ಕರ್ನಾಟಕ ವಿಧಾನಸಭೆ: ರಾಜ್ಯ. ರಾಜಕೀಯ ಐತಿಹಾಸಿಕ ದಾಖಲೆಗಳು


           ರಾಜಕೀಯ ಸುದ್ದಿ    


ನಿರೀಕ್ಷೆ ಪತ್ರಗಳು :: ಯೋಗಿಶ ಸಿರೂರು ಉಡುಪಿ

(:: 27) ::ರಾಜ್ಯ ರಾಜಕಾರಣ ಹಲವು ವಿಶೇಷ ಕಾರಣಗಳಿಂದಾಗಿ ಇಂದು ಇಡೀ ದೇಶದ ಗಮನ ಸೆಳೆಯುತ್ತಿದೆ. ಆಗೊಮ್ಮೆ ಈಗೊಮ್ಮೆ ಸ್ಥಿರ ಸರ್ಕಾರ ಕಾಣುವ ರಾಜ್ಯದಲ್ಲಿ ಬಹಳಷ್ಟು ಬಾರಿ ಸಿಎಂ ಸ್ಥಾನಗಳು ಬದಲಾಗಿವೆ. 5 ವರ್ಷ ಸ್ಥಿರ ಆಡಳಿತ ನೀಡಿದ ಸಿಎಂಗಳು ರಾಜ್ಯದಲ್ಲಿ ತೀರಾ ವಿರಳ. ಆಂತರಿಕ ಕಲಹದಿಂದ ಹಿಡಿದು ಅತಂತ್ರ ವಿಧಾನಸಭೆಯವರೆಗೂ ಇದಕ್ಕೆ ಹಲವು ಕಾರಣಗಳಿವೆ. ಮುಂದೇನು ಎಂಬ ಪ್ರಶ್ನಾರ್ಥಕ ಚಿಹ್ನೆ ರಾಜ್ಯ ರಾಜಕಾರಣದಲ್ಲಿ ಚಿರಸ್ಥಾಯಿಯಾಗಿಯೇ ಇರುತ್ತದೆ.

2018ರಲ್ಲಿ ಅಸ್ತಿತ್ವಕ್ಕೆ ಬಂದ 15ನೇ ವಿಧಾನಸಭೆಯೂ ಸಹ ಹೀಗೆ ಹಲವಾರು ಕುತೂಹಲಕ್ಕೆ ಕಾರಣವಾಗಿದೆ. ಪ್ರಸ್ತುತ ವಿಧಾನಸಭೆ ಶ್ರೀ ಯಡಿಯೂರಪ್ಪ ಮತ್ತು ಶ್ರೀ ಕುಮಾರಸ್ವಾಮಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದನ್ನು ಕಂಡಿದೆ. ಅಲ್ಲದೆ ಇದೀಗ ಮತ್ತೊಮ್ಮೆ ಯಡಿಯೂರಪ್ಪನವರನ್ನೇ ಆ ಸ್ಥಾನದಲ್ಲಿ ಕಾಣಲೂ ಸಹ ಸಿದ್ದಗೊಂಡಿದೆ. ಹೀಗೆ ರಾಜ್ಯ ರಾಜಕೀಯ ಇತಿಹಾಸದ ಕೆಲ ಕುತೂಹಲಕಾರಿ ಅಂಶಗಳನ್ನೊಳಗೊಂಡ ಸಂಪೂರ್ಣ ಮಾಹಿತಿ ಇಲ್ಲಿದೆ!


1952ರಿಂದೀಚೆ 30 ಮುಖ್ಯಮಂತ್ರಿಗಳನ್ನು ಕಂಡಿರುವ ರಾಜ್ಯ ವಿಧಾನಸಭೆಯ ಕೆಲ ವಿಶೇಷ ದಾಖಲೆಗಳು, ಸಂಗತಿಗಳು ಇಲ್ಲಿವೆ:


1947ರಿಂದ 1952ರವರೆಗೆ ಚುನಾವಣೆಯಿಲ್ಲದೆ ನೇರವಾಗಿ ಕೇಂದ್ರದಿಂದ ನೇಮಕಗೊಂಡ ಸರ್ಕಾರ ಅಸ್ತಿತ್ವದಲ್ಲಿತ್ತು. ಕೆ. ಚಂಗಲರಾಯ ರೆಡ್ಡಿ ಅವರು ಅವರು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದರು. ಈ ಅವಧಿಯಲ್ಲಿ ಕೇರಳ, ಅಂಧ್ರಪ್ರದೇಶ ಮತ್ತು ತಮಿಳುನಾಡಿಗೂ ಸಹ ಕೆ. ಚಂಗಲರಾಯರೆಡ್ಡಿಯವರೇ ಸಿಎಂ ಆಗಿ ಕಾರ್ಯನಿರ್ವಹಿಸಿದ್ದರು.


1952ರಲ್ಲಿ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಮೊದಲ ಬಾರಿಗೆ ಲೋಕಸಭೆ ಹಾಗೂ ವಿಧಾನಸಭೆಗೆ ಒಟ್ಟಾಗಿ ಚುನಾವಣೆ ನಡೆಸಲಾಯಿತು. ಆಗ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಕೆಂಗಲ್ ಹನುಮಂತಯ್ಯ ಅವರು ಕರ್ನಾಟಕದ ಮೊದಲ ಅಧಿಕೃತ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

ಮೊದಲ ವಿಧಾನಸಭೆ ಚುನಾವಣೆಯಲ್ಲೇ ಎರಡು ಮುಖ್ಯಮಂತ್ರಿಗಳನ್ನು ಈ ರಾಜ್ಯ ಕಂಡಿತ್ತು. ಕಡಿದಾಳು ಮಂಜಪ್ಪ ಕೇವಲ 73 ದಿನ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. ಅಲ್ಲಿಂದ ಈವರೆಗೆ 15 ವಿಧಾನಸಭೆಗಳು ಅಸ್ತಿತ್ವಕ್ಕೆ ಬಂದಿವೆ. 22 ವ್ಯಕ್ತಿಗಳು ವಿವಿಧ ಅವಧಿಗೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದಾರೆ.


ವಿಧಾನಸಭಾ ವಾರು ಎಷ್ಟೆಷ್ಟು ಮುಖ್ಯಮಂತ್ರಿಗಳು?

ಮೊದಲ ವಿಧಾನಸಭೆ (1952-1957): ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ

ಎರಡನೇ ವಿಧಾನಸಭೆ (1957-1962): ಎಸ್. ನಿಜಲಿಂಗಪ್ಪ, ಬಿ.ಡಿ. ಜತ್ತಿ

ಮೂರನೇ ವಿಧಾನಸಭೆ (1962-1967): ಎಸ್.ಆರ್. ಕಂಠಿ, ಎಸ್. ನಿಜಲಿಂಗಪ್ಪ

ನಾಲ್ಕನೇ ವಿಧಾನಸಭೆ (1968-1971): ವೀರೇಂದ್ರ ಪಾಟೀಲ್

1970-71- ರಾಷ್ಟ್ರಪತಿ ಆಳ್ವಿಕೆ

ಐದನೇ ವಿಧಾನಸಭೆ (1972-1977): ಡಿ. ದೇವರಾಜ ಅರಸು

ಆರನೇ ವಿಧಾನಸಭೆ (1978-1983): ಡಿ. ದೇವರಾಜ ಅರಸ್, ಆರ್. ಗುಂಡೂರಾವ್

ಏಳನೇ ವಿಧಾನಸಭೆ (1983-1984): ರಾಮಕೃಷ್ಣ ಹೆಗಡೆ

ಎಂಟನೇ ವಿಧಾನಸಭೆ (1985-1989): ರಾಮಕೃಷ್ಣ ಹೆಗಡೆ (2 ಬಾರಿ) ಎಸ್.ಆರ್. ಬೊಮ್ಮಾಯಿ

1989 ಏಪ್ರಿಲ್-ನವೆಂಬರ್ : ರಾಷ್ಟ್ರಪತಿ ಆಳ್ವಿಕೆ

ಒಂಬತ್ತನೇ ವಿಧಾನಸಭೆ (1989-1994): ವೀರೇಂದ್ರ ಪಾಟೀಲ್, ಎಸ್. ಬಂಗಾರಪ್ಪ, ಎಂ. ವೀರಪ್ಪ ಮೊಯಿಲಿ

ಹತ್ತನೇ ವಿಧಾನಸಭೆ (1994-1999): ಹೆಚ್.ಡಿ. ದೇವೇಗೌಡ, ಜೆ.ಹೆಚ್. ಪಟೇಲ್

ಹನ್ನೊಂದನೆ ವಿಧಾನಸಭೆ (1999-2004): ಎಸ್.ಎಂ. ಕೃಷ್ಣ

ಹನ್ನೆರಡನೇ ವಿಧಾನಸಭೆ (2004-2008): ಧರಮ್ ಸಿಂಗ್, ಹೆಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ

ಹದಿಮೂರನೇ ವಿಧಾನಸಭೆ (2008-2013) : ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ, ಜಗದೀಶ್ ಶೆಟ್ಟರ್

ಹದಿನಾಲ್ಕನೇ ವಿಧಾನಸಭೆ (2013-2018): ಸಿದ್ದರಾಮಯ್ಯ

ಹದಿನೈದನೇ ವಿಧಾನಸಭೆ (2018-2023) ಬಿ.ಎಸ್. ಯಡಿಯೂರಪ್ಪ, ಹೆಚ್.ಡಿ. ಕುಮಾರಸ್ವಾಮಿ.

ಒಂದಕ್ಕಿಂತ ಹೆಚ್ಚು ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದವರು

1. ಎಸ್. ನಿಜಲಿಂಗಪ್ಪ (4 ಬಾರಿ)

2. ವೀರೇಂದ್ರ ಪಾಟೀಲ್ (2 ಬಾರಿ)

3. ಡಿ. ದೇವರಾಜ ಅರಸು (2 ಬಾರಿ)

4. ರಾಮಕೃಷ್ಣ ಹೆಗಡೆ (3 ಬಾರಿ)

5. ಹೆಚ್.ಡಿ. ಕುಮಾರಸ್ವಾಮಿ (2 ಬಾರಿ)

6. ಬಿ.ಎಸ್. ಯಡಿಯೂರಪ್ಪ (4 ಬಾರಿ)

ಮುಖ್ಯಮಂತ್ರಿ ಹುದ್ದೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದವರು

1. ಡಿ. ದೇವರಾಜ ಅರಸು (7 ವರ್ಷ 234 ದಿನ)

2. ಎಸ್. ನಿಜಲಿಂಗಪ್ಪ (7 ವರ್ಷ 174 ದಿನ)

ಮುಖ್ಯಮಂತ್ರಿ ಹುದ್ದೆಯಲ್ಲಿ ಅತೀ ಕಡಿಮೆ ದಿನ ಸೇವೆ ಸಲ್ಲಿಸಿದವರು

1. ಬಿ.ಎಸ್. ಯಡಿಯೂರಪ್ಪ (6 ದಿನ- 2018 ಮೇ 17 ರಿಂದ 23ರ ವರೆಗೆ)

2. ಬಿ.ಎಸ್. ಯಡಿಯೂರಪ್ಪ (7 ದಿನ- 2007 ನವೆಂಬರ್ 12 ರಿಂದ 19ರ ವರೆಗೆ)

3. ಕಡಿದಾಳು ಮಂಜಪ್ಪ (73 ದಿನ – 1956 ಆಗಸ್ಟ್ 19 ರಿಂದ ಅಕ್ಟೋಬರ್ 31ರ ವರೆಗೆ)

4. ಎಸ್.ಆರ್. ಕಂಠಿ (98 ದಿನ-1962 ಮಾರ್ಚ್14 ರಿಂದ ಜೂನ್ 20ರ ವರೆಗೆ)

ರಾಜ್ಯದಲ್ಲಿ ಪೂರ್ಣ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಪೂರೈಸಿದವರು

1. ಕೆ.ಸಿ. ರೆಡ್ಡಿ (ಚುನಾವಣಾ ಪೂರ್ವ ಕಾಲದಲ್ಲಿ ಮುಖ್ಯಮಂತ್ರಿಯಾಗಿ ನೇಮಕವಾದವರು)

2. ದೇವರಾಜ ಅರಸು (ಐದನೇ ವಿಧಾನಸಭೆ, 1972-1977)

3. ರಾಮಕೃಷ್ಣ ಹೆಗಡೆ (ಏಳನೇ ವಿಧಾನಸಭೆ, 1983-84)

4. ಎಸ್.ಎಂ. ಕೃಷ್ಣ (ಹನ್ನೊಂದನೇ ವಿಧಾನಸಭೆ, 1999-2004)

5. ಸಿದ್ದರಾಮಯ್ಯ (ಹದಿನಾಲ್ಕನೇ ವಿಧಾನಸಭೆ 2013-2018)

ರಾಜ್ಯದಲ್ಲಿ 5 ವರ್ಷಕ್ಕಿಂತ ಹೆಚ್ಚು ಕಾಲ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದವರು

1. ದೇವರಾಜ ಅರಸು

2. ಎಸ್. ನಿಜಲಿಂಗಪ್ಪ

3. ರಾಮಕೃಷ್ಣ ಹೆಗಡೆ

4. ಸಿದ್ದರಾಮಯ್ಯ

 

Be the first to comment

Leave a Reply

Your email address will not be published.


*