ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಿರಸೂರ ಗ್ರಾಮದಲ್ಲಿ ವಿವಿಧ ಕಾಮಗಾರಿಗಳ ಮತ್ತು ನವನಗರದ ವಾರ್ಡಸಂಖ್ಯೆ 20 ರಲ್ಲಿ ನೀರಿನ ಸಮಸ್ಯೆ ನಿವಾರಣೆಗಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕರಾದ ಡಾ.ವೀರಣ್ಣ ಚರಂತಿಮಠ ಉದ್ಘಾಟಿಸಿದರು.ಬಾಗಲಕೋಟೆಯ ಕಿರಸೂರ ಗ್ರಾಮದಲ್ಲಿ ಇಂದು 60 ಲಕ್ಷ ರೂ.ಗಳ 2.9 ಕಿಮಿ ರಸ್ತೆಯ ಡಾಂಬರೀಕರಣ , 5 ಲಕ್ಷ ರೂ ತೋಟದ ರಸ್ತೆ ಸುಧಾರಣೆ , ಆಶ್ರಯ ನಿವೇಶನ ಕಾಲೋನಿಯ ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ ಶಾಸಕ ಡಾ.ವೀರಣ್ಣ ಚರಂತಿಮಠ ರವರು ಚಾಲನೆ ನೀಡಿದರು. ವಿಧಾನ ಪರಿಷತ್ತಿನ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಗ್ರಾಮೀಣ ಘಟಕದ ಅಧ್ಯಕ್ಷ ಸುರೇಶ ಕೊಣ್ಣೂರ , ರಾಜು ಮುದೇನೂರ , ತಾಲ್ಲೂಕ ಪಂಚಾಯಿತಿಯ ಸದಸ್ಯರು , ಸರ್ಕಾರಿ ಅಧಿಕಾರಿಗಳು ಊರಿನ ಪ್ರಮುಖರು ಸೇರಿದಂತೆ ಎಲ್ಲ ಬಿಜೆಪಿ ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.
ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ.
ಬಾಗಲಕೋಟೆಯ ನವನಗರದ
ವಾರ್ಡ್ ಸಂಖ್ಯೆ 20 ರಲ್ಲಿ ಶಾಸಕರಾದ ಡಾ.ವೀರಣ್ಣ ಚರಂತಿಮಠ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಮಾಡಿದರು.
ಬಾಂಬೆ ಕಾಲೋನಿ ಕಾಮಗಾರಿ ಪೂಜೆ:
ಬಾಗಲಕೋಟೆ ನಗರದ ವಾರ್ಡ ಸಂಖ್ಯೆ 22 ರ ವಾಂಬೆ ಕಾಲೋನಿಯಲ್ಲಿ ಚರಂಡಿಗೆ ಸಿ.ಡಿ ನಿರ್ಮಾಣ, ಗಟಾರು ಹಾಗೂ ಸಿ.ಸಿ ರಸ್ತೆ ಕಾಮಗಾರಿಗೆ ಬಾಗಲಕೋಟೆಯ ಜನಪ್ರಿಯ ಶಾಸಕರಾದ ಡಾ ವೀರಣ್ಣಾ ಚರಂತಿಮಠರು ಭೂಮಿ ಪೂಜೆ ಕಾರ್ಯಕ್ರಮವನ್ನು ನೆರವೇರಿಸಿದರು.ಈ ಕಾರ್ಯಕ್ರಮದಲ್ಲಿ ವಿಧಾನಪರಿಷತ್ತಿನ ಮಾಜಿ ಸದಸ್ಯರಾದ ನಾರಾಯಣಸಾ ಭಾಂಡಗೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಜು ನಾಯ್ಕರ, ರಾಜು ರೇವಣಕರ, ನಗರ ಅಧ್ಯಕ್ಷರಾದ ಬಸವರಾಜ ಅವರಾದಿ ನಗರಸಭೆ ಸದಸ್ಯರಾದ ಶ್ರೀಮತಿ ಸೀಮಾ ಕೌಸರ್ ಪೀರಸಾಬ್ ನದಾಫ್ ಯವರು ಉಪಸ್ಥಿತರಿದ್ದರು.
Be the first to comment