ನೀರಾವರಿ ಜೊತೆಗೆ ಪರಿಸರ ಸಂರಕ್ಷಣೆಗೂ KBJNL ದಿಟ್ಟ ಹೆಜ್ಜೆ.

ವರದಿ:ಬಸವರಾಜ್ ಬಿರಾದಾರ್

ಲಿಂಗಸಗೂರು: ರಾಜ್ಯದ ಬೃಹತ್ ನೀರಾವರಿ ಯೋಜನೆಗಳಲ್ಲಿ ಒಂದಾದ ಉತ್ತರ ಕರ್ನಾಟಕದ ರೈತರ ಜೀವನಾಡಿ ಎಂದು ಪ್ರಸಿದ್ಧಿಯಾಗಿರುವ ಕೃಷ್ಣ ಮೇಲ್ದಂಡೆ ಯೋಜನೆಯಡಿ ನೀರಾವರಿ ಸಾಕಾರಗೊಳಿಸಿರುವ ಬಗ್ಗೆ ಕೃಷ್ಣ ಭಾಗ್ಯ ಜಲ ನಿಗಮ ಸಂಸ್ಥೆ ಕೃಷ್ಣ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಸಸ್ಯಗಳ ಲಾಲನೆ-ಪಾಲನೆ ಪೋಷಣೆ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಕೂಡ ದಿಟ್ಟ ಹೆಜ್ಜೆ ಇಟ್ಟಿದೆ

KBJNL ಇಲಾಖೆ ಬಸವಸಾಗರ ಜಲಾಶಯದ ಮುಂಭಾಗದಲ್ಲಿ ನಾರಾಯಣಪುರ ರಸ್ತೆಯಲ್ಲಿನ ನರ್ಸರಿಯಲ್ಲಿ ಕಾಲಿಟ್ಟರೆ ಸಾಕು ಸುತ್ತಲೂ ಸುಂದರ ಸಸ್ಯಲೋಕ ನೋಡಿದಲ್ಲೆಲ್ಲಾ ಹಸಿರೇ ಹಸಿರು ಬಗೆ ಬಗೆಯ ಸಸ್ಯಗಳು ನೋಡುಗರ ಕಣ್ಣುಗಳನ್ನು ಕಂಗೊಳಿಸುತ್ತಾ ಮುದ ನೀಡುತ್ತಿವೆ.

ಇದರ ಜೊತೆಗೆ ಸುತ್ತಮುತ್ತಲು ಕೃಷ್ಣ ಅಚ್ಚುಕಟ್ಟು ಪ್ರದೇಶದಲ್ಲಿನ ವ್ಯಾಪ್ತಿಯ ರಸ್ತೆಗಳ ಬದಿಗಳಲ್ಲಿ ಮತ್ತು ಅಣೆಕಟ್ಟಿನ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಸಸ್ಯ ಸಂರಕ್ಷಣೆಯಲ್ಲಿ ತೊಡಗಿದ್ದಾರೆ

ಆಲಮಟ್ಟಿ ಜಲಾಶಯದ ನಂತರ ತಾಲೂಕಿನ ರೋಡಲಬಂಡಾ ಬಳಿ ನಿರ್ಮಿಸಿದ ಕೃಷ್ಣಾ ಭಾಗ್ಯ ಜಲ ನಿಗಮ ಕೇವಲ 10 ಎಕರೆ ನರ್ಸರಿಯಲ್ಲಿ ಕಾಲಿಟ್ಟರೆ ಸಾಕು ನಮಗೆ ಅತ್ತಿಮರ. ಬಸರಿ . ಬಿಲ್ವಪತ್ರಿ. ಬೇವು .ಮಾವು .ಹುಣಸೆ. ಸಾಗುವಾನಿ. ಶ್ರೀಗಂಧ ಸೇರಿ ಬಗೆಬಗೆಯ 27 ಜಾತಿಗಳು ಸಸ್ಯಗಳು ದೊರಕುತ್ತಿವೆ

ತೋಟಗಾರಿಕೆ ಸಸಿ ಗಳಾದ ಮಾವು, ದಾಳಿಂಬೆ, ಪೇರಲ ,ಚಿಕ್ಕು, ಹೆಬ್ಬೇವು ,ಹಲವು ಬಗೆಯ ಹಣ್ಣುಗಳನ್ನು ಇಲಾಖೆಯ ನಿಯಮಗಳಂತೆ ರೈತರಿಗೆ ಒದಗಿಸಲಾಗುತ್ತಿದೆ.

ಈ ಸಾಕಷ್ಟ ಅಭಿವೃದ್ಧಿಯ ಕೆಲಸಕ್ಕೆ ಇಲಾಖೆಯ ಆಲಮಟ್ಟಿ KBJNL. ಎಲ್ ಡಿ ಸಿ ಎಫ್. ಪಿಕೆಪೈ ನೇತೃತ್ವದಲ್ಲಿ ಎಸಿಎಫ್. ಎ.ಎಸ್ ಪೇಟೆ ಗೌಡರ್, ಆರ್ ಎಫ್ ಓ. ಮಹೇಶ್ ಪಾಟೀಲ್, ಡೆಪುಟಿ ಆರ್ ಎಫ್ ಓ. ಮೃತ್ಯುಂಜಯ, ಇವರು ಸಂಪೂರ್ಣ ನರ್ಸರಿಯ ಸಂರಕ್ಷಣೆಯಲ್ಲಿ ತೊಡಗಿದ್ದಾರೆ

ನರ್ಸರಿಯಲ್ಲಿ ಸಸಿಗಳನ್ನು ಚಿಕ್ಕಮಕ್ಕಳಂತೆ ನೋಡಿಕೊಳ್ಳಲು ಗೊಬ್ಬರ , ನೀರು,ರೋಗ ರುಜಿನಗಳಿಂದ ಲಾಲನೆ, ಪಾಲನೆ ,ಪೋಷಣೆ ,ಮಾಡಲು ಐವತ್ತಕ್ಕೂ ಅಧಿಕ ಕೆಲಸಗಾರರನ್ನು ನೇಮಿಸಿದ್ದು ಅವರು ಕೂಡ ಬಿಸಿಲು ಮಳೆ ಗಾಳಿ ಎನ್ನದೆ ಟೊಂಕ ಕಟ್ಟಿ ನಿಂತು ಅರಣ್ಯ ಸಂರಕ್ಷಣೆ ಕಾರ್ಯದಲ್ಲಿ ಸ್ಥಳೀಯ ಕೂಲಿಕಾರರು ಶ್ರಮಿಸುತ್ತಿದ್ದಾರೆ, ಹಾಗೆಯೇ ಇಲ್ಲಿ ನಾನಾ ಬಗೆಯ ಔಷಧೀಯ ಸಸ್ಯಗಳು ಕೂಡ ದೊರಕುತ್ತಿವೆ ಎಂದು ಅಧಿಕಾರಿಗಳು ತಿಳಿಸಿದರು

ಈ ನರ್ಸರಿಯ ಬಗ್ಗೆ ಯುವ ಮುಖಂಡ ಚೆನ್ನಾರೆಡ್ಡಿ ಬಿರಾದಾರ ಮಾತನಾಡಿ ಬಸವಸಾಗರ ನರ್ಸರಿ ಗೂ ಹಾಗೂ ಆಲಮಟ್ಟಿ ನರ್ಸರಿ ಗೂ ಮಲತಾಯಿ ಧೋರಣೆ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.

ಈಗಾಗಲೇ ಸರ್ಕಾರದ ಜಲಸಂಪನ್ಮೂಲ ಸಚಿವರಿಗೆ ಮನವಿ ಮಾಡಿಕೊಂಡಿದ್ದು ಅಂದಾಜು ನೂರು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಬಸವಸಾಗರ ಜಲಾಶಯದ ಸುತ್ತಮುತ್ತ ಪ್ರವಾಸಿಗರಿಗೆ ನೋಡಲು ಪ್ರವಾಸಿತಾಣವನ್ನಾಗಿ ಮಾಡಬೇಕೆಂದು ಅವರಿಗೂ ಕೂಡ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

Be the first to comment

Leave a Reply

Your email address will not be published.


*