ಮೋಜಿನ ತಾಣವಾದ ‘ತ್ಯಾಗರ್ತಿ’ಗ್ರಾಮ ಪಂಚಾಯಿತಿ.?

ವರದಿ: ಪ್ರಕಾಶ ಮಂದಾರ.

ಸಾಗರ:ಸರ್ಕಾರಿ ಜಮೀನುಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳುವಲ್ಲಿ ಹೆಸರಾಗಿರುವ ಸಾಗರ ತಾಲ್ಲೂಕಿನ ತ್ಯಾಗರ್ತಿ ಗ್ರಾಮದ ಕೆಲವು ಪುಢಾರಿ ರಾಜಕೀಯ ವ್ಯಕ್ತಿಗಳಿಂದ ತ್ಯಾಗರ್ತಿ ಗ್ರಾಮ ಪಂಚಾಯಿತಿಯೂ ಹಳಿ ತಪ್ಪಿದಂತಾಗಿದೆ.

ಹಳಿ ತಪ್ಪಿದ ಪಂಚಾಯಿತಿಯನ್ನು ಸರಿದಾರಿಗೆ ತಂದು ಸಾರ್ವಜನಿಕರ ಸೇವೆಗೆ ಉತ್ತಮವಾದ ವಾತಾವರಣವನ್ನು ನಿರ್ಮಾಣ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಮಂಜು ನಾಯ್ಕ ಇವರ ಮೇಲೂ ಕೆಲ ಪುಢಾರಿ ರಾಜಕೀಯ ವ್ಯಕ್ತಿಗಳು ಪಂಚಾಯಿತಿಯಿಂದ ಬೇರೆ ಕಡೆ ವರ್ಗಾಯಿಸುವ ನೆಪದಲ್ಲಿ ಅವರೊಂದಿಗೆ ವಾಗ್ವಾದಕ್ಕಿಳಿದು ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗಿದ್ದಾರೆ.ಅವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಪಂಚಾಯಿತಿಯ ಕಚೇರಿಯ ಒಳಗಡೆ ಕಾನೂನು ಕೈಗೆ ತೆಗೆದುಕೊಂಡು ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೇ ಅವರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿರುವುದು ಕಚೇರಿಯ ಒಳಗಡೆ ಇರುವ ಸಿಸಿ ಕ್ಯಾಮೆರಾದಲ್ಲಿ ಸದ್ದಿಲ್ಲದಂತೆ ರೆಕಾರ್ಡ್ ಆಗಿದೆ.ಆದರೂ ಇದುವರೆಗೂ ಸಂಬಂಧಿಸಿದ ಅಧಿಕಾರಿಗಳು ಸಮಗ್ರವಾಗಿ ತನಿಖೆ ನಡೆಸದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ .

ಕಳೆದ ಎರಡು ದಿನಗಳ ಹಿಂದೆ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಅಭಿವೃದ್ಧಿ ಅಧಿಕಾರಿಯ ಭಯವಿಲ್ಲದೆ ಪಂಚಾಯಿತಿಯ ಕಚೇರಿಯ ಒಳಗಡೆ ಸಿಬ್ಬಂದಿಯ ಹುಟ್ಟುಹಬ್ಬದ ಆಚರಣೆಯನ್ನು ಮಾಡಿದ್ದಾರೆ .

ಖ್ಯಾತಿಯ ಕಚೇರಿಯ ಒಳಗಡೆ ಖ್ಯಾತಿಯ ಸಮಯದ ಅವಧಿಯಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿ ಪಂಚಾಯತಿಯನ್ನು ದುರ್ಬಳಕೆ ಮಾಡಿಕೊಂಡಿರುವ ಪಂಚಾಯಿತಿಯ ಸಿಬ್ಬಂದಿಗಳ ಮೇಲೆ ಇದುವರೆಗೂ ಸಂಬಂಧಿಸಿದ ಮೇಲಧಿಕಾರಿಗಳಿಗೆ ಎಲ್ಲ ವಿಚಾರ ವಿಷಯಗಳು ಗೊತ್ತಿದ್ದರೂ ಸಂಬಂಧಿಸಿದ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳದಿರುವುದು ಇನ್ನಷ್ಟು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ .

ಮೊನ್ನೆ ದಿನ ಪಂಚಾಯಿತಿ ಕಚೇರಿ ಒಳಗಡೆ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿರುವುದು ಇದೇ ಮೊದಲಲ್ಲ ಈ ಹಿಂದೆಯೂ ಅನೇಕ ಬಾರಿ ಪಂಚಾಯಿತಿಯನ್ನು ತಮ್ಮ ಸ್ವಂತ ಆಸ್ತಿಯಂತೆ ಪಂಚಾಯಿತಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ, ಆದರೆ ಬೆಳಕಿಗೆ ಮಾತ್ರ ಬಂದಿರಲಿಲ್ಲ .

ಮೊನ್ನೆಯ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ ಪಂಚಾಯಿತಿ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳುವುದರ ಜೊತೆಗೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಬಳಸಿ ಕೊಂಡಿರುವುದಿಲ್ಲ .ಸಂಬಂಧಿಸಿದ ಅಧಿಕಾರಿಗಳು ಇವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಏಕೆ ಕೇಸ್ ದಾಖಲಿಸಬಾರದು.

ಪಂಚಾಯಿತಿ ಕಚೇರಿಯ ಒಳಗಡೆ ಕಚೇರಿಯ ಸಮಯದ ಅವಧಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ತಪ್ಪು ಮಾಡಿದ್ದ ಸಿಬ್ಬಂದಿಗಳ ಮೇಲೆ ಯಾವ ರೀತಿಯ ಕ್ರಮ ಕೈಗೊಳ್ಳುವಲ್ಲಿ ಮುಂದಾಗುತ್ತಾರೆ ಕಾದು ನೋಡಬೇಕಾಗಿದೆ .

Be the first to comment

Leave a Reply

Your email address will not be published.


*