ರಾತ್ರೋರಾತ್ರಿ ಯೂನಿಯನ್ ಬ್ಯಾಂಕ್ ಎಟಿಎಂ ಕಳ್ಳತನ ಯತ್ನ ವಿಫಲ: ಹೆಚ್ಚಿನ ಪೊಲೀಸ ಬಂದುಬಸ್ತಗಾಗಿ ಸಾರ್ವಜನಿಕರ ಮನವಿ

ವರದಿ: ಸಿದ್ದು ಚಲವಾದಿ, ಮುದ್ದೇಬಿಹಾಳ

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ ಆ.26:

ಮುದ್ದೇಬಿಹಾಳ ಪಟ್ಟಣದ ತಂಗಡಗಿ ರಸ್ತೆಯಲ್ಲಿರುವ ಯೂನಿಯನ್ ಬ್ಯಾಂಕ್ ಎಟಿಎಂಗೆ ಕಣ್ಣಾ ಹಾಕಲು ಬಂದಿದ ಕಳ್ಳರ ಪ್ರಯತ್ನ ವಿಫಲವಾಗಿದ್ದು ಸ್ಥಳೀಯ ಪೊಲೀಸ ಇನ್ಸಪೇಕ್ಟರ್ ಮಲ್ಲಪ್ಪ ಮಡ್ಡಿ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ್ದಾರೆ. ಕೇವಲ ಎಟಿಎಂ ಅಲ್ಲದೇ ಇದೇ ರಸ್ತೆಯಲ್ಲಿರು ಅಂಗಡಿಯೊಂದು ಕಳ್ಳತನವಾಗಿದೆ ಎಂಬ ಸುದ್ದಿ ಕೇಳಿಬರುತ್ತಿದ್ದು ಪೊಲೀಸರು ಕಳ್ಳತನ ಜಾಲದ ಹಿಡಿಯಲು ಮುಂದಾಗಿದ್ದಾರೆ. 



ರಾತ್ರಿ ಗಸ್ತು ಬಂದ್ಉ ಬಸ್ತಾಗಲಿ:

ಯೂನಿಯನ್ ಬ್ಯಾಂಕ್ ಎಟಿಎಂ ಇಲ್ಲಿನ ಬಸವೇಶ್ವರ ವೃತ್ತದ ಹತ್ತಿರವಿದ್ದರೂ ಕಳ್ಳರ ಕಾಟ ತಪ್ಪುತ್ತಿಲ್ಲ. ಆದ್ದರಿಂದ ಕಳ್ಳತನಕ್ಕೆ ಪ್ರಯತ್ನಿಸಿದ್ದ ಜಾಲವನ್ನು ಪತ್ತೆ ಹಚ್ಚುವವರೆಗೂ ನಗರದಲ್ಲಿ ಪೊಲೀಸರ ಹೆಚ್ಚಿನ ಬಂದುಬಸ್ತ ವ್ಯವಸ್ಥೆಯಾಗಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

Be the first to comment

Leave a Reply

Your email address will not be published.


*