ರಾಜ್ಯ ಸುದ್ದಿಗಳು
ಆಲಮಟ್ಟಿ ಆ.25:
ಮಳೆಹಾನಿ ವೈಮಾಣಿಕ ಸಮೀಕ್ಷೆಗೆ ಹಾಗೂ ಅಧಿಕಾರಿಗಳ ಸಭೆಗೆ ಆಗಮಿಸಿದ್ದ ರಾಜ್ಯ ಮುಖ್ಯಮಂತ್ರಿಗಳನ್ನು ಬೇಟಿ ಮಾಡಿ ವಿವಿಧ ಬೇಡಿಕೆ ಮತ್ತು ಸೌಕರ್ಯಗಳ ಬಗ್ಗೆ ಗಮನ ಸೆಳೆಯಬೇಕೆಂದು ಆಗಮಿಸಿದ್ದ ವಿವಿಧ ತಾಲೂಕಾ ಮತ್ತು ಜಿಲ್ಲಾ ರೈತ ಸಂಘದ ಮತ್ತು ವಿವಿಧ ಸಮಾದವರು ಆಲಮಟ್ಟಿ ಲಾಲ್ ಬಹಾದ್ದೂರ ಶಾಸ್ತ್ರಿ ಆಣೆಕಟ್ಟಿನ ಮುಖ್ಯ ದ್ವಾರದಲ್ಲಿ ದಿಡೀರ್ ಪ್ರತಿಭಟನೆ ಮಾಡಿದ ಘಟನೆ ಮಂಗಳವಾರ ಮಧ್ಯಾಹ್ನ ನೆಡೆದಿದೆ.
ರೈತರ ಕಬ್ಬಿನ ಬಾಕಿ ಹಣವನ್ನು ಸಕ್ಕರೆ ಸಕ್ಕರೆ ಕಾರ್ಖಾನೆಗಳು ಬಡ್ಡಿ ಸಮೇತ ಪಾವತಿ ಮಾಡಲು ಆದೇಶ ಹೊರಡಿಸುವುದು, 2019ರ ಆಗಷ್ಟನಲ್ಲಿ ನೆರೆ ಹಾವಳಿಯ ಪರಿಹಾರ ನೀಡುವಂತೆ, ಭೂ ಸುಧಾರಣೆಯ ಕಾಯ್ದೆ ತಿದ್ದುಪಡಿಯನ್ನು ಕೈಬಿಡುವಂತೆ, ಎ.ಪಿ.ಎಂ.ಸಿ. ಕಾಯ್ದೆ ತಿದ್ದುಪಡೆ ಹಿಂಪಡೆಯುವಂತೆ, ಕಾರ್ಮಿಕರ ಕಾಯ್ದೆ ತಿದ್ದುಪಡೆಯನ್ನು ಕೈಬಿಡುವ ಸೇರಿದಂತೆ ಅನೇಕ ಬೇಡಿಕೆಗಳ ಬಗ್ಗೆ ಸಿಎಂ ಅವರಿಗೆ ಮನವರಿಕೆ ಮಾಡಿ ಅವರಿಗೆ ಮನವಿ ಸಲ್ಲಿಸಬೇಕೆಂದು ವಿಜಯಪುರ ಸೇರಿದಂತೆ ನೆರೆ ಜಿಲ್ಲೆಯ ರೈತರನ್ನು ಸಿಎಂ ಅವರಿಗೆ ಬೇಟಿ ಮಾಡುವ ಅವಕಾಶ ನೀಡದ ಕಾರಣ ರೈತರು ಹಾಗೂ ಸಂಘಟಿತರು ಪ್ರತಿಭಟನೆಗೆ ಮುಂದಾಗಬೇಕಾಯಿತು.
ಬಾಗಲಕೋಟ ಜಿಲ್ಲಾ ಪಂಚಾಯತ ಉಪಾಧ್ಯಕ್ಷರಿಗೆ ಗೈರು ಹಾಕಿದ ಪೊಲೀಸರು:
ಆಲಮಟ್ಟಿಗೆ ಆಗಮಿಸಿದ ಸಿಎಂ ಯಡಿಯೂರಪ್ಪನವರಿಗೆ ಜಿಲ್ಲಾದ್ಯಂತ ರೈತರ ಸಂಕಟ ಮತ್ತು ವಿವಿಧ ಬೇಡಿಕೆಗಳ ಬಗ್ಗೆ ಮನವರಿಕೆ ಮಾಡಿಕೊಡಲು ಆಗಮಿಸಿದ್ದ ಬಾಗಲಕೋಟ ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಅವರನ್ನು ಲಾಲ್ ಬಹಾದ್ದೂರ ಶಾಸ್ತ್ರಿ ಆಣೆಕಟ್ಟಿನ ಮುಖ್ಯದ್ವಾರದಲ್ಲಿಯೇ ತಡೆದು ಒಳಪ್ರವೇಶಕ್ಕೆ ಅವಕಾಶ ನೀಡಲಿಲ್ಲಾ. ಆದ್ದರಿಂದ ತಮ್ಮ ಬೆಂಬಲಿಗ ಹಾಗೂ ರೈತರೊಂದಿಗೆ ಉಪಾಧ್ಯಕ್ಷರೂ ಪ್ರತಿಭಟನೆ ಮುಂದಾಗಬೇಕಾಯಿತು.
ಎಸ್.ಪಿ ಕಲ್ಪಸಿದ ಅವಕಾಶವೂ ವ್ಯರ್ತ:
ರೈತರು ಹಾಗೂ ವಿವಿಧ ಸಂಘಟನಾಕಾರರು ಪ್ರತಿಭಟಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸ ಇಲಾಖೆ ಅಧಿಕಾರಿ ಡಾ.ರಾಮ ಅವರು ಪ್ರತಿಭಟನೆಗೆ ಸ್ಪಂದಿಸಿ ರೈತರನ್ನು ಹಾಗೂ ವಿವಿಧ ಸಂಘಟನಾಕಾರರನ್ನು ಸಿಎಂ ಅವರಿಗೆ ಮನವಿ ಸಲ್ಲಿಸಲು ಅನುವು ಮಾಡಿಕೊಡಲಾಗುವುದು ಎಂದು ಹೇಳಿ ಪ್ರತಿಭಟನಾಕಾರರನ್ನು ಸಿಎಂ ಅವರು ನಡೆಸಿದ ಸಭೆಯ ಕಾರ್ಯಾಲಯದ ಹತ್ತಿರಕ್ಕೆ ಬರಲು ಅವಕಾಶ ಮಾಡಿಕೊಟ್ಟರು. ಆದರೆ ಸಿಎಂ ಯಡಿಯೂರಪ್ಪನವರು ಯಾರನ್ನೂ ಬೇಟಿ ಮಾಡದ ಕಾರಣ ಎಸ್.ಪಿ. ಮಾಡಿಕೊಟ್ಟ ಅವಕಾಶವೂ ವ್ಯರ್ತವಾಯಿತು.
ಸ್ಥಳದಲ್ಲಿಯೇ ಮತ್ತೆ ಪ್ರತಿಭಟಿಸಿದ ರೈತರು:
ರೈತರ ಮನವಿಯನ್ನು ಸ್ವೀಕರಿಸದೇ ಕಾಲ್ಕಿತ್ತಿದ ಸಿಎಂ ಅವರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ ರೈತರು ಯಡಿಯೂರಪ್ಪನವರಿಗೆ ಕೇವಲ ರಾಜಕೀಯಕ್ಕೆ ಪ್ರವೇಶಿಸಲು ರೈತರು ಬೇಕು. ಅವರು ಪ್ರಮಾಣ ವಚನ ಸ್ವೀಕರಿಸಲು ರೈತರ ಶಾಲು ಬೇಕು ಆದರೆ ರೈತರ ಮನವಿ ಸ್ವೀಕರಿಸಲು ಅವರಿಗೆ ಆಗುವುದಿಲ್ಲ. ಇದಕ್ಕೆ ಮುಂಬರುವ ದಿನಗಳಲ್ಲಿ ತಕ್ಕ ಉತ್ತರ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಿದಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ವಿಜಯರಪು ಜಿಲ್ಲಾಧ್ಯಕ್ಷ ಸಿದ್ದನಗೌಡ ಬಿರಾದಾರ(ವಕೀಲರು), ಸಂಗಣ್ಣ ಬಾಗೇವಾಡಿ, ಅಯ್ಯಣ್ಣ ಬಿದರಕುಂದಿ, ವಾಯ್.ಎನ್.ಬಿರಾದಾರ, ಶ್ರೀಕಾಂತ ಅಗ್ನಿ, ಸಂಗನಗೌಡ ಬಿರಾದಾರ, ಹುಲಗಪ್ಪಗೌಡ ಬಿರಾದಾರ, ವಾಯ್.ಎಚ್.ವಿಜಯಕರ ಸೇರಿದಂತೆ ಇತರರಿದ್ದರು.
Be the first to comment