ಬಿಜೆಪಿ ಪಾಲಿನ ಗೊಲ್ಡನ್ ಕೈ ಆದರಾ ಸಂಸದ ಡಾ,ಉಮೇಶ ಜಾದವ

 

ವಿಶೇಷ ವರದಿ–ಸರ್ದಾರ್ ರಾಯಪ್ಪ

ಕಲಬುರ್ಗಿ: ರಾಜ್ಯದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಇಂದು ವಿಶ್ವಾಸಮತಯಾಚನೆಯಲ್ಲಿ ಬಹುಮತ ಕಳೆದುಕೊಂಡಿದೆ. ಆ ಮೂಲಕ 14 ತಿಂಗಳ ಕಾಲ ರಾಜ್ಯದಲ್ಲಿದ್ದ ಕುಮಾರ ಪರ್ವ ಅಂತ್ಯಗೊಂಡಿದೆ. ವಿಶ್ವಾಸಮತದಲ್ಲಿ ಸೋಲಾದ ಹಿನ್ನೆಲೆಯಲ್ಲಿ ಸಿಎಂ ಸ್ಥಾನಕ್ಕೆ ಹೆಚ್.ಡಿ.ಕುಮಾರಸ್ವಾಮಿ ನೀಡಿದ್ದ ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿಯೂ ಆಗಿದೆ. ಇನ್ನು ಈ ಬಗ್ಗೆ ದೇಶದೆಲ್ಲೆಡೆ ಚರ್ಚೆಯಾಗುತ್ತಿರುವಂತೆ ಕಲಬುರ್ಗಿ ಜಿಲ್ಲಾ ರಾಜಕೀಯ ವಲಯದಲ್ಲಿಯೂ ಚರ್ಚೆಯಾಗ್ತಿದೆ. ಆದರೆ ಕಲಬುರ್ಗಿಯಲ್ಲಿ ಚರ್ಚೆಯಾಗ್ತಿರೋದು ಸ್ವಲ್ಪ ಡಿಫರೆಂಟ್ ಆಗಿದೆ. ಸದ್ಯದ ಮಟ್ಟಿಗೆ ಭಾರತೀಯ ಜನತಾ ಪಕ್ಷದ ಪಾಲಿಗೆ ಸಂಸದ ಡಾ.ಉಮೇಶ್ ಜಾಧವ್ ಲಕ್ಕಿ ಚಾಂಪ್ ಆದರೂ ಎಂಬ ಮಾತುಗಳನ್ನು ಜನರು ಆಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ.

ಮರುಕಳಿಸಿದ ಚಿಂಚೋಳಿ ಕ್ಷೇತ್ರದ ಇತಿಹಾಸ

ಕಲಬುರ್ಗಿ ಜಿಲ್ಲೆಯ ಚಿಂಚೋಳಿ ವಿಧಾನಸಭಾ ಕ್ಷೇತ್ರ ದಿವಂಗತ ವಿರೇಂದ್ರ ಪಾಟೀಲ್​ರವರಂತಹ ಮುಖ್ಯಮಂತ್ರಿಯವರನ್ನು ಈ ನಾಡಿಗೆ ನೀಡಿದ ಕ್ಷೇತ್ರ. 1957ರಿಂದಲೂ ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಯಾವ ಪಕ್ಷದ ಶಾಸಕರು ಗೆದ್ದಿದಾರೋ ಆ ಪಕ್ಷವೇ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಇತಿಹಾಸ. ಈಗ ಮತ್ತೆ ಈ ಇತಿಹಾಸ ಮರುಕಳಿಸಲು ಹೊರಟಿದೆ. ವಿಶ್ವಾಸಮತಯಾಚನೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಕ್ಕೆ ಸೋಲಾಗಿದ್ದು, ರಾಜ್ಯದಲ್ಲಿ ಮತ್ತೆ ಕಮಲ ಅರಳಿದೆ. ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ತವಕದಲ್ಲಿ ಕೇಸರಿ ಪಡೆ ಇದೆ. ಇನ್ನು

ಡಾ.ಉಮೇಶ್ ಜಾಧವ್ ವಿಚಾರಕ್ಕೆ ಬರೋದಾದರೆ ಡಾ.ಉಮೇಶ್ ಜಾಧವ್ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾದವರು. 2013ರಲ್ಲಿ ಮೊದಲ ಬಾರಿ ಡಾ.ಉಮೇಶ್ ಜಾಧವ್ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದಾಗ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿತ್ತು ಬಳಿಕ 2018ರಲ್ಲಿಯೂ ಡಾ.ಉಮೇಶ್ ಜಾಧವ್ ಕಾಂಗ್ರೆಸ್ ಪಕ್ಷದಿಂದ ಪುನರಾಯ್ಕೆಗೊಂಡ ವೇಳೆಯೂ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷ ಅಧಿಕಾರಕ್ಕೆ ಬಂತು. ಆದರೆ ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಕಾಂಗ್ರೆಸ್​ಗೆ ಗುಡ್ ಬೈ ಹೇಳಿದ್ದ ಡಾ.ಉಮೇಶ್ ಜಾಧವ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಲಬುರ್ಗಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಸೋಲಿಲ್ಲದ ಸರದಾರ ಸತತವಾಗಿ 9 ಬಾರಿ ವಿಧಾನಸಭೆ ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಮಲ್ಲಿಕಾರ್ಜುನ ಖರ್ಗೆರನ್ನು ಸೋಲಿಸಿ ಕಲಬುರ್ಗಿಯಲ್ಲಿ ಕಮಲ ಅರಳಿಸುವಲ್ಲಿ ಯಶಸ್ವಿಯಾದರು. ಬಳಿಕ ಚಿಂಚೋಳಿ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಡಾ.ಉಮೇಶ್ ಜಾಧವ್ ಪುತ್ರ ಡಾ.ಅವಿನಾಶ್ ಜಾಧವ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯ ಸಾಧಿಸಿದರು. ಈಗ ಮತ್ತೆ ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದ ಪಕ್ಷವೇ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದು ಚಿಂಚೋಳಿ ವಿಧಾನಸಭಾ ಕ್ಷೇತ್ರದ ಇತಿಹಾಸ ಮರುಕಳಿಸಿದೆ.

ಮೊದಲು ರಾಜೀನಾಮೆ ನೀಡಿದ್ದ ‘ಕೈ’ ಶಾಸಕ ಡಾ.ಜಾಧವ್

ಹೌದು ಇನ್ನು ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಹಲವು ಕಾಂಗ್ರೆಸ್ ಜೆಡಿಎಸ್ ಶಾಸಕರನ್ನು ಸೆಳೆಯಲು ಪ್ರಯತ್ನ ಪಟ್ಟಿತ್ತು. ಇದರಲ್ಲಿ ಮೊದಲು ಯಶಸ್ಸು ಕಂಡಿದ್ದು ಡಾ.ಉಮೇಶ್ ಜಾಧವ್ ರಾಜೀನಾಮೆ. ಹೌದು ರೆಬೆಲ್ ಲೀಡರ್ ಬೆಳಗಾವಿ ಜಿಲ್ಲೆಯ ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಜೊತೆ ಮುಂಬೈ ಸೇರಿದ್ದ ಡಾ.ಉಮೇಶ್ ಜಾಧವ್ ಬಳಿಕ ಕಾಂಗ್ರೆಸ್​ಗೆ ಹಾಗೂ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭೆಗೆ ಸ್ಪರ್ಧಿಸಿದ್ದರು.

‘ಪೈಲೆಟ್ ಪ್ರಾಜೆಕ್ಟ್’ ರೀತಿ ಡಾ.ಜಾಧವ್ ಬಳಸಿದ್ದ ಬಿಜೆಪಿ
ಇನ್ನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ಸೇರಿದ್ದ ಅತೃಪ್ತ ಶಾಸಕರಿಗೆ ವಿಶ್ವಾಸ ತುಂಬಲು ಭಾರತೀಯ ಜನತಾ ಪಕ್ಷ ಡಾ.ಉಮೇಶ್ ಜಾಧವ್​ರನ್ನು ಒಂದು ರೀತಿ ಪೈಲೆಟ್ ಪ್ರಾಜೆಕ್ಟ್ ರೀತಿ ಬಳಸಿಕೊಂಡಿತ್ತು ಎನ್ನಬಹುದು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಆತಂಕದಲ್ಲಿದ್ದ ರೆಬೆಲ್ ಶಾಸಕರನ್ನು ಮುಂಬೈಗೆ ತೆರಳಿ ಭೇಟಿಯಾಗಿದ್ದ ಡಾ.ಉಮೇಶ್ ಜಾಧವ್ ಏನೂ ಆಗಲ್ಲ ಎಲ್ಲ ಸರಿಹೋಗುತ್ತೆ. ಚಿಂತೆ ಮಾಡಬೇಡಿ. ನಾನೂ ಸಹ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದೆ ಈಗ ಸಂಸದನಾಗಿದ್ದೇನೆ ನನ್ನ ಮಗ ಎಂಎಲ್ ಎ ಆಗಿದ್ದಾನೆ. ಅಂತಾ ವಿಶ್ವಾಸ ತುಂಬಿದ್ದರು. ಅದೇನೇ ಇರ್ಲಿ ಕಾಕತಾಳಿಯವೋ ಅದೃಷ್ಟವೋ ಗೊತ್ತಿಲ್ಲ ಚಿಂಚೋಳಿ ವಿಧಾನಸಭಾ ಕ್ಷೇತ್ರದಂತೆಯೂ ಡಾ.ಉಮೇಶ್ ಜಾಧವ್ ಸಹ ಬಿಜೆಪಿ ಪಾಲಿಗೆ ಲಕ್ಕಿ ಚಾಂಪ್ ಆಗಿದ್ದಂತೂ ಸುಳ್ಳಲ್ಲ ಅಂತಾ ಕಲಬುರ್ಗಿ ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿರುವುದಂತೂ ಸತ್ಯ.

Be the first to comment

Leave a Reply

Your email address will not be published.


*