ಬಾಗಲಕೋಟೆ: ನಾವು ವಾಸಿಸುತ್ತಿರುವ ಸುತ್ತ ಮುತ್ತಲಿನ ವಾತಾವರಣವೇ ನಮ್ಮ ಪರಿಸರ. ಮಾನವನ ಸಾಮಾಜಿಕ, ಮಾನಸಿಕ, ದೈಹಿಕ ಬೆಳವಣಿಗೆಗಳ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಸದಾ ಹಸಿರಾಗಿಡುವುದು ನಮ್ಮ ಹೊಣೆ. ಆದರೆ ಅದು ನಮ್ಮಿಂದ ಸಾಧ್ಯವಾಗದೆ ಹೋಗುತ್ತಿರುವುದು ಒಂದು ಶೋಚನೀಯ ಸಂಗತಿ.ಇಂಥಹ ಪರಿಸ್ಥಿತಿಯಲ್ಲಿ ಬಾಗಲಕೋಟೆ ನಗರದ ಪೊಲೀಸ್ ಕ್ವಾಟಸ್೯ ಹತ್ತಿರ ಇರುವ ಸುಮಾರು 3 ಎಕರೆಯಷ್ಟು ಹರಡಿರುವ ಸಶಸ್ತ್ರ ಮೀಸಲು ಪಡೆಯ ಬಂಜರು ಜಮೀನಿನಲ್ಲಿ ಪೋಲಿಸ್ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಭ ಜಗಾಲಸರ ನೇರ್ತೃತ್ವದಲ್ಲಿ ನೂರಾರು ಪ್ರಬೇಧಗಳ ಮರಗಿಡಗಳನ್ನು ಫೇಬ್ರುವರಿ 2020 ರಿಂದ ನೆಡಲು ಪ್ರಾರಂಭಿಸಿದ್ದಾರೆ.ಒಟ್ಟು ಸುಮಾರು 12000 ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದ್ದು ಸಿಬ್ಬಂದಿಯವರು ಮತ್ತು ಅವರ ಕುಟುಂಬದವರು ಪ್ರತಿ ದಿನ ನಡಿಗೆ ಮತ್ತು ವಿಶ್ರಾಂತಿ ಗಾಗಿ ಅಲ್ಲಿಗೆ ಹೋಗುತ್ತಿದ್ದಾರೆ.ಈ ಮೂಲಕ ಪೊಲೀಸ್ ಇಲಾಖೆ ಪರಿಸರ ರಕ್ಷಣೆಯಲ್ಲು ಮುಂದಾಗಿದ್ದು ಪರಿಸರ ಪ್ರೇಮಿ ರೈತರ ಸೇವೆಗೆ ಹಸಿರು ತೋರಣ ಕಟ್ಟಿ, ಇಡೀ ಅರಣ್ಯ ತನ್ನ ಮೌನ ಭಾಷೆಯಲ್ಲೇ ಸ್ಮರಿಸುತ್ತಿರುವಂತೆ ಎಲ್ಲರ ಗಮನ ಸೆಳೆಯುವಂತಾಗಿದೆ.
Be the first to comment