ಹರಿಹರ:-ಸ್ವಾತಂತ್ರ್ಯ ಭಾರತದ ಗ್ರಾಮಗಳು ಇದುವರೆಗೂ ಅಭಿವೃದ್ಧಿ ಹೊಂದದೇ ಇರಲು ಕಾರಣ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿರ್ವಹಿಸುವ ಅಧಿಕಾರಿಗಳು .
ದೇಶದ ಪ್ರಧಾನಿಗಳು ಕೆಂಪು ಕೋಟೆಯ ಮೇಲೆ ನಿಂತು ದೇಶದ ಅಭಿವೃದ್ಧಿಯ ಬಗ್ಗೆ ಅನೇಕ ಯೋಜನೆಗಳನ್ನು ಜಾರಿಗೆ ತರುವ ಭಾಷಣ ಮಾಡುತ್ತಾರೆ .ಪ್ರಧಾನಿಯವರಿಗೆ ಭಾರತವನ್ನು ಉತ್ತುಂಗಕ್ಕೆ ಒಯ್ಯುವ ಅಭಿಲಾಷೆ ಹೊಂದಿ ಸಾವಿರಾರು ಕೋಟಿ ಅನುದಾನದ ಘೋಷಣೆಯನ್ನು ಮಾಡುತ್ತಾರೆ.ಆದರೆ ಕೆಳಮಟ್ಟದ ಅಧಿಕಾರಿಗಳು ಅನುಷ್ಠಾನಕ್ಕೆ ತರುವಲ್ಲಿ ನಿರ್ಲಕ್ಷ್ಯ ಬೇಜವಾಬ್ದಾರಿತನ ತೋರುತ್ತಾರೆ ಆದ್ದರಿಂದ ಸ್ವಾತಂತ್ರ್ಯ ಬಂದು ಎಪ್ಪತ್ತು ಮೂರು ವರ್ಷ ಕಳೆದರೂ ಭಾರತ ದೇಶದ ಹಳ್ಳಿಗಳು ಇನ್ನೂ ಅಭಿವೃದ್ಧಿ ಹೊಂದಲು ಸಾಧ್ಯವಾಗಿಲ್ಲ.’ಮಹಾತ್ಮಾ ಗಾಂಧೀಜಿಯವರ’ ‘ಗ್ರಾಮ ಸ್ವರಾಜ್ಯದ’ ಕನಸು ಕನಸಾಗಿಯೇ ಉಳಿದಿದೆ .
ಹರಿಹರ ತಾಲ್ಲೂಕಿನ ಗುತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆಪಿ ನಗರದ 5 ನೇ ವಾರ್ಡ್ನಲ್ಲಿ ಒಂದು ವಾರದ ಹಿಂದೆ ಚರಂಡಿಯನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ ತೆಗೆದು ಮೇಲೆ ಹಾಕಿರುವ ಕಸವನ್ನು ತೆಗೆದು ಬೇರೆ ಕಡೆ ಹಾಕಲು ಇನ್ನು ಪಂಚಾಯಿತಿಯ ಅಧಿಕಾರಿಗಳಿಗೆ ಮನಸ್ಸು ಬಂದಂತೆ ಕಾಣುತ್ತಿಲ್ಲ .
ಏನೋ ಗೊತ್ತಿಲ್ಲ ಪಂಚಾಯಿತಿಯವರ ಕೆಲಸ ಚರಂಡಿಯ ಕಸ ತೆಗೆದು ಮೇಲೆ ಹಾಕುವುದು ಇರಬೇಕು, ಉಳಿದಿದ್ದು ಆ ವಾರ್ಡಿನ ಜನರೇ ಮಾಡಬೇಕಾಗಿದೆ ಎಂದು ಕಾಣುತ್ತದೆ.
ಈಗಾಗಲೇ ಹರಿಹರ ನಗರದಲ್ಲಿ ಕೊರೊನಾ ಹೆಮ್ಮಾರಿ ಯಂತೆ ತನ್ನ ವಂಶಾಭಿವೃದ್ಧಿಯ ನಾಗಾಲೋಟ ಮುಂದುವರಿಸಿದೆ,ಆದರೆ ಗುತ್ತೂರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ .
ಚರಂಡಿಯ ಕಸ ತೆಗೆದು ಮೇಲೆ ಹಾಕಿರುವುದರಿಂದ ಸೊಳ್ಳೆ ನೊಣಗಳ ಕಾಟ ಹೆಚ್ಚಾಗಿ ಸಾಂಕ್ರಾಮಿಕ ರೋಗ ಹರಡುವ ಎಲ್ಲ ಲಕ್ಷಣಗಳು ಕಾಣುತ್ತಿದೆ. ಅಷ್ಟೇ ಅಲ್ಲದೆ ಪಕ್ಕದಲ್ಲೇ ವಾರ್ಡಿನ ಜನರಿಗೆ ಕುಡಿಯುವ ನೀರಿನ ಟ್ಯಾಂಕ್ ಸುತ್ತ ಇದ್ದು ಈ ಕಸದ ರಾಶಿ ಕೊಳಚೆ ನೀರು ಸೇರುವ ಎಲ್ಲಾ ಲಕ್ಷಣಗಳು ಇದೆ,ಆದರೂ ಅಧಿಕಾರಿಗಳ ನಿರ್ಲಕ್ಷ್ಯ ಮಾತ್ರ ಮುಂದುವರಿದಿದೆ.
ಸರ್ಕಾರದ ಎಲ್ಲ ಸೌಲಭ್ಯ ಸವಲತ್ತುಗಳನ್ನು ಪಡೆಯುವ ಅಧಿಕಾರಿಗಳು ಗ್ರಾಮೀಣ ಭಾಗದ ಜನರ ಬದುಕಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ .
ಕೂಡಲೇ ಗುತ್ತೂರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಜೆಪಿ ನಗರದ ಐದನೇ ವಾರ್ಡಿನ ಕಸ ವಿಲೇವಾರಿ ಮಾಡುವಲ್ಲಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ ಕಾದು ನೋಡಬೇಕಾಗಿದೆ .
Be the first to comment