋಟೆ

ಬಾಗಲಕೋಟೆ: ರಾಜ್ಯವನ್ನು ಭೀಕರವಾಗಿ ಕಾಡುತ್ತಿರುವ ಕೋವಿಡ್‌ 2ನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಆದೇಶಿಸಿರುವ ಮೊದಲ ವಾರಾಂತ್ಯದ ಕರ್ಫ್ಯೂ ಶುಕ್ರವಾರ ರಾತ್ರಿ 9 ರಿಂದ ಆರಂಭಗೊಂಡು ಸೋಮವಾರ ಬೆಳಗ್ಗೆ 6 ಗಂಟೆವರೆಗೆ 57 ತಾಸು ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಅತಿ ಅಗತ್ಯ ಮತ್ತು ತುರ್ತು ಚಟುವಟಿಕೆಗಳನ್ನು ಹೊರತುಪಡಿಸಿ ಅನಗತ್ಯ ಸಾರ್ವಜನಿಕ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ.

ವಾರಾಂತ್ಯದ ಕರ್ಫ್ಯೂ ವೇಳೆ ಆಹಾರ, ದಿನಸಿ, ಹಣ್ಣು, ತರಕಾರಿ, ಹಾಲು, ಮೀನು ಮತ್ತು ಮಾಂಸದ ಅಂಗಡಿಗಳನ್ನು ಬೆಳಗ್ಗೆ 6 ರಿಂದ 10 ಗಂಟೆವರೆಗೆ ಮಾತ್ರ ತೆರೆಯಲು ಅವಕಾಶ ನೀಡಲಾಗಿದೆ. ಈ ನಾಲ್ಕು ಗಂಟೆಗಳ ಒಳಗೆ ಸಾರ್ವಜನಿಕರು ತಮ್ಮ ದಿನದ ಅಗತ್ಯ ವಸ್ತುಗಳನ್ನು ಖರೀದಿಸಬಹುದು. ಬೆಳಗ್ಗೆ 10 ಗಂಟೆ ಬಳಿಕ ಈ ಎಲ್ಲಾ ಅಂಗಡಿಗಳ ಬಾಗಿಲು ಬಂದ್‌ ಮಾಡಬೇಕು.

ರೋಗಿಗಳು ಹಾಗೂ ಅವರ ಸಹಾಯಕರು, ವ್ಯಾಕ್ಸಿನೇಷನ್‌ ಸೇರಿದಂತೆ ತುರ್ತು ವೈದ್ಯಕೀಯ ಸೇವೆ ಅಗತ್ಯವಿರುವವರು ಕನಿಷ್ಠ ಪುರಾವೆಗಳೊಂದಿಗೆ ಸಂಚರಿಸಲು ಯಾವುದೇ ನಿರ್ಬಂಧವಿರುವುದಿಲ್ಲ. ಇನ್ನು, ಮದುವೆ ಕಾರ್ಯಗಳಿಗೆ ಗರಿಷ್ಠ 50ಕ್ಕಿಂತ ಹೆಚ್ಚು ಜನ ಭಾಗವಹಿಸುವಂತಿಲ್ಲ. ಅಂತ್ಯ ಸಂಸ್ಕಾರದಲ್ಲಿ ಗರಿಷ್ಠ 20ಕ್ಕಿಂತ ಹೆಚ್ಚು ಜನ ಭಾಗಿಯಾಗುವಂತಿಲ್ಲ. ಅನಗತ್ಯವಾಗಿ ಸಾರ್ವಜನಿಕರು ಮನೆಯಿಂದ ಹೊರಗೆ ಸಂಚರಿಸುವಂತಿಲ್ಲ.

ಮೇ-4 ರವರೆಗೆ ತೆರೆದಿಡಬಹುದಾದ ಅಂಗಡಿ ಮುಗ್ಗಟ್ಟುಗಳ ವಿವರಗಳು.

* ಹೂವಿನ ಅಂಗಡಿಗಳು
* ಹಣ್ಣಿನ ಅಂಗಡಿಗಳು
* ದಿನಸಿ ಅಂಗಡಿಗಳು
* ಬೇಕರಿಗಳು
* ವೈನ್ ಶಾಪ್ ಗಳು
* ಬಾರ್ ಗಳು(ವೈನ್ ಶಾಪ್ ಮತ್ತು ಬಾರ್ ಗಳಲ್ಲಿ ಕೇವಲ ಪಾರ್ಸಲ್ ಕೊಡಬಹುದು ಅಲ್ಲೇ ಕುಳಿತು ಕುಡಿಯುವ ಹಾಗಿಲ್ಲ ಅಲ್ಲೇ ನಿಂತುಕೊಂಡು ಕುಡಿಯುವ ಹಾಗಿಲ್ಲ )
* ಲಾಡ್ಜ್ ಗಳು
* ಹೋಟೆಲ್ ಗಳು(ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಕುಳಿತು ತಿನ್ನುವ ಹಾಗಿಲ್ಲ. ಕೇವಲ ಪಾರ್ಸಲ್ ಗಳನ್ನು ಕೊಡಬಹುದು. ಆ ಪಾರ್ಸಲ್ ಗಳನ್ನು ಮನೆಗೆ ತೆಗೆದುಕೊಂಡು ಹೋಗಲಿಕ್ಕೆ ಅವಕಾಶವಿದೆ. ಹಾಗೆಯೇ ಅವುಗಳ ಡಿಲವರಿ ಬಾಯ್ ಹೋಂ ಡಿಲೆವರಿ ಮಾಡಬಹುದಾಗಿದೆ )
* ಬ್ಯಾಂಕ್ ಗಳು
* ಇನ್ಶೂರೆನ್ಸ್ ಕಚೇರಿಗಳು
* ಎಟಿಎಂಗಳು
* ಪ್ರಿಂಟ್ ಹಾಗೂ ಎಲೆಕ್ಟ್ರಾನಿಕ್ ಮೀಡಿಯಾಗಳು
* ಹೋಮ್ ಡಿಲಿವರಿ ಗಳು( ಉದಾಹರಣೆಗೆ ಡೋಂಜೊ, ಸ್ವಿಗ್ಗಿ, ಜೊಮೆಟೊ ಇತ್ಯಾದಿ )
* ಇ ಕಾಮರ್ಸ್
* ವೇರ್ ಹೌಸ್
* ಕಟ್ಟಡ ಕಾಮಗಾರಿಗಳು ನಡೆಯತಕ್ಕದ್ದು.
* ಕಟ್ಟಡ ಕಾಮಗಾರಿಗಳು ಹಾಗೂ ಇತರೆ ಕಾಮಗಾರಿಗಳಿಗೆ ಸಂಬಂಧಿಸಿದ (ಸರಬರಾಜು ಮಾಡುವಂತಹ) ಸಿಮೆಂಟ್ ಅಂಗಡಿಗಳು, ಹಾರ್ಡ್ ವೇರ್ ಶಾಪ್ ಗಳು, ಎಲೆಕ್ಟ್ರಿಕಲ್ ಶಾಪ್ ಗಳು)
* ಸಲೂನ್ ಗಳು
* ಬ್ಯೂಟಿ ಪಾರ್ಲರ್ ಗಳು
* ಶೇರ್ ಮಾರ್ಕೆಟ್ ಗೆ ಸಂಬಂಧಿಸಿದ ಅಂಗಡಿ ಮುಗ್ಗಟ್ಟುಗಳು .
* ಹಾಲಿನ ಅಂಗಡಿಗಳು ಹಾಗೂ ಬೂತ್ ಗಳು .
* ದನಕರುಗಳಿಗೆ ನೀಡುವ ಆಹಾರದ ಅಂಗಡಿಗಳು.( ಹಿಂಡಿ, ಬೂಸಾ ಇತರೆ ಅಂಗಡಿಗಳು)
* ಫುಡ್ ಪ್ರೊಸೆಸಿಂಗ್ ಯುನಿಟ್ ಗಳು
*ಪ್ರೈವೈಟ್ (ಖಾಸಗಿ) ಸೆಕ್ಯುರಿಟಿ ಸರ್ವಿಸ್ ಗಳು .

ಮೇ-4 ರವರೆಗೆ ಬಂದ್ ಮಾಡಿಸಬೇಕಾದ ಅಂಗಡಿಗಳ ವಿವರಗಳು .

* ಬುಕ್ ಸ್ಟಾಲ್
* ಬಟ್ಟೆ ಅಂಗಡಿಗಳು
* ಶೂ ಅಂಗಡಿಗಳು
* ಚಿನ್ನಾಭರಣ ಅಂಗಡಿಗಳು
* ಎಲೆಕ್ಟ್ರಾನಿಕ್ ಅಂಗಡಿಗಳು( ಅಂದರೆ ಟಿವಿ, ಮೊಬೈಲ್, ಫ್ರಿಜ್, ಇತರೆ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳು)
* ಮಾಲ್ ಗಳು (ಅದರಲ್ಲಿ ರೇಷನ್ ಅಥವಾ ಗ್ರೋಸರಿಶಾಪ್ ಇದ್ದರೆ ಅದನ್ನು ಹೊರತುಪಡಿಸಿ)
* ಸ್ಪೋರ್ಟ್ ಅಂಗಡಿಗಳು .
* ಸಿನಿಮಾ ಹಾಲ್ ಗಳು

Be the first to comment

Leave a Reply

Your email address will not be published.


*