ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಮುದ್ದೇಬಿಹಾಳ ಮತಕ್ಷೇತ್ರದ ಯಲಗೂರು ಗ್ರಾಮದಲ್ಲಿ ಶಾಸಕ ಹಾಗೂ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಅಧ್ಯಕ್ಷ ಎ.ಎಸ್.ಪಾಟೀಲ ಅವರು ಅಂದಾಜು 2.70 ಕೋಟಿ ವೆಚ್ಚದ ಸಿ.ಸಿ. ರಸ್ತೆ ಹಾಗೂ ವಿವಿಧ ಅಭಿರುದ್ದಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯಲಗೂರು ಸುಕ್ಷೇತ್ರವಾಗಿದೆ. ಅಲ್ಲದೇ ಕೆ.ಬಿ.ಜೆ.ಎನ್.ಎಲ್. ಅಚ್ಚು ಕಟ್ಟು ವ್ಯಾಪ್ತಿಗೆ ಬರುತ್ತದೆ. ಇಂತಹ ಗ್ರಾಮಕ್ಕೆ ಅಭಿರುದ್ಧಿಯ ಅನುಧಾನ ಎಂದೂ ಬರಬೇಕಿತ್ತು. ಇಲ್ಲಿ ಈ ವರ್ಷ ಅನುಧಾನ ತರಲು ನನಗೆ ಅವಕಾಶ ಮಾಡಿದ್ದು ನನ್ನ ಪೂರ್ವದ ಪುಣ್ಯವಾಗಿದೆ. ನನ್ನ ಅವಧಿಯಲ್ಲಿ ಯಲಗೂರು ಗ್ರಾಮವನ್ನು ಅಭಿರುದ್ಧಿ ಪಡಿಸುವುದು ನನ್ನ ಜವಾಬ್ದಾರಿ ಎಂದು ಅವರು ಹೇಳಿದರು.
ಗ್ರಾಮದಲ್ಲಿ ಬಂದಿರುವ ಅಭಿರುದ್ಧಿ ಕಾಮಗಾರಿಗೆ ಗ್ರಾಮಸ್ಥರೂ ಸಹಕರಿಸುವು ಅಗತ್ಯವಾಗಿದೆ. ಗ್ರಾಮದಲ್ಲಿ ತೆಗ್ಗು ಗುಂಡಿಯ ರಸ್ತೆಗಳಿಗೆ ವಿಧಾಯ ಹೇಳಬೇಕಿದೆ. ಇರೊಂದಿಗೆ ಗ್ರಾಮಸ್ಥರು ರಸ್ತೆಯಲ್ಲಿ ಕಟ್ಟಿರುವ ಕೆಟ್ಟೆ ಹಾಗೂ ಇನ್ನಿತರ ಸಾಮಗ್ರಿಗಳನ್ನು ತೆಗೆದು ಕಾಮಗಾರಿಗೆ ಸಹಕರಿಸಬೇಕು ಎಂದು ಅವರು ಹೇಳಿದರು.
Be the first to comment