ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಮುದ್ದೇಬಿಹಾಳ ತಾಲೂಕಿನ ವಡವಡಗಿ ಗ್ರಾಮ ರಾಜ್ಯದ ರಾಜಧಾನಿಯಂತೆ ಕಣಬಹುದಾದ ರೀತಿಯಲ್ಲೇ ಕಾಣಬೇಕು ಎಂದು ಹಿಂದೆಂದೂ ಯಾರೂ ತಾರದಂತಹ ಅನುಧಾನವನ್ನು ತಂದಿದ್ದು ಗ್ರಾಮಸ್ಥರು ಇದನ್ನು ಸಂಪೂರ್ಣವಾಗಿ ಸದುಪಯೋಗ ಮಾಡಬೇಕು ಎಂದು ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಅಧ್ಯಕ್ಷ ಎ. ಎಸ್. ಪಾಟೀಲ ನಡಹಳ್ಳಿ ಹೇಳಿದರು.
ತಾಲೂಕಿನ ಯರಝರಿ ಜಿ.ಪಂ. ಕ್ಷೇತ್ರದ ವಡವಡಗಿ ಗ್ರಾಮದಲ್ಲಿ 380 ಲಕ್ಷ ಸಿಸಿ ರಸ್ತೆ, ಚರಂಡಿ, ಶಾಲಾ ಕಟ್ಟಡ ಹಾಗೂ ಸಮುದಾಯ ಭವನದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಒಬ್ಬ ಸಾಮಾನ್ಯ ಕುಟುಂಬದ ವ್ಯಕ್ತಿಗೆ ಶಾಸಕ ಸ್ಥಾನ ನೀಡಿದ್ದರಲ್ಲಿ ಯರಝರಿ ಜಿಲ್ಲಾ ಪಂಚಾಯತ ಪ್ರಮುಖವಾಗಿದೆ. ಇದಕ್ಕಾಗಿ ನನ್ನ ಅನುಧಾನದಲ್ಲಿ ಬಹುಶ್ಯ ಪೂರ್ತಿ ಅನುದಾನ ನೀಡಲಾಗಿದು. ಇದಕ್ಕೆ ಸಹೋದರ ಶಾಂತಗೌಡ ಅವರ ಮನವಿ ಮುಖ್ಯ ಪಾತ್ರವಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಎ ಪಿ ಎಂ ಸಿ ಸದಸ್ಯ ಮುತ್ತಣ್ಣ ಹುಗ್ಗಿ, ಮುಖಂಡ ಮಲ್ಲಣ್ಣ ಅಪರಾಧಿ, ಗ್ರಾ. ಪಂ. ಸದಸ್ಯ ಯಮನಪ್ಪ ಮಲಗೋoಡ, ಪಿಡಿಓ ಮಹಾಂತೇಶ ಹೊಸಗೌಡ್ರು ಇದ್ದರು.
Be the first to comment