ಅಬಕಾರಿ ದಾಳಿ : 11 ಲೀಟರ ಕಳ್ಳಬಟ್ಟಿ ಸಾರಾಯಿ ವಶ

ವರದಿ: ಶರಣಪ್ಪ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ: ಅಬಕಾರಿ ನಿರೀಕ್ಷಕ ಎಂ.ಎಸ್. ಪಾಟೀಲ ನೇತೃತ್ವದ ತಂಡ ತಾಲೂಕಿನ ಮುಚಖಂಡಿ ತಾಂಡಾ-1 ರಿಂದ ನೀರಲಕೇರಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ದಾಳಿ ನಡೆಸಿ 3 ದ್ವಿಚಕ್ರ ವಾಹನ ಜೊತೆಗೆ 11 ಲೀಟರ್ ಕಳ್ಳಬಟ್ಟಿ ಸಾರಾಯಿ ವಶಪಡಿಸಿಕೊಂಡಿದೆ.

ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತರ ನಿರ್ದೇಶನ ಹಾಗೂ ಅಬಕಾರಿ ಉಪ ಆಯುಕ್ತರಾದ ರಮೇಶಕುಮಾರ ಎಚ್. ಅವರ ಮಾರ್ಗದರ್ಶನದಲ್ಲಿ ಖಚಿತ ಮಾಹಿತಿ ಮೇರೆಗೆ ಆಗಸ್ಟ 26 ರಂದು ರಾತ್ರಿ 9 ಗಂಟೆ ಸುಮಾರಿಗೆ ಕಳ್ಳಬಟ್ಟಿ ಸಾರಾಯಿ ಸಾಗಾಟ ಮಾಡುತ್ತಿರವುದನ್ನು ಪತ್ತೆ ಹಚ್ಚಲಾಯಿತು. ಅಬಕಾರಿ ಉಪ ನಿರೀಕ್ಷಕ-1 ಶಿವಾನಂದ ಹೂಗಾರ, ಉಪ ನಿರೀಕ್ಷಕ-2 ರೇಖಾ ಕೊಡಗಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ದಾಳಿಯಲ್ಲಿ ಅಬಕಾರ ಇಲಾಖೆಯ ಸಿಬ್ಬಂದಿಗಳಾದ ಚನ್ನಬಸಪ್ಪ ಪೂಜಾರ, ಮಹಾಂತೇಶ ಸುಳಿಬಾವಿ, ಅಮೃತ ಪೂಜಾರಿ, ರಫಿಕ ಬಾಗವಾನ, ಅನೀಲ ಮರಕಟ್ಟೆ ಇದ್ದರು. ಬಾಗಲಕೋಟೆ ತಹಶೀಲ್ದಾರ ಅವರ ಅಧ್ಯಕ್ಷತೆಯಲ್ಲಿ ತಾಲೂಕಾ ಮಟ್ಟದ ಕಳ್ಳಬಟ್ಟಿ ನಿರ್ಮೂಲನಾ ಸ್ಥಾಯಿ ಸಮಿತಿ ಸಭೆ ನಡೆಸಲಾಯಿತು.

Be the first to comment

Leave a Reply

Your email address will not be published.


*