ಕಳಪೆ ಕಾಮಗಾರಿಯಿಂದ ನಿರ್ಮಾಣವಾಗುತ್ತಿರುವ ಹೊಸ ಬಸ್ ನಿಲ್ದಾಣ:AIDIO ಜಿಲ್ಲಾ ಅಧ್ಯಕ್ಷರು ಶರಣಪ್ಪ ಉದ್ಬಾಳ್ ಗಂಭೀರ ಆರೋಪ


       ರಾಯಚೂರು ವರದಿ: ಅಮರೇಶ


ಲಿಂಗಸುಗುರು:: (ಜೂ.26) ಲಿಂಗಸ್ಗೂರು ತಾಲ್ಲೂಕ ಬಸ್ಸ ನಿಲ್ದಾಣವು ಸುಮಾರು 2 ಕೋಟಿ 50 ಲಕ್ಷ ರೂ.ಗಳಲ್ಲಿ ನಿರ್ಮಾಣವಾಗುತ್ತಿರುವ ಹೊಸ ಬಸ್ ನಿಲ್ದಾಣ ಕಳಪೆ ಗುಣಮಟ್ಟದ ಕಾಮಗಾರಿ ಮಾಡುತ್ತಿದ್ದಾರೆ ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಯೂಥ್ ಆರ್ಗನೈಸೇಶನ್ ಸದಸ್ಯರು ಗಂಬೀರ ಆರೋಪ ಮಾಡುತ್ತಿದ್ದಾರೆ.

ರಾಯಚೂರು ಜಿಲ್ಲೆ ಲಿಂಗಸೂಗೂರು ಬಸ್ ನಿಲ್ದಾಣಕ್ಕೆ ಹಳೆಯ ಹಾಗೂ ತುಕ್ಕು ಹಿಡಿದ ಶೆಲ್ಟರ್ ಮತ್ತು ಭೀಮ್ ಗಳನ್ನು ಬಳಸುತ್ತಿದ್ದಾರೆ.

ಲಿಂಗಸೂಗೂರು ಬಸ್ ನಿಲ್ದಾಣಕ್ಕೆ ಬೆಂಗಳೂರು,ಕಲಬುರಗಿ,ಬೆಳಗಾವಿ,ಹುಬ್ಬಳ್ಳಿ,ರಾಯಚೂರು,ಹೈದ್ರಾಬಾದ್ ಮುಂತಾದ ರಾಜ್ಯ ಮತ್ತು ಅಂತರಾಜ್ಯ ಪ್ರಮುಖ ನಗರಗಳಿಗೆ ದಿನನಿತ್ಯ ಸಾಕಷ್ಟು ಬಸ್ಗಳು ಓಡಾಡುತ್ತವೆ.ಆದರೆ ತಾಲೂಕಿನ ಜನರ ಬಹುದಿನಗಳ


ಬೇಡಿಕೆ ಬಸ್ ನಿಲ್ದಾಣದ ಕಳಪೆ ಕಾಮಗಾರಿಯಿಂದ ಸಾರ್ವಜನಿಕರ ನಿರೀಕ್ಷೆ ಹುಸಿಯಾಗಿದೆ.ಈ ಸಂಬಂಧ ಇಲಾಖೆಯ ಎ ಇ ಇ ಮತ್ತು ಗುತ್ತಿಗೆದಾರರ ಗಮನಕ್ಕೆ ತಂದರೆ,ಇದು ಪ್ಲಾನ್ನಲ್ಲಿ ಇಲ್ಲ ಅಂತಾ ಸಬೂಬು ಹೇಳುತ್ತಾರೆ.
ತಕ್ಷಣ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರು ಮತ್ತು ಜನಪ್ರತಿನಿಧಿಗಳು ಗಮನ ಹರಿಸಿ,ಉತ್ತಮ ಗುಣಮಟ್ಟದ ಬಸ್ ನಿಲ್ದಾಣ ಆಗುವ ರೀತಿಯಲ್ಲಿ ನೋಡಿಕೊಳ್ಳಬೇಕಿದೆ.

Be the first to comment

Leave a Reply

Your email address will not be published.


*