ಹೌದು ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಬರುವ ನಾಗರಪಂಚಮಿ ಹಬ್ಬದ ಸಂಭ್ರಮ, ಸಡಗರಕ್ಕೆ ಈ ಬಾರಿ ಕೊರೋನಾ ಅಡ್ಡಿಯಾಗಿದೆ.
ಪ್ರತಿ ವರ್ಷ ಹಬ್ಬದ ದಿನದಂದು ವಿವಿಧ ತರಹದ ತಿಂಡಿ ತಿನಿಸುಗಳನ್ನು ತಯಾರು ಮಾಡಿ ತಿನ್ನುತ್ತಾ ಜೋಕಾಲಿ ಆಡಿ ನಲಿಯುತ್ತಿರುವುದು ನೋಡಲು ಒಂದು ಕ್ಷಣ ಆನಂದವೋ ಆನಂದ..
ಅದರಲ್ಲಂತೂ ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು ಬೆಲ್ಲದ ಹಾಲು, ಬಿಳಿ ಹಾಲು ಎಂದು ತವರು ಮನೆಯಲ್ಲಿ ಒಂದು ದಿನ ಹಾಗೂ ಗಂಡನ ಮನೆಯಲ್ಲಿ ಒಂದು ದಿನ ಹಾಲೆರೆಯುವ ವಾಡಿಕೆ ಮೊದಲಿನಿಂದಲೂ ಹಳ್ಳಿ ಪ್ರದೇಶಗಳಲ್ಲಿ ನಡೆದುಕೊಂಡು ಬಂದ ಸಂಪ್ರದಾಯ ಮತ್ತು ಪದ್ಧತಿ.
ಈ ಭಾರಿ ಕರ್ನಾಟಕ ರಾಜ್ಯ ಸೇರಿದಂತೆ ಯಾದಗಿರಿ ಜಿಲ್ಲೆಯ ಹಲವೆಡೆ ನಾಗರ ಪಂಚಮಿ ಹಬ್ಬದ ಸಡಗರ ಇದ್ದೂ ಇಲ್ಲದಂತಾಗಿದೆ.
ಬಹುಶಃ covid19 ನ ಕರಿನೆರಳು ನಾಗರ ಪಂಚಮಿಯ ಹಬ್ಬಕ್ಕೆ ಆವರಿಸಿದೆ
ನಾಗರಪಂಚಮಿ ಹಬ್ಬ ಎಂದರೆ ಅದರಲ್ಲೂ ಮಹಿಳೆಯರಲ್ಲಿ ಸಡಗರ-ಸಂಭ್ರಮ ಮತ್ತು ಉತ್ಸಾಹ ಕಂಡು ಬರುತ್ತಿತ್ತು, ಆದರೆ ಈ ಬಾರಿ covid19 ಜನರ ಖುಷಿಯನ್ನು ಕಸಿದುಕೊಂಡಿದೆ.
ಇತ್ತೀಚೆಗೆಕೊರೊನಾ ಸೋಂಕು ಹೆಚ್ಚಾಗಿರುವ ಕಾರಣ ಜನರ ಆತಂಕದ ಮಧ್ಯೆ ಶುಕ್ರವಾರ ನಾಗರಪಂಚಮಿಯ ಅಂಗವಾಗಿ ಯಾದಗಿರಿ ಜಿಲ್ಲೆಯ ನೂತನ ಹುಣಸಗಿ ತಾಲೂಕಿನ ದೇವಾಪುರ (ಜೆ) ಗ್ರಾಮದಲ್ಲಿ ಮಹಿಳೆಯರೆಲ್ಲರೂ ಸೇರಿ ನಾಗದೇವತೆಗೆ ಹಾಲೆರೆಯುವ ಮೂಲಕ ಅತ್ಯಂತ ಸರಳವಾಗಿ ಹಬ್ಬ ಆಚರಣೆ ಮಾಡುವುದು ಕಂಡುಬಂತು.
Be the first to comment