ಬಾಗಲಕೋಟ:ಉತ್ತರಾಖಂಡದ ಹರಿದ್ವಾರದಲ್ಲಿ ಮಾರ್ಚ್ 11 ಶಿವರಾತ್ರಿಯಿಂದ ಎಪ್ರಿಲ್27 ಹನುಮಾನ ಜಯಂತಿಯವರೆಗೆ ಕುಂಭಮೇಳ ನಡೆಯುತ್ತಿದ್ದು. 12 ವರ್ಷಗಳಿಗೊಮ್ಮೆ ಈ ಕುಂಭಮೇಳ ನಡೆಯುತ್ತಿದ್ದು. ಪ್ರತಿ ಮೂರು ವರ್ಷಕ್ಕೊಮ್ಮೆ ಪ್ರಯಾಗರಾಜ್, ಹರಿದ್ವಾರ, ಉಜ್ಜೈನಿ ಹಾಗೂ ನಾಸಿಕನಲ್ಲಿ ನಡೆಯುತ್ತವೆ. ಕುಂಭಮೇಳವೂ ಜಗತ್ತಿನ ಅತಿದೊಡ್ಡ ಧಾರ್ಮಿಕ ಉತ್ಸವ.
ಕುಂಭಮೇಳದ ವಿಶೇಷ ಏನಂದ್ರೆ ಶಾಹಿಸ್ನಾನ ಅಂದರೆ ಪವಿತ್ರ ಸ್ನಾನ. ಸಾಧು ಸಂತರು, ಅಘೋರಿಗಳು, ನಾಗಾ ಸಾಧುಗಳು ಹಾಗೂ ಧಾರ್ಮಿಕ ಭಕ್ತರು ಈ ಪವಿತ್ರ ಸ್ನಾನದಲ್ಲಿ ಪಾಲ್ಗೊಳ್ಳುತ್ತಾರೆ. ನಾಗಾಸಾಧುಗಳ ದರ್ಶನವೇ ಒಂದು ರೀತಿಯ ಪುಣ್ಯ ಲಭಿಸುತ್ತದೆ ಅಂತ ನಂಬಿಕೆ ಇದೆ. ಈಗಲೂ ಹರಿದ್ವಾರದಲ್ಲಿ ಕುಂಭಮೇಳದಲ್ಲಿ ನಾಗಾಸಾಧುಗಳ ದರ್ಶನ ಸಿಗತಾಯಿದೆ. ಅದನ್ನು ಬಾಗಲಕೋಟೆಯ ಪರಂಪರೆಯ ಹೋಳಿ ಆಚರಣೆಯ ಸೋಗಿನ ಬಂಡಿಗಳ ಮೂಲಕ ನರೇಂದ್ರ ಯುವಕ ಮಂಡಳ, ಕಿಲ್ಲಾ ಅಂಬಿಗೇರ ಗಲ್ಲಿ ಬಾಗಲಕೋಟೆ ಮಿತ್ರರು ಮಾಡಿ ತೊರಿಸಿದ್ದಾರೆ.
ಹರಿದ್ವಾರದ ಕುಂಭಮೇಳದ ವೈಭವವನ್ನು ಬಾಗಲಕೋಟೆಯ ಜನತೆ ಕಣ್ತುಂಬಿಕೊಳ್ಳಲು ಹಾಗೂ ನಾಗಾ ಸಾಧುಗಳು ದರ್ಶನದಿಂದ ಭಾರತ ಕೊರೋನಾ ಮುಕ್ತವಾಗಲಿ ಎಂಬ ಸದುದ್ದೇಶದಿಂದ ಈ ವೇಷವನ್ನು ಬಾಲಕರಿಗೆ ಹಾಕಿಸಲಾಗಿದೆ ಎಂದು ನರೇಂದ್ರ ಯುವಕ ಮಂಡಳದ ಅದ್ಯಕ್ಷರು ನಾಗಪ್ಪ ಮಾಗಿ ಹಾಗೂ ಸದಸ್ಯರು ತಿಳಿಸಿದ್ದಾರೆ.
Be the first to comment